ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಮಾನ - ಸಮ್ಮಾನ ನಿಮಗಾಗಿ ಕಾದಿದೆ. ಗುರುಕೃಪೆಯಿಂದ ಕರ್ತೃತ್ವ ಶಕ್ತಿ ಹೆಚ್ಚಲಿದೆ. ಕಲೆ, ಸಾಹಿತ್ಯ, ತಂತ್ರಜ್ಞಾನದ ಕ್ಷೇತ್ರದಲ್ಲಿ ಪ್ರಗತಿ.ವೃಷಭ :ನಿಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿದರೆ, ಯಶಸ್ಸಿನ ಹಾದಿಯಲ್ಲಿ ಮುಳ್ಳುಗಳಿಲ್ಲ. ಬೇಜವಾಬ್ದಾರಿ ನಿಮಗೇ ಮುಳುವಾದೀತು ಎಚ್ಚರ.
ಮಿಥುನ : ಸಂಯಮವೇ ನಿಮ್ಮ ನೆರವಿಗೆ ಬರುವ ಏಕೈಕ ಸಾಧನ. ರಹಸ್ಯ ಕಾಪಾಡಿಕೊಳ್ಳದಿದ್ದರೆ ನಿಮಗೇ ಆಪತ್ತು. ಭಾಗ್ಯ ಸ್ಥಾನದಲ್ಲಿ ಬುಧನ ನೆರವಿದೆ. ಧೈರ್ಯದಿಂದ ಹೆಜ್ಜೆ ಇಡಿ.
ಕಟಕ : ಇಂದಂತೂ ನಿಮಗೆ ಆನಂದ ಇಲ್ಲ. ಮೈ- ಕೈ ನೋವಿನ ವಿನಾ ಮತ್ತೇನೂ ಇಲ್ಲ. ಬಂಧು ಮಿತ್ರರ ಆಗಮನದಿಂದ ಕಿರಿಕಿರಿ.
ಸಿಂಹ : ಮನೆ ಕಟ್ಟುವ ನಿಮ್ಮ ಆಸೆ ಈಡೇರುವ ದಿನ. ಸಾಹಿತ್ಯ, ಕಲೆ, ವಿಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಪ್ರಗತಿ. ಆರೋಗ್ಯ ನಿರ್ಲಕ್ಷಿಸಿದರೆ ಅಪಾಯ.
ಕನ್ಯಾ : ಪಂಚಮ ಸ್ಥಾನದಲ್ಲಿ ರವಿಯು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದ್ದಾನೆ. ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಖ್ಯಾತಿ ಬರಲಿದೆ. ಹೆಣ್ಣುಮಕ್ಕಳಿಗೆ ಶುಭದಿನ.
ತುಲಾ : ಚಿಕ್ಕ ಸಮಸ್ಯೆಗಳೇ ದೊಡ್ಡದಾಗಿ ಕಾಡಲಿವೆ. ಕುಲದೇವರ ಪ್ರಾರ್ಥನೆಯಿಂದ ಬೆಟ್ಟದಂತೆ ಬಂದ ಕಷ್ಟ ಮಂಜಿನಂತೆ ಕರಗುತ್ತದೆ.
ವೃಶ್ಚಿಕ : ಸ್ವಪ್ರಯತ್ನದಿಂದ ಮೇಲೇರಲು ಇದು ಸೂಕ್ತ ಕಾಲ. ಧೈರ್ಯವೇ ಸರ್ವತ್ರ ಸಾಧನ. ತಜ್ಞರ ಸಲಹೆಯಿಂದ ಉತ್ತರೋತ್ತರ ಅಭಿವೃದ್ಧಿ.
ಧನಸ್ಸು :ಸರಳ, ಸಜ್ಜನಿಕೆ ಬಿಟ್ಟರೆ ಅಪಾಯ. ಗುರು - ಹಿರಿಯರ ಬಗ್ಗೆ ಭಕ್ತಿ ಇರಲಿ. ಪ್ರತಿಷ್ಠೆಗೆ ಮಾರುಹೋಗಿ ಕರ್ತವ್ಯ ಮರೆಯಬೇಡಿ. ವ್ಯಾಪಾರದಲ್ಲಿ ಲಾಭ.
ಮಕರ : ವಿಶ್ರಾಂತಿಗೆ ಮನಸ್ಸು ಹಾತೊರೆಯುತ್ತಿದೆ. ಆದರೆ ಆ ಯೋಗ ನಿಮಗಿಲ್ಲ. ಅಭ್ಯಾಗತರ ಆಗಮನದಿಂದ ಕಿರಿಕಿರಿ. ರಾಹು - ಕೇತು ಪ್ರಭಾವದಿಂದ ಓಡಾಟ ಹೆಚ್ಚುತ್ತದೆ.
ಕುಂಭ : ಮಂಗಳನ ಪ್ರಭಾವದಿಂದ ಯಶಸ್ಸು. ಮಾನಸಿಕ ಒತ್ತಡವೂ ಕಡಿಮೆ ಆಗಲಿದೆ. ಆದರೂ, ನಿರ್ಣಾಯಕ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ನೀವಿಲ್ಲ.
ಮೀನ : ಗುರು ಕೃಪೆಯಿಂದ ನಿಮ್ಮ ಸಾಧನೆಯ ಹಾದಿಯಲ್ಲಿ ವೇಗವಿದೆ. ಹೊಸ ಕ್ಷೇತ್ರದ ಪ್ರವೇಶಕ್ಕೆ ಸಕಾಲ. ಆರ್ಥಿಕ ಸಮಸ್ಯೆಯಿಂದ ಬಿಡುಗಡೆ. ಹೊಸ ವಸ್ತು ಖರೀದಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications