ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್‌ನೊಳಗೆ ಪಶ್ಚಿಮ ಕರಾವಳಿಯಲ್ಲಿ ಭಾರಿ ಭೂಕಂಪ ಸಾಧ್ಯತೆ

By Staff
|
Google Oneindia Kannada News

ನವದೆಹಲಿ : ಶು-ಕ್ರ-ವಾ-ರ-ದ ಭೀಕರ ಭೂಕಂ-ಪ- ಕೇಂದ್ರ- ಸ್ಥಾನವಾದ ಭುಜ್‌-ನ-ಲ್ಲಿ ಇನ್ನೂ ಕೆಲ-ವು ಭೂಕಂ-ಪ-ಗ-ಳು ಸಂಭ-ವಿ-ಸು-ವ ಸಾಧ್ಯ-ತೆ-ಯಿ-ದೆ ಎಂದು ಭಾರ-ತೀ-ಯ ಭೂಗ-ರ್ಭಶಾಸ್ತ್ರ ಇಲಾ-ಖೆ-ಯ ಉಪ ಮಹಾನಿರ್ದೇ-ಶ-ಕ ಎಸ್‌.ಎನ್‌. -ಭ-ಟ್ಟಾ-ಚಾ-ರ್ಯ ಹೇಳಿ-ರುವ ಬೆನ್ನಲ್ಲೇ ದೇಶದ ಪಶ್ಚಿಮ ಕರಾವಳಿಯಲ್ಲಿ ಏಪ್ರಿಲ್‌ ತಿಂಗಳೊಳಗೆ ಮತ್ತೊಂದು ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಂಡಮಾನ್‌ ನಿಕೋಬಾರ್‌ ದ್ವೀಪಗಳು, ಗುಜರಾತ್‌, ಕೇರಳ ಮತ್ತು ಕೊಂಕಣ ಭಾಗವೂ ಸೇರಿದಂತೆ ಪಶ್ಚಿಮ ಕರಾವಳಿಯಲ್ಲಿ ಹಾಗೂ ಈಶಾನ್ಯ ಭಾರತದಲ್ಲಿ ಮತ್ತೊಂದು ಭೂಕಂಪ ಅಪ್ಪಳಿಸಲಿದೆ ಎಂದು ಗುಜರಾತ್‌ ಭೂಕಂಪದ ಬಗ್ಗೆ ಮುನ್ಸೂಚನೆ ನೀಡಿದ್ದ ಜವಾಹರಲಾಲ್‌ ವಿಶ್ವವಿದ್ಯಾಲಯದ ಪರಿಸರ ವಿಭಾಗದ ಪ್ರಾಧ್ಯಾಪಕರಾದ ಖ್ಯಾತ ವಿಜ್ಞಾನಿ ಡಾ. ಸೌಮಿತ್ರಾ ಮುಖರ್ಜಿ ಹೇಳಿದ್ದಾರೆ.

ಗುಜರಾತ್‌ನ ಬರ ಪರಿಸ್ಥಿತಿ ಹಾಗೂ ಭೂಕಂಪದ ಬಗ್ಗೆ ಅಧ್ಯಯನ ನಡೆಸಿರುವ ಅವರು, ಭಾರಿ ಹಾಗೂ ಬೃಹತ್‌ ಅಣೆಕಟ್ಟೆಗಳನ್ನು ನಿರ್ಮಾಣ ಮಾಡುವ ಮುನ್ನ ಯಾವುದೇ ಪೂರ್ವಾಗ್ರಹ ಇಲ್ಲದೆ ಪುನರ್ಪರಿಶೀಲನೆ ನಡೆಸಬೇಕು ಎಂಬ ಕಿವಿ ಮಾತೂ ಹೇಳಿದ್ದಾರೆ. ರಾಷ್ಟ್ರದ ಐದು ಭೂಕಂಪ ಭೀತಿಯ ವಲಯಗಳಲ್ಲಿ ದೆಹಲಿ ಹಾಗೂ ಜಬಲ್ಪುರಗಳೂ ಸೇರುವ ಸಾಧ್ಯತೆ ಇದೆ ಎಂಬ ಸುಳಿವನ್ನೂ ನೀಡಿದ್ದಾರೆ.

ಭುಜ್‌ ಭೂಕಂಪದ ಬಗ್ಗೆ ಸುಳಿವು ಸಿಕ್ಕಿತ್ತೇ? : 17 ಸಾವಿರಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡ ಭೀಕರ ಭುಜ್‌ ಭೂಕಂಪದ ಬಗ್ಗೆ ಮೊದಲೇ ಸರಕಾರಕ್ಕೆ ತಿಳಿದಿತ್ತೇ? ಹೌದೆನ್ನುತ್ತದೆ ಈ ವರಿದೆ. ಗುಜರಾತ್‌ನ ಭೂಕಂಪದ ಸಾಧ್ಯತೆಗಳ ಬಗ್ಗೆ ತಾವು ಕಳೆದ ಅಕ್ಟೋಬರ್‌ ತಿಂಗಳಿನಲ್ಲೇ ಸರಕಾರಕ್ಕೆ ಮುನ್ಸೂಚನೆ ನೀಡಿದ್ದಾಗಿ ಡಾ. ಸೌಮಿತ್ರಾ ಮುಖರ್ಜಿ ಹೇಳಿದ್ದಾರೆ. ಈ ಸಂಬಂಧದ ವರದಿ ಜರ್ನಲ್‌ ಆಫ್‌ ಇಂಡಿಯನ್‌ ಸೊಸೈಟಿ ಆಫ್‌ ರಿಮೋಟ್‌ ಸೆನ್ಸಿಂಗ್‌ನಲ್ಲಿ ಪ್ರಕಟವಾಗಿತ್ತು ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X