ಹೆಂಡತಿಯರ ಕಾಟ ತಪ್ಪಿಸಿ : ಪತ್ನಿ ಪೀಡಿತರು ನ್ಯಾಯಾಲಯಕ್ಕೆ
ಬೆಂಗಳೂರು : ಪುರುಷ ಪ್ರಧಾನ ಸಮಾಜದಲ್ಲಿ ಅನಾದಿ ಕಾಲದಿಂದಲೂ ಪುರುಷ ತನ್ನ ಸ್ವಾರ್ಥಕ್ಕಾಗಿ ಅಬಲೆಯಾದ ಮಹಿಳೆಯನ್ನು ಶೋಷಿಸುತ್ತಿದ್ದಾನೆ ಎಂಬ ವಾದ ಈಗ ಪ್ರಸ್ತುತವೇ ? ವಿದ್ಯಾಧಿದೇವತೆ ಸರಸ್ವತಿ ಹೆಣ್ಣು, ಧನದೇವತೆ ಲಕ್ಷ್ಮೀ ಹೆಣ್ಣು, ಭೂಮಿ ತಾಯಿ ಹೆಣ್ಣು. ಹೀಗೆ ಹೆಣ್ಣಿಗೆ ಪೂಜ್ಯ ಸ್ಥಾನ ನೀಡಲಾಗಿದೆ ಎಂದು ನುಣುಚಿಕೊಳ್ಳುವವರೂ ಇದ್ದಾರೆ.
ಈ ಮಧ್ಯೆ ಭಾರತೀಯ ಕಾನೂನಿನಲ್ಲಿ ಮಹಿಳೆಯರಿಗೆ ವಿಶೇಷ ನ್ಯಾಯಿಕ ಸವಲತ್ತುಗಳನ್ನೂ ನೀಡಲಾಗಿದೆ. ಮಹಿಳಾ ಶೋಷಣೆ ಅದರಲ್ಲೂ ವರದಕ್ಷಿಣೆ ಕಿರುಕುಳವೇ ಮೊದಲಾದ ದೌರ್ಜನ್ಯದ ತಡೆಗೆ ಸೂಕ್ತ ಕಾನೂನು ರಕ್ಷಣೆಯನ್ನೂ ನೀಡಲಾಗಿದೆ. ಈಗ ಈ ಸೌಲಭ್ಯದ ದುರ್ಬಳಕೆ ಆಗುತ್ತಿದೆ ಎಂದು ಪತ್ನಿ ಪೀಡಿತರು ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ.
ಹೆಂಡತಿಯ ಕಾಟ ತಡೆಯಲಾರದ - ಪತ್ನಿಯಿಂದ ಹಿಂಸೆಗೊಳಗಾದ ಕೆಲವು ಮಂದಿ ಕೊನೆಗೂ ಧೈರ್ಯ ಮಾಡಿ ಸಂಘ ಕಟ್ಟಿಕೊಂಡಿದ್ದಾರೆ. ಈ ಸಂಘಕ್ಕೆ ಕರ್ನಾಟಕ ಗಂಡಂದಿರ ಕಲ್ಯಾಣ ವೇದಿಕೆ ಎಂದೂ ಹೆಸರಿಟ್ಟುಕೊಂಡಿದ್ದಾರೆ. ಈ ವೇದಿಕೆಯ ಅಡಿಯಲ್ಲಿ ಒಟ್ಟುಗೂಡಿರುವ ಪತ್ನಿ ಪೀಡಿತರು ಹೆಂಡತಿಯರಿಂದ ತಮಗೆ ಆಗುತ್ತಿರುವ ಕಿರುಕುಳ ತಪ್ಪಿಸಿ ಎಂದು ರಾಜ್ಯ ಹೈಕೋರ್ಟ್ ಮೊರೆ ಇಟ್ಟಿದ್ದಾರೆ.
ರಾಜ್ಯದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಸುಳ್ಳು ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಕ್ಷುಲ್ಲಕ ಕಾರಣಗಳಿಗೆ ಗಂಡನ ಮೇಲೆ ಹರಿಹಾಯುವ ಪತ್ನಿಯರು ಕಾನೂನು ಕಟ್ಟಲೆಯ ದುರ್ಲಾಭ ಪಡೆಯುತ್ತಿದ್ದಾರೆ. ತಾವೇ ಗಂಡನನ್ನು ಹಿಂಸಿಸಿ, ಗಂಡನ ಮೇಲೇ ಸುಳ್ಳು ದೂರು ನೀಡುತ್ತಿದ್ದಾರೆ. ಇಂತಹ ಹೆಂಡತಿಯರಿಂದ ತಮ್ಮನ್ನು ನ್ಯಾಯಾಲಯವೇ ಕಾಪಾಡಬೇಕು ಎಂದು ಕಲ್ಯಾಣ ವೇದಿಕೆಯ ಸಂಸ್ಥಾಪಕರಾದ ಮಾಗಡಿ ರೋಡ್ ನಿವಾಸಿ 84 ವರ್ಷ ವಯಸ್ಸಿನ ಎ.ಆರ್. ಸಿಂಗ್ ನ್ಯಾಯಾಲಯದಲ್ಲಿ ಪತ್ನಿ ಪೀಡಿತರ ಪರವಾಗಿ ಅರ್ಜಿ ಸಲ್ಲಿಸಿದ್ದಾರೆ.
ಸಹಾಯ ವಾಣಿ ದುರ್ಬಳಕೆ : 1993ರಲ್ಲಿ ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತರಾಗಿದ್ದ ಚಂದೂಲಾಲ್ ಜೈನ್ ಅವರು ಕೌಟುಂಬಿಕ ಸಲಹಾ ಕೇಂದ್ರ ಆರಂಭಿಸಿದರು. ಆನಂತರ ರೇವಣ ಸಿದ್ಧಯ್ಯ ಅವರು ವನಿತಾ ಸಹಾಯ ವಾಣಿಯನ್ನು ಅಸ್ಥಿತ್ವಕ್ಕೆ ತಂದರು. ಅಲ್ಲಿ ವನಿತೆಯರು ದೂರು ಕೊಟ್ಟ ತತ್‌ಕ್ಷಣವೇ ಪೊಲೀಸರು ನೋಟಿಸ್ ಹಿಡಿದು ಮನೆ ಬಾಗಿಲಿಗೆ ಬಂದು ಗಂಡಂದಿರನ್ನು ಕೇಂದ್ರಕ್ಕೆ ಕರೆದೊಯ್ಯತ್ತಾರೆ.
ಸಲಹಾ ಕೇಂದ್ರಗಳಿಗೆ ಅನುಭವಿ ಸಮಾಜ ಶಾಸ್ತ್ರಜ್ಞರು ಹಾಗೂ ಮನಃಶಾಸ್ತ್ರಜ್ಞರನ್ನು ನೇಮಕ ಮಾಡಬೇಕು. ಕೌಟುಂಬಿಕ ಸಲಹಾ ಕೇಂದ್ರಗಳಲ್ಲಿ ಮಹಿಳಾ ಸಲಹೆಗಾರರಿರಬೇಕು. ಆದರೆ ಗೊತ್ತು ಗುರಿ ಇಲ್ಲದ ವ್ಯಕ್ತಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಬೇಕು ಎಂದೂ ಅವರು ನ್ಯಾಯಾಲಯದ ಮೊರೆ ಇಟ್ಟಿದ್ದಾರೆ.
ಈ ಎರಡು ಸೌಲಭ್ಯಗಳು ಹೆಂಡತಿಯರಿಗೆ ದೊರೆತ ಮೇಲಂತೂ ಗಂಡಂದಿರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಅನಗತ್ಯವಾಗಿ ಹಾಗೂ ಸುಳ್ಳು ದೂರುಗಳು ದಾಖಲಾಗುತ್ತಿವೆ ಎಂದು ನ್ಯಾಯಪೀಠದ ಗಮನ ಸೆಳೆಯಲಾಗಿದೆ. ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡಿರುವ ವಿಭಾಗೀಯ ನ್ಯಾಯಪೀಠವು ಕೌಟುಂಬಿಕ ಸಲಹಾ ಕೇಂದ್ರಗಳಲ್ಲಿ ಪುರುಷರು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸರಕಾರಿ ವಕೀಲರಿಗೆ ಆದೇಶ ನೀಡಿದೆ.
ತಮ್ಮ ಕಷ್ಟವನ್ನೂ ಕೇಳಲು ವೇದಿಕೆ ಒಂದು ಇದೆಯಲ್ಲ ಎಂದು, ಪತ್ನಿ ಪೀಡಿತರು ಸದ್ಯಕ್ಕಂತೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರಂತೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications