ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಆಫೀಸಿನಲ್ಲಿ ಜಗಳ ಕಾಯುತ್ತೀರಿ. ದಿನ ಪೂರ್ತಿ ಯೋಚನೆ ಮಾಡುತ್ತಲೇ ಇರುವುದರಿಂದ ವೈಯಕ್ತಿಕ ಕೆಲಸಗಳು ಮುಂದೆ ಸಾಗುವುದಿಲ್ಲ.ವೃಷಭ :ಕಾನೂನು ವಿಷಯಗಳಲ್ಲಿ ಜಯವಿದೆ. ಆದರೆ ಲಾಟರಿ, ವ್ಯಾಪಾರ ಕ್ಷೇತ್ರಗಳಲ್ಲಿ ಇವತ್ತೇನೂ ಲಕ್ ಇಲ್ಲ. ನೀವು ಹೊಸ ದಾರಿಯತ್ತ ಮುಖ ಮಾಡಿರುವುದರಿಂದ ಗೆಲುವು ಸ್ವಲ್ಪ ದೂರವಿದೆ.
ಮಿಥುನ : ಶಕುನಗಳು, ಲೆಕ್ಕಾಚಾರಗಳು, ಎಲ್ಲ ಸಂದರ್ಭದಲ್ಲಿಯೂ ನಿಮ್ಮ ಕಡೆಗೇ ಇರುತ್ತದೆ ಅಂತ ನಂಬಬಾರದಲ್ಲವೇ ? ಸೋಲುಗಳು ಬರುವುದು ಸಹಜ.
ಕಟಕ : ತುಂಬಾ ದಿನಗಳಿಂದ ಕಾಣುತ್ತಿದ್ದ ಪುಟ್ಟ ಕನಸೊಂದು ನನಸಾಗಬಹುದು. ಆ ಖುಷಿಯನ್ನೇ ಹಚ್ಚಿಕೊಂಡು ದಿನವನ್ನೆಲ್ಲಾ ಚಂದವಾಗಿರಿಸಿಕೊಳ್ಳುತ್ತೀರಿ.
ಸಿಂಹ : ಭಾರವೆಲ್ಲಾ ಇನ್ನೊಬ್ಬರ ಮೇಲೆ ಹೇರಿ ನಿರಾಳವಾಗಿರಬೇಕು ಎಂಬ ಕನಸು ಸಲ್ಲದು. ಯಾರಿಗೋ ವಹಿಸಿಕೊಟ್ಟ ಕೆಲಸ ಪೂರ್ತಿಯಾಗುವ ಮುಂಚೆಯೇ ನಿಮ್ಮ ಕೈ ಸೇರುತ್ತದೆ.
ಕನ್ಯಾ : ದಬಾಯಿಸುವುದರಿಂದ ಎಲ್ಲ ಸರಿಯಾಗುತ್ತದೆ ಎನ್ನುವ ಭ್ರಮೆ ಬೇಡ. ನೀವು ನಿಮ್ಮ ಬಳಿಯೇ ಇದೆ ಎಂದುಕೊಂಡಿರುವ ವಸ್ತು ಹಾರಿ ಹೋಗುವ ಮುಂಚೆ ಎಚ್ಚೆತ್ತುಕೊಂಡು ಜೋಪಾನವಾಗಿರಿ.
ತುಲಾ : ಇವತ್ತು ವಸ್ತ್ರಾಭರಣ ಖರೀದಿ. ಪ್ರಯಾಣ ಯೋಗವಿದೆ. ಆರಾಮವಾಗಿರಬೇಕು ಎಂಬ ಬಹುದಿನಗಳ ಕನಸು ನನಸಾಗುತ್ತದೆ.
ವೃಶ್ಚಿಕ : ತಪ್ಪು ತಿಳಿದುಕೊಂಡು ಮನಸ್ಸು ಕೆಡಿಸಿಕೊಳ್ಳುತ್ತೀರಿ. ಪ್ರಯಾಣ ಮಾಡಬೇಕು ಅಂತ ಅನಿಸಿದರೆ, ಸದ್ಯಕ್ಕೆ ಯೋಗವಿಲ್ಲ. ಆದರೂ ಕಿಸೆ ಖಾಲಿಯಾಗಲಿದೆ.
ಧನಸ್ಸು :ವಿದ್ಯಾ ಕ್ಷೇತ್ರದಲ್ಲಿ ಪ್ರಗತಿ ಇದೆ. ಅಪರೂಪದ ಬಂಧುಗಳ ಭೇಟಿಯಿಂದ ಖುಷಿಯಾಗಿರುತ್ತೀರಿ. ಎಲ್ಲ ದಿನಗಳೂ ಒಂದೇ ತೆರನಾಗಿರುವುದಿಲ್ಲ. ಸಣ್ಣ ಮನಸ್ತಾಪಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದೇ ?
ಮಕರ : ಮುಖವಾಡ ಹಾಕಿ ಕೊಂಡು ತುಂಬಾ ದಿನ ಬದುಕುವುದಕ್ಕಾಗುವುದಿಲ್ಲ ಎಂದು ತಿಳಿದೂ ಯಾಕೆ ಈ ವೇಷ . ಭ್ರಮೆಗಳನ್ನು ಆರೋಪಿಸಿಕೊಳ್ಳಬೇಡಿ.
ಕುಂಭ : ಸ್ನೇಹಿತರ ಭೇಟಿ. ಖರ್ಚು. ಮನೆಯಲ್ಲಿ ಗೌಜಿ ಗದ್ದಲಗಳು ಇರಬಹುದು. ಯಾವುದೋ ಸಮಾರಂಭ ನಿಮಗೆ ಖರ್ಚು ತಂದೊಡ್ಡಲಿದೆ.
ಮೀನ : ನೀವು ಮೌನವಾಗಿದ್ದರೂ, ಲೋಕದಲ್ಲಿ ನಡೆಯುವ ಕೆಲಸಗಳೆಲ್ಲವೂ ನಡೆಯುತ್ತವೆ. ಆದರೆ ಸ್ನೇಹಿತರು ನಿಮ್ಮಿಂದ ನಿರೀಕ್ಷಿಸುವುದು ತಪ್ಪಲ್ಲ ತಾನೇ ?
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications