ರಾಜ್ಯದಿಂದ ಗುಜರಾತ್‌ಗೆ ಒಟ್ಟು 34 ಮಂದಿ ವೈದ್ಯರ ತಂಡ
ಬೆಂಗಳೂರು : ಭೂಕಂಪದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಗುಜರಾತ್‌ನಲ್ಲಿ ಗಾಯಾಳುಗಳನ್ನು ಉಪಚರಿಸಲು ಔಷಧಗಳ ಕೊರತೆಯ ಜತೆಗೆ ವೈದ್ಯರ ಕೊರತೆಯೂ ಹೆಚ್ಚುತ್ತಿದೆ. 70 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಸೂಕ್ತ ಸಮಯದಲ್ಲಿ ವೈದ್ಯರ ನೆರವು ದೊರಕದಾಗಿದೆ. ಇದನ್ನು ಮನಗಂಡ ರಾಜ್ಯ ಸರಕಾರ ಸೋಮವಾರ ಸಹ 13 ಜನ ವೈದ್ಯರ ತಂಡವನ್ನು ಗುಜರಾತ್‌ಗೆ ಕಳುಹಿಸಿದೆ.
ಈ ವಿಷಯವನ್ನು ರಾಜ್ಯ ಆರೋಗ್ಯ ಸಚಿವ ಡಾ. ಮಾಲಕರೆಡ್ಡಿ ತಿಳಿಸಿದ್ದಾರೆ. ಗುಜರಾತ್ ಸಂತ್ರಸ್ತರ ನೆರವಿಗಾಗಿ ಶನಿವಾರವೇ 9 ಜನ ವೈದ್ಯರು ಹಾಗೂ ಔಷಧಗಳನ್ನು ಕಳುಹಿಸಲಾಗಿತ್ತು. ಭಾನುವಾರದ ವಿಶೇಷ ರೈಲಿನಲ್ಲಿ ಕೂಡ ಔಷಧ ಸಾಮಗ್ರಿ ಕಳುಹಿಸಲಾಗಿದೆ, ಅಲ್ಲದೆ 12 ಜನ ಮೂಳೆ ತಜ್ಞರ ತಂಡ ಗುಜರಾತ್‌ಗೆ ತೆರಳಿತು. ಇಂದು ಕೂಡ 13 ಜನ ವೈದ್ಯರೊಂದಿಗೆ ಔಷಧಗಳು ಹಾಗೂ ಅಗತ್ಯ ವೈದ್ಯಕೀಯ ಉಪಕರಣ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಪೋಲಿಯೋ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈವರೆಗೆ ರಾಜ್ಯದಿಂದ 16 ಲಕ್ಷ ರುಪಾಯಿ ಮೌಲ್ಯದ ಔಷಧಗಳನ್ನು ಕಳುಹಿಸಲಾಗಿದೆ ಎಂದರು.
ಹ್ಯಾಲೋಜನ್ ಸರಬರಾಜು : ಗುಜರಾತ್ ಭೂಕಂಪದಲ್ಲಿ ಬದುಕುಳಿದಿರುವ ಮಂದಿ ಶುದ್ಧ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಈ ಎಲ್ಲರಿಗೂ ಶುದ್ಧ ನೀರು ಒದಗಿಸುವುದು ಸಾಧ್ಯವಿಲ್ಲ. ಆದಕ್ಕಾಗೇ ನೀರನ್ನು ಸ್ವಚ್ಛಗೊಳಿಸುವ ಹ್ಯಾಲೋಜನ್ ಔಷಧವನ್ನು ರಾಜ್ಯದಿಂದ ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಬೆಳಗಾವಿ ವರದಿ : ಬೆಳಗಾವಿ ಜಿಲ್ಲಾಡಳಿತ ಸಹ ಗುಜರಾತ್ ಸಂತ್ರಸ್ತರ ನೆರವಿಗೆ ಬಂದಿದ್ದು ಕಂಬಳಿಗಳೂ ಸೇರಿದಂತೆ ಸುಮಾರು 15 ಲಕ್ಷ ರುಪಾಯಿಗಳ ನೆರವು ಸಾಮಗ್ರಿಯನ್ನು ಗುಜರಾತ್‌ಗೆ ಕಳುಹಿಸಿದೆ.
(ಇಂಡಿಯಾ ಇನ್‌ಫೋ ವರದಿ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications