ಕೂಥಡಿಮಲೈನಲ್ಲಿ ಎಸ್ಟಿಎಫ್ ಪೊಲೀಸರಿಗೆ ಸಿಕ್ಕಿಬಿದ್ದ ಕೇರಳ ವೀರಪ್ಪನ್
ಕೊಯಮತ್ತೂರು : ಇದೋ ಇನ್ನೇನು ಸಿಕ್ಕ ಅಂದುಕೊಳ್ಳುವಾಗಲೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ನರಹಂತಕ ವೀರಪ್ಪನ್ ಕಾಡಗರ್ಭದಲ್ಲಿ ಕಣ್ಣಾಮುಚ್ಚಾಲೆಯಾಡುತ್ತಿರುವ ಹೊತ್ತಿನಲ್ಲೇ ಕೇರಳ ವಿಶೇಷ ಕಾರ್ಯಪಡೆಯ ಪೊಲೀಸರು ಕೇರಳ ವೀರಪ್ಪನ್ ಎನ್ನುವ ಕುಖ್ಯಾತಿಯ ಚಕ್ರಪಾಣಿ ಹಾಗೂ ಅವನ ಇಬ್ಬರು ಸಹಚರರನ್ನು ಬಂಧಿಸಿದೆ.
ನರಹಂತಕ ವೀರಪ್ಪನ್ಗಾಗಿ ತೀವ್ರ ಹುಡುಕಾಟದಲ್ಲಿ ತೊಡಗಿದ್ದ ಶೈಲೇಂದ್ರಬಾಬು ಅವರ ನೇತೃತ್ವದ ಎಸ್ಟಿಎಫ್ ಬಲೆಗೆ ಬಿದ್ದದ್ದು ಈ ಕೇರಳ ವೀರಪ್ಪನ್. ಕೂಥಡಿಮಲೈ ಎನ್ನುವಲ್ಲಿ ಈತನನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಬಂಧಿತರಿಂದ ದೇಶಿ ನಿರ್ಮಿತ ರೈಫಲ್ ಸೇರಿದಂತೆ ವಿವಿಧ ಮಾರಕ ಆಯುಧಗಳು, ಸರ್ಚ್ಲೈಟ್ ಹಾಗೂ ಕಾಡುಕೋತಿಯ ಚರ್ಮವನ್ನು ವಶಪಡಿಸಿಕೊಂಡಿದೆ.
ಹುಲಿ ಶಿಕಾರಿಗೆ ಹೊರಟ ಎಸ್ಟಿಎಫ್ಗೆ ಇಲಿ ಸಿಕ್ಕಿ ಬಿದ್ದಿದೆ. ಆದರೆ, ಸಿಕ್ಕಿ ಬಿದ್ದಿರುವ ಕೇರಳ ವೀರಪ್ಪನ್ ಕೂಡ ನರಹಂತಕ ವೀರಪ್ಪನ್ನಂತೆ ಕಾಡು ಹಾಗೂ ಕಾಡುಪ್ರಾಣಿಗಳ ನಾಶದ ಚಟುವಟಿಕೆಗಳಲ್ಲಿ ತೊಡಗಿದ್ದ . ಈತನ ಬಂಧನ ಎಸ್ಟಿಎಫ್ ಪಡೆಗೆ ತುಸು ಚೈತನ್ಯ ತಂದುಕೊಟ್ಟಿರಲೇಬೇಕು. ಅಂತೆಯೇ ಇಂದು ಕೇರಳ ವೀರಪ್ಪನ್ ಸಿಕ್ಕ, ನಾಳೆ ನಿಜವಾದ ವೀರಪ್ಪನೇ ಸಿಗಬಹುದೆನ್ನುವ ಭರವಸೆಯನ್ನೂ.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications