ಭುಜ್‌ಗೆ ತೆರಳಿದ್ದ ಕರ್ನಾಟಕದ ಎಲ್ಲಾ 24 ವಿದ್ಯಾರ್ಥಿಗಳು ಕ್ಷೇಮ
ಬೆಂಗಳೂರು : ಭೂಕಂಪದ ಕೆನ್ನಾಲಗೆಗೆ ತುತ್ತಾಗಿರುವ ಭುಜ್ ಜಿಲ್ಲೆಗೆ ಪ್ರವಾಸಕ್ಕೆ ಹೋಗಿದ್ದ ನಗರದ ಸೃಷ್ಟಿ ವಿನ್ಯಾಸ ಮತ್ತು ತಂತ್ರಜ್ಞಾನ ಶಾಲೆಯ 24 ವಿದ್ಯಾರ್ಥಿಗಳು ಕ್ಷೇಮವಾಗಿದ್ದು , ಭಾನುವಾರ ಬೆಳಿಗ್ಗಿನ ಹೊತ್ತಿಗೆ ಬೆಂಗಳೂರಿಗೆ ವಾಪಸ್ಸಾಗುವರು.
ಪ್ರಸ್ತುತ , ಕರ್ನಾಟಕದ ವಿದ್ಯಾರ್ಥಿಗಳು ಗುಜರಾತ್‌ನ ಅಂಜರ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಎಲ್ಲಾ 24 ವಿದ್ಯಾರ್ಥಿಗಳು ಹಾಗೂ ಅವರೊಂದಿಗೆ ತೆರಳಿದ್ದ ಮೂವರು ಮಾರ್ಗದರ್ಶಕರು ಕ್ಷೇಮವಾಗಿದ್ದಾರೆಂದು ಅಂಜರ್‌ನ ಸ್ವಯಂ ಸೇವಾ ಸಂಸ್ಥೆಯಾಂದು ಸೃಷ್ಟಿ ಶಾಲೆಯ ಆಡಳಿತಾಧಿಕಾರಿಗಳಿಗೆ ಸಂದೇಶ ಕಳುಹಿಸಿದೆ.
ಗೀತಾ ಸೇಟ್ ಎನ್ನುವವರು ನಡೆಸುತ್ತಿರುವ ಮಹಿಳಾ ಸಂಘಟನೆಯಿಂದ ವಿದ್ಯಾರ್ಥಿಗಳ ಕ್ಷೇಮ ಸಮಾಚಾರದ ಬಗ್ಗೆ ಶಾಲೆಗೆ ಶನಿವಾರ ಸಂದೇಶ ಬಂದಿದೆ ಎಂದು ಶಾಲಾ ಆಡಳಿತಾಧಿಕಾರಿ ಜಿ. ಆನಂದ್ ತಿಳಿಸಿದ್ದಾರೆ. ಇದರಿಂದಾಗಿ ಮಕ್ಕಳ ಕ್ಷೇಮದ ಬಗ್ಗೆ ಪೋಷಕರಿಗಿದ್ದ ಆತಂಕ ಕೊನೆಯಾಗಿದೆ.
ಡಿಸೆಂಬರ್ 12 ರಂದು ಶೈಕ್ಷಣಿಕ ಪ್ರವಾಸಕ್ಕಾಗಿ ಗುಜರಾತ್‌ಗೆ ತೆರಳಿದ್ದ ವಿದ್ಯಾರ್ಥಿಗಳು, ನಿಗದಿತ ಕಾರ್ಯಕ್ರಮದಂತೆ ಶುಕ್ರವಾರ(ಜ.27) ಮುಂಜಾನೆ ಭುಜ್ ನಗರಕ್ಕೆ ತಲುಪಿ, ಅದೇ ಸಂಜೆ ಅಲ್ಲಿಂದ ರೈಲಿನಲ್ಲಿ ಅಲಹಾಬಾದಿಗೆ ಹೋಗುವ ಕಾರ್ಯಕ್ರಮವಿತ್ತು. ಶುಕ್ರವಾರ ಭೂಕಂಪ ಸಂಭವಿಸುವ ಮುನ್ನ ಕೆಲ ಮಕ್ಕಳು ಪೋಷಕರನ್ನು ದೂರವಾಣಿ ಮೂಲಕ ಮಾತನಾಡಿಸಿದ್ದರು. ಆದರೆ ಅದಾದ ನಂತರ ಶಾಲೆಗಾಗಲೀ, ಪೋಷಕರಿಗಾಗಿ ಮಕ್ಕಳ ವರ್ತಮಾನ ಗೊತ್ತಾಗದೆ ಆತಂಕದ ಸ್ಥಿತಿ ಸೃಷ್ಟಿಯಾಗಿತ್ತು .
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications