ಬೆಂಗಳೂರಲ್ಲಿ ಟೆನಿಸ್ ಆಟಗಾರ ಸ್ಪಾಟ್ಲ್ರ 700 ಡಾಲರ್ ಕಳವು
ಬೆಂಗಳೂರು : ಅಪರಾಧಗಳ ನಗರ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ನಗರದಲ್ಲಿ ಆಸ್ಟ್ರೇಲಿಯಾದ ಟೆನಿಸ್ ಆಟಗಾರ ಮಾರ್ಟಿನ್ ಸ್ಪಾಟ್ಲ್ ಅವರ 700 ಅಮೆರಿಕನ್ ಡಾಲರ್ ಕಳುವಾಗಿದೆ. ರಾಷ್ಟ್ರೀಯ ಅಥ್ಲೆಟಿಕ್ಸ್ನಲ್ಲಿ ನಡೆದ ಮಾರಾಮಾರಿಯ ಕಹಿ ಘಟನೆ ನೆನಪಲ್ಲಿರುವಾಗ ನಗರಕ್ಕೆ ಕೆಟ್ಟ ಹೆಸರು ತಂದಿರುವ ಇನ್ನೊಂದು ಸುದ್ದಿ ಇದಾಗಿದೆ.
ಐಟಿಎಫ್ ಟೆನಿಸ್ ಫ್ಯೂಚರ್ಸ್ ಟೂರ್ನಿಯ ಫೈನಲ್ಸ್ ಪ್ರವೇಶಿಸಿರುವ 2ನೇ ಶ್ರೇಯಾಂಕದ ಸ್ಪಾಟ್ಲ್ ನಗರದ ಪ್ರಮುಖ ಹೊಟೇಲೊಂದರಲ್ಲಿ ತಂಗಿದ್ದು, ಅಲ್ಲೇ ಅವರ ಹಣ ಕಳುವಾಗಿದೆ. ದಕ್ಷಿಣ ಆಫ್ರಿಕದ ರಿಕ್ ಡಿ ವೋಯೆಸ್ಟ್ ವಿರುದ್ಧ ಶುಕ್ರವಾರ ನಡೆದ ಸೆಮಿಫೈನಲ್ಸ್ನಲ್ಲಿ ಗೆದ್ದ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ತಾನು ಇಳಿದುಕೊಂಡಿರುವ ಹೊಟೇಲಿನ ರೂಮಿನಲ್ಲೇ ಹಣವಿತ್ತು. ಶುಕ್ರವಾರ ಮುಂಜಾನೆಯಿಂದ ಅದು ನಾಪತ್ತೆಯಾಗಿದೆ ಎಂದು ಹೊಟೇಲಿನ ಅಧಿಕಾರಿಗಳಿಗೂ ಸ್ಪಾಟ್ಲ್ ದೂರಿತ್ತಿದ್ದಾರೆ. ಅಧಿಕಾರಿಗಳು ಕಳೆದು ಹೋಗಿರುವ ಹಣ ಹುಡುಕುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಈ ಬಗ್ಗೆ ತಮಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications