ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕಟಾ ಚೆಲುವೆ ಸೆಲಿನಾಗೆ ಫೆಮಿನಾ ಮಿಸ್‌ ಇಂಡಿಯಾ ಕಿರೀಟ

By Staff
|
Google Oneindia Kannada News

ಮುಂಬಯಿ : ಜಗಮಗಿಸುವ ಬೆಳಕು ಮಿಸ್‌ ಇಂಡಿಯಾ ಕಿರೀಟದ ಮೇಲೆ ಪ್ರತಿಫಲಿಸಿದಾಗ ಸಭಿಕರ ಕಣ್ಣುಗಳು ಎರಡು ಸೆಕೆಂಡುಗಳ ಕಾಲ ಕೋರೈಸಿದವು. ಕರತಾಡನ ಮುಗಿಲು ಮುಟ್ಟಿತು, ಭಾರತ ರಾಣಿಯನ್ನು ವೇದಿಕೆಗೆ ಕರೆತಂದಿತು. ಕೋಲ್ಕಟಾದ ಸೆಲಿನಾ ಜೈಟ್ಲಿ , ಫೆಮಿನಾ ಮಿಸ್‌ ಇಂಡಿಯಾ ಯೂನಿವರ್ಸ್‌-2001 ಆಗಿ ಶನಿವಾರ ರಾತ್ರಿ 11.10ಕ್ಕೆ ಆಯ್ಕೆ ಆದರು.

ತಜ್ಞರ ಪ್ರಶ್ನೆಗಳ ಸುರಿಮಳೆಗೆ ಹಲವು ಸುತ್ತುಗಳಲ್ಲಿ ಪ್ರಾಮಾಣಿಕ ಹಾಗೂ ಮೆಚ್ಚುಗೆಯ ಉತ್ತರ ನೀಡಿದ ಕೋಲ್ಕಟಾದ ಈ ಚೆಲುವೆ, ಬೆಂಗಳೂರಿನ ಸಾರಾ ಮತ್ತು ಚೆನ್ನೈಯ ಮಹೇಶ್ವರಿ ಅವರನ್ನು ತೀವ್ರ ಸ್ಪರ್ಧೆಯಲ್ಲಿ ಹಿಮ್ಮೆಟ್ಟಿಸಿದರು. 34-24-35ರ ಅಂಗಸೌಷ್ಟವ, 52 ಕೆ.ಜಿ. ತೂಕ, 5 ಅಡಿ 6 ಇಂಚು ಎತ್ತರದ 21 ವರ್ಷದ ಸೆಲಿನಾ - ಬಿಕಾಂ ಪದವೀಧರೆ. ಈಕೆಗೆ ಪೈಲಟ್‌ ಆಗಬೇಕೆಂಬ ಆಸೆ. ಸಂದರ್ಶಕರ ನೂಕು ನುಗ್ಗಲಿನೆಡೆಯಲ್ಲಿ ತೂರಿ ಬರುವ ಪ್ರಶ್ನೆಯನ್ನು ಆಯ್ದುಕೊಂಡು ನೀಡಿದ ಉತ್ತರದಲ್ಲಿ ಈ ಆಕಾಂಕ್ಷೆ ಪ್ರಕಟ.

ಶನಿವಾರ ಬೆಳಿಗ್ಗೆ 15 ಮಂದಿ ಸುಂದರಿಯರು ಕೊನೆಯ ಸುತ್ತಿನ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಸೆಲಿನಾ ಎಲ್ಲರನ್ನೂ ದಾಟಿಕೊಂಡು ಕಿರೀಟವನ್ನು ಮುಡಿಗೇರಿಸಿಕೊಂಡರು. ರಾಷ್ಟ್ರ, ವಿಶ್ವ ಸುಂದರಿಯರೆಂದು ಗುರುತಿಸಿಕೊಂಡ ಮಿಸ್‌ಗಳ ದಂಡು ಅಲ್ಲಿಗೆ ಬಂದಿತ್ತು. ಪ್ರಿಯಾಂಕಾ ಚೋಪ್ರಾ, ಲಾರಾ ದತ್ತಾ, ದಿವ್ಯ ಮಿರ್ಜಾ, ಕಿರೀಟದಾಕಾರದ ಕ್ರೇನ್‌ನಲ್ಲಿ ವೇದಿಕೆಗೆ ಬಂದಿಳಿದು ಸೆಲಿನಾರಿಗೆ ಕಿರೀಟ ತೊಡಿಸಿದರು.

ಹೃತಿಕ್‌ ರೋಷನ್‌, ಸೌರವ್‌ ಗಂಗೂಲಿ, ಶರ್ಮಿಳಾ ಟಾಗೋರ್‌, ರವೀನಾ ಟಂಡನ್‌ ಟಬು ಮತ್ತು ಡೈಯಾನಾ ಹೇಡನ್‌ ತೀರ್ಪುಗಾರರ ಪೀಠದಲ್ಲಿದ್ದರು. ಅಂತರ ರಾಷ್ಟ್ರೀಯ ತೀರ್ಪುಗಾರರಾಗಿ ಬಂದಿದ್ದ ಅಜಾರೋ ಬ್ರಾಂಡ್‌ ಪರ್‌ಫ್ಯೂಮ್‌ನ ಲಾರಿ ಅಜಾರೋ, ಕ್ಲಾರಿಸ್‌ ಇನ್‌ ಪಾರಿಸ್‌ನ ಕ್ರಿಸ್ಟಿಯನ್‌ ಕ್ಲಾರಿಸ್‌ನಂತಹ ಗಣ್ಯರು ಸೆಲಿನಾರನ್ನು ಅಭಿನಂದಿಸಿದರು.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X