ಭುಜ್‌ನಲ್ಲಿರುವ ಬೆಂಗಳೂರಿನ 23 ಮಕ್ಕಳ ಬಗ್ಗೆ ಏನೂ ತಿಳಿದಿಲ್ಲ
ಬೆಂಗಳೂರು : ಭೂಕಂಪದ ಕೆನ್ನಾಲಗೆಗೆ ತುತ್ತಾಗಿರುವ ಭುಜ್ ಜಿಲ್ಲೆಗೆ ಪ್ರವಾಸಕ್ಕೆ ಹೋಗಿರುವ ನಗರದ ಮಲ್ಯ ಅದಿತಿ ಇಂಟರ್‌ನ್ಯಾಷನಲ್ ಶಾಲೆಯ 24 ವಿದ್ಯಾರ್ಥಿಗಳ ಬಗೆಗೆ ಶುಕ್ರವಾರ ಮುಂಜಾನೆಯಿಂದ ಯಾವುದೇ ಸಮಾಚಾರ ಸಿಗದೆ, ಅಪ್ಪ ಅಮ್ಮಂದಿರು ಕಳವಳದಿಂದಿದ್ದಾರೆ.
ಶಾಲೆಯ ಸೃಷ್ಟಿ ಡಿಸೈನ್ ಸೆಂಟರ್‌ನ ಮಕ್ಕಳು ಮೂವರು ಉಪನ್ಯಾಸಕರ ಜತೆಯಲ್ಲಿ ಕಳೆದ ಜನವರಿ 12ರಂದು ಪ್ರವಾಸ ಹೋಗಿದ್ದರು. ನಿಗದಿತ ಕಾರ್ಯಕ್ರಮದಂತೆ ಶುಕ್ರವಾರ ಮುಂಜಾನೆ ಭುಜ್ ನಗರಕ್ಕೆ ತಲುಪಿ, ಅದೇ ಸಂಜೆ ಅಲ್ಲಿಂದ ರೈಲಿನಲ್ಲಿ ಅಲಹಾಬಾದಿಗೆ ಹೋಗುವ ಕಾರ್ಯಕ್ರಮವಿತ್ತು. ಗುರುವಾರ ಹಾಗೂ ಶುಕ್ರವಾರ ಭೂಕಂಪ ಸಂಭವಿಸುವ ಮುನ್ನ ಕೆಲ ಮಕ್ಕಳು ಪೋಷಕರನ್ನು ದೂರವಾಣಿ ಮೂಲಕ ಮಾತನಾಡಿಸಿದ್ದರು. ಆದರೆ ಅದಾದ ನಂತರ ಶಾಲೆಗಾಗಲೀ, ಯಾವುದೇ ಪೋಷಕರಿಗಾಗಿ ಮಕ್ಕಳ ವರ್ತಮಾನ ಗೊತ್ತಾಗಿಲ್ಲ.
ಶಾಲೆಗೆ ಪೋಷಕರು ಎಡತಾಕುತ್ತಿರುವುದು ಸಾಮಾನ್ಯವಾಗಿದ್ದು, ಶಾಲಾ ಸಿಬ್ಬಂದಿಯಲ್ಲೂ ಆತಂಕ ಮನೆ ಮಾಡಿದೆ ಪ್ರವಾಸಿ ತಂಡದಲ್ಲಿ ಬೆಂಗಳೂರಿನ ಮಕ್ಕಳಲ್ಲದೆ ಇತರ ರಾಜ್ಯಗಳ ಮಕ್ಕಳೂ ಇದ್ದು, ಆ ಪೈಕಿ ಗುಜರಾತ್‌ನಲ್ಲೂ ಕೆಲವರ ಸಂಬಂಧಿಕರಿದ್ದಾರೆ ಎದು ಶಾಲಾ ಆಡಳಿತ ಹೇಳಿದೆ.
ರಾಜ್ಯದಲ್ಲೂ ಭೂಕಂಪನದ ಅನುಭವ : ಭೂಕಂಪದ ಬಿಸಿ ಗುಜರಾತ್ ಹಾಗೂ ಭುಜ್‌ಗೆ ತಟ್ಟಿದ್ದರೆ, ಕರ್ನಾಟಕದ ಕೆಲವೆಡೆಗಳಲ್ಲೂ ಭೂಮಿ ಅದುರಿದ ಅನುಭವಗಳು ವರದಿಯಾಗಿವೆ. ಬೀದರ್, ಹುಬ್ಬಳ್ಳಿ ಹಾಗೂ ಧಾರವಾಡ ನಗರಗಳಲ್ಲಿ ಶುಕ್ರವಾರ ಮುಂಜಾನೆ ಸುಮಾರು 8.50ರ ಹೊತ್ತಿಗೆ ಭೂಮಿ ಅದುರಿದ ಅನುಭವ ಜನರಿಗಾಗಿದೆ.
ಆದರೆ ಮುಂಬೈ ಮೂಲದ ಬಾಬಾ ಅಟಾಮಿಕ್ ಸಂಶೋಧನಾ ಕೇಂದ್ರದ ಪ್ರಕಾರ ಕರ್ನಾಟಕದ ಯಾವ ಭಾಗದಲ್ಲೂ ಭೂಕಂಪ ಉಂಟಾಗಿಲ್ಲ. ಬೆಂಗಳೂರಿನ ಹವಾಮಾನ ಇಲಾಖೆಯಲ್ಲಿ ಭೂಕಂಪ ದಾಖಲಿಸಿ, ತೋರುವ ಮಾಪಕವಿಲ್ಲದ ಕಾರಣ ಇಲ್ಲಿ ಭೂಕಂಪ ಆಗಿದೆಯೋ ಇಲ್ಲವೋ ಎಂಬ ಬಗ್ಗೆ ಅಧಿಕೃತ ಮಾಹಿತಿಗಳಿಲ್ಲ. ಆದರೂ ಕೆಲವು ಬೆಂಗಳೂರಿಗರು ತಮಗೂ ಭೂಕಂಪದ ಅನುಭವವಾಗಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications