Get Updates
Get notified of breaking news, exclusive insights, and must-see stories!

ಸುತ್ತೂರಿನಲ್ಲಿ ಸರಳ - ಸಂಭ್ರಮದ ಸಾಮೂಹಿಕ ವಿವಾಹ

ಮೈಸೂರು : ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜ. 25ರ ಗುರುವಾರ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಸಾಮೂಹಿಕ ವಿವಾಹ ಅತ್ಯಂತ ಸರಳ ಹಾಗೂ ಸಂಭ್ರಮದಿಂದ ಜರುಗಿತು. ಎಲ್ಲ ವರ್ಗದವರಿಗೂ ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಕ್ತ ಅವಕಾಶ ನೀಡಲಾಗಿತ್ತು.

ಪರಿಶಿಷ್ಟ ಜಾತಿ, ಪಂಗಡದ 8 ಜೋಡಿಗಳೂ ಸೇರಿದಂತೆ ಒಟ್ಟು 18 ಜೋಡಿಗಳು ಈ ಸಾಮೂಹಿಕ ವಿವಾಹದಲ್ಲಿ ಸತಿ- ಪತಿಗಳಾಗಿ ಸಪ್ತ ಪದಿ ತುಳಿದರು. ವಧೂವರರಿಗೆ ಸೀರೆ, ರವಿಕೆ, ಪಂಚೆ, ಶಲ್ಯವೇ ಅಲ್ಲದೆ ಮಾಂಗಲ್ಯವನ್ನು ಸಹ ಉಚಿತವಾಗಿ ನೀಡಲಾಯಿತು.

ಹೊಸ ಬಾಳಿನ ಹೊಸಿಲಲಿ ನಿಂತ ಜೋಡಿಗಳನ್ನು ಹರಸಲು ಬಂದ ಬಂಧು -ಬಾಂಧವರಿಗೆ ಉಚಿತ ಊಟ ಹಾಗೂ ವಸತಿಯ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿವಾಹ ವೇದಿಕೆ ಈ ಸಾಮೂಹಿಕ ವಿವಾಹವನ್ನು ಏರ್ಪಡಿಸಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+