Get Updates
Get notified of breaking news, exclusive insights, and must-see stories!

ದಲಿತ ಕವಿ ಸಿದ್ಧಲಿಂಗಯ್ಯ ಅವರಿಗೆ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ

ಮಂಗಳೂರು : ದಲಿತ ಕವಿ ಸಿದ್ದಲಿಂಗಯ್ಯ ಅವರಿಗೆ ಸಂದೇಶ ಪ್ರತಿಷ್ಠಾನ , ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಿದೆ.

ಸಂದೇಶ ಪ್ರತಿಷ್ಠಾನದ ಹತ್ತನೇ ವರ್ಷದ ಸಂದೇಶ ಮಾಧ್ಯಮ ಪ್ರಶಸ್ತಿಗಳನ್ನು ಮಂಗಳೂರಿನಲ್ಲಿ ಶನಿವಾರ ಪ್ರತಿಷ್ಠಾನದ ನಿರ್ದೇಶಕ ಡೆವಿಸ್‌ ಡೇಸಾ ಪ್ರಕಟಿಸಿದರು. ಬೆಳಗಾವಿಯ ಮಲ್ಲವ್ವ ಮೇಗೇರಿ ಅವರಿಗೆ ಸಂದೇಶ ಕಲಾ ಪ್ರಶಸ್ತಿ, ಮಂಗಳೂರಿನ ಅಭಿವ್ಯಕ್ತಿ ರಂಗಭೂಮಿ ತಂಡಕ್ಕೆ ಸಂದೇಶ ಮಾಧ್ಯಮ ಶಿಕ್ಷಣ ಪ್ರಶಸ್ತಿ, ಮಂಗಳೂರಿನ ಕೆ.ಎನ್‌. ಟೇಲರ್‌ಗೆ ಸಂದೇಶ ತುಳು ಸಾಹಿತ್ಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಜೆ.ಬಿ. ಮೊರಾಯಿಸ್‌ರಿಗೆ ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ , ಉದಯ ಟಿವಿ ದೈನಿಕ ಧಾರಾವಾಹಿ ಪಾರ್ವತಿಯ ನಿರ್ದೇಶಕ ಎಸ್‌. ನಾರಾಯಣ್‌ ಅವರಿಗೆ ಸಂದೇಶ ಟೆಲಿವಿಷನ್‌ ಪ್ರಶಸ್ತಿ , ಬೆಂಗಳೂರಿನ ನೇಮಿಚಂದ್ರ, ಮಂಗಳೂರಿನ ಒಲವಿನ ಹಳ್ಳಿ ಪುನರ್‌ನಿವೇಶನ ಕೇಂದ್ರ, ಸಾಗರದ ಗ್ರಾಮಾಂತರ ಸಮುದಾಯ ಕೇಂದ್ರ, ವಿಜ್ಞಾನ ಕೇಂದ್ರ, ಮಂಚಿ ಶಾಸಕ, ಕವಿ, ಬಿ.ಎಂ. ಇದಿನಬ್ಬ, ಮೈಸೂರಿನ ಯೋಗಾನರಸಿಂಹ ಪ್ರಶಸ್ತಿ ಗಿಟ್ಟಿಸಲಿರುವ ಇತರರು.

ಪ್ರಶಸ್ತಿ 10 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ. ಸಂದೇಶ ವಿಶೇಷ ಪ್ರಶಸ್ತಿ 15 ಸಾವಿರ ರೂಪಾಯಿ ನಗದು , ಪಲಕ ಮತ್ತು ಸ್ಮರಣಿಕೆಯನ್ನು ಹೊಂದಿರುತ್ತದೆ. ಮಂಗಳೂರಿನ ಬಜ್ಜೋಡಿಯಲ್ಲಿರುವ ಸಂದೇಶ ಸದನದಲ್ಲಿ ಫೆಬ್ರವರಿ 23ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. (ಮಂಗಳೂರು ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+