Get Updates
Get notified of breaking news, exclusive insights, and must-see stories!

ಮತ್ತೆ ಭೂಕಂಪದ ಭಯ, ಶಾಲಾ ಕಾಲೇಜುಗಳಿಗೆಸ್ವ ಘೋಷಿತ ರಜೆ

ಬೆಂಗಳೂರು : ಸೋಮವಾರ ಮಧ್ಯಾಹ್ನ ನಗರದಲ್ಲಿ ಮತ್ತೊಂದು ಭೂಕಂಪ ಸಂಭವಿಸಬಹುದು ಎನ್ನುವ ವದಂತಿ ದಟ್ಟವಾಗಿ ಹಬ್ಬುತ್ತಿದ್ದು , ಅನೇಕ ಶಾಲಾ ಕಾಲೇಜುಗಳು ಮುಂಜಾಗರೂಕತೆಯ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿ-ತ ರಜೆ ಘೋಷಿಸಿವೆ.

ಹವಾಮಾನ ಇಲಾಖೆಯ ರಿಕ್ಟರ್‌ ಮಾಪಕ ಬೆಂಗಳೂರಿನಲ್ಲಿ ಸಂಭವಿಸಿದ ತೀವ್ರತೆಯನ್ನು 4.3 ಎಂದು ದಾಖಲಿಸಿದೆಯೆಂದು ಹವಾಮಾನ ಇಲಾಖೆಯ ನಿರ್ದೇಶಕ ಎ.ಎಲ್‌. ಕೊಪ್ಪರ್‌ ತಿಳಿಸಿದ್ದಾರೆ. ಆದರೆ, ಈ ಭೂಕಂಪಕ್ಕೂ, ಗುಜರಾತ್‌ನ ಭೂಕಂಪಕ್ಕೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಜೀವ ಬಾಯಿಗೇ ಬಂತೂರಿ. ಸೋಮವಾರ ಬೆಳಿಗ್ಗೆ ಬೆಂಗಳೂರಿನ ನಾಲ್ಲೂ ಮೂಲೆಗಳಲ್ಲಿ ಸಂಭವಿಸಿದ ಲಘು ಭೂಕಂಪದ ಅನುಭವವನ್ನು ಜನ ಬಣ್ಣಿಸುತ್ತಿರುವುದು ಹೀಗೆ. ಬಹುಮಹಡಿ ಕಟ್ಟಡಗಳಿಂದ ಭಯಗ್ರಸ್ತ ಜನತೆ ಬೀದಿಗೆ ಓಡಿ ಬಂದಿದ್ದಾರೆ. ಅನೇಕ ಕಟ್ಟಡಗಳ ಕಿಟಕಿ ಸರಳುಗಳು ದೊಡ್ಡ ಶಬ್ದದಿಂದ ಕಂಪಿಸಿದವು, ಜೋಡಿಸಿಟ್ಟಿದ್ದ ಪಾತ್ರೆಗಳು ದಡಬಡ ಸದ್ದು ಮಾಡಿದವು ಎಂದು ಭೂಕಂಪದ ತೀವ್ರತೆ ಅನುಭವಿಸಿದವರು ಹೇಳುತ್ತಿದ್ದಾರೆ.

ಹಾಜರಾತಿ ಕಡಿಮೆ : ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲೂ ಹಾಜರಾತಿ ಮಾಮೂಲಿಗಿಂತ ಕಡಿಮೆಯಿರುವುದು ಕಂಡುಬಂದಿದೆ. ಅನೇಕರು ಕುಟುಂಬದೊಂದಿಗೆ ಇರುವ ಉದ್ದೇಶದಿಂದ ದೂರವಾಣಿ ಮೂಲಕವೇ ಕಚೇರಿಗೆ ರಜೆ ತಿಳಿಸಿದ್ದಾರೆ. ಬೆಂಗಳೂರಿನ ಕೆಲವು ಭಾಗಗಳಲ್ಲಿ ಭೂಕಂಪ ಸಂಭವಿಸಿರುವುದನ್ನು ಖಚಿತಪಡಿಸಿರುವ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಸಿ. ದಿನಕರ್‌, ಯಾವುದೇ ಆಸ್ತಿ - ಜೀವ ಹಾನಿಯ ವರದಿಗಳು ಬಂದಿಲ್ಲ ಎಂದಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+