Get Updates
Get notified of breaking news, exclusive insights, and must-see stories!

ವೀರಪ್ಪನ್‌ ಪರ ನೆಡುಮಾರನ್‌ ಮತ್ತೆ ವಕಾಲತ್ತು, ಕಾಡಿಗೆ ಹೋಗಲು ಸಿದ್ಧ

ಪಾಂಡಿಚೆರಿ: ಯಾವುದೇ ಗಳಿಗೆಯಲ್ಲಿ ನರಹಂತಕ ವೀರಪ್ಪನ್‌ನನ್ನು ಗುಂಡಿಕ್ಕಿ ಕೊಲ್ಲಲಾಗುವುದು ಎಂದು ಕೊಯಮತ್ತೂರು ಜಿಲ್ಲಾ ಅರಣ್ಯಾಧಿಕಾರಿ ಯು. ರವೀಂದ್ರನ್‌ ಬುಧವಾರ ಕೊಯಮತ್ತೂರಿನಲ್ಲಿ ಹೇಳಿಕೆ ನೀಡಿರುವ ಬೆನ್ನಿಗೇ, ಉಭಯ ರಾಜ್ಯಗಳು ಕ್ಷಮಾದಾನ ನೀಡಲು ಒಪ್ಪಿಕೊಂಡಲ್ಲಿ ವೀರಪ್ಪನ್‌ ಶರಣಾಗತಿಗೆ ತಾವು ಕಾಡಿಗೆ ಹೋಗಲು ಸಿದ್ಧ ಎನ್ನುವ ಹಳೆಯ ಹೇಳಿಕೆಯನ್ನು ತಮಿಳು ರಾಷ್ಟ್ರೀಯ ಆಂದೋಲನದ ನಾಯಕ ಪಿ. ನೆಡುಮಾರನ್‌ ಪುನರುಚ್ಚರಿಸಿದ್ದಾರೆ.

ವೀರಪ್ಪನ್‌ ಸಮಸ್ಯೆ ಕೇವಲ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದಲ್ಲ . ಈ ಸಮಸ್ಯೆಯನ್ನು ಆರ್ಥಿಕ ಹಾಗೂ ಸಾಮಾಜಿಕ ಕೋನಗಳಿಂದಲೂ ನೋಡಬೇಕಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೆಡುಮಾರನ್‌ ಹೇಳಿದರು. ವೀರಪ್ಪನ್‌ ಶಿಕಾರಿಗೆ ಈಗಾಗಲೇ 170 ಕೋಟಿ ರುಪಾಯಿಗಳನ್ನು ಖರ್ಚು ಮಾಡಲಾಗಿದೆ. ಕಾರ್ಯಾಚರಣೆ ಮತ್ತೂ ಮುಂದುವರಿಯುತ್ತಿರುವುದರಿಂದ ಈ ಮೊತ್ತ ಮತ್ತಷ್ಟು ಹೆಚ್ಚುತ್ತದೆ ಎಂದರು.

ಚಂಬಲ್‌ ರಾಣಿ ಫೂಲನ್‌ದೇವಿಗೆ ಕ್ಷಮಾಪಣೆ ನೀಡಿದ ಹಿನ್ನೆಲೆಯಲ್ಲೇ ವೀರಪ್ಪನ್‌ಗೂ ಕ್ಷಮಾಪಣೆ ನೀಡಬೇಕು ಎಂದು ಅಭಿಪ್ರಾಯಪಟ್ಟ ಅವರು, ಪ್ರಸ್ತುತ ನಡೆಯುತ್ತಿರುವ ವೀರಪ್ಪನ್‌ ಶಿಕಾರಿ ಪಾರದರ್ಶಕವಾಗಿರಲಿ ಎಂದು ಉಭಯ ಸರ್ಕಾರಗಳನ್ನು ಒತ್ತಾಯಿಸಿದರು.

ಉಪವಾಸದ ಸಾವುಗಳನ್ನು ತಪ್ಪಿಸಿ: ವೀರಪ್ಪನ್‌ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಆ ಪ್ರದೇಶಗಳ ಗುಡ್ಡಗಾಡು ಜನ ತಮ್ಮ ಜೀವನಾವಶ್ಯಕ ವಸ್ತುಗಳ ಸಂಪಾದನೆಯಿಂದ ವಂಚಿತರಾಗಿದ್ದಾರೆ. ಕಾರ್ಯಾಚರಣೆ ಮುಗಿವವರೆಗೂ ಈ ಜನರಿಗೆ ಸರ್ಕಾರ ಆರ್ಥಿಕ ಸಹಾಯ ನೀಡಬೇಕು. ಇಲ್ಲದಿದ್ದಲ್ಲಿ ಉಪವಾಸದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತದೆ ಎಂದರು. ಎಸ್‌ಟಿಎಫ್‌ ದೌರ್ಜನ್ಯಗಳ ತನಿಖೆಗಾಗಿ ಜಂಟಿ ತನಿಖಾ ಸಮಿತಿಯಾಂದನ್ನು ನೇಮಿಸುವಂತೆ ಕರ್ನಾಟಕ- ತಮಿಳುನಾಡು ಸರ್ಕಾರಗಳನ್ನು ನೆಡುಮಾರನ್‌ಒತ್ತಾಯಿಸಿದರು.

ಶೀಘ್ರವೇ ನಿಮಗೆ ಶುಭ ಸುದ್ದಿ : ವೀರಪ್ಪನ್‌ ಶಿಕಾರಿಯಲ್ಲಿ ತೊಡಗಿರುವ ಕೊಯಮತ್ತೂರು ಜಿಲ್ಲಾ ಅರಣಾಧ್ಯಿಕಾರಿ ಯು. ರವೀಂದ್ರನ್‌ ಪ್ರಕಾರ - ಇದೇ ಅಂತಿಮ ಕಾರ್ಯಾಚರಣೆ. ಇನ್ನೇನು ಯಾವುದೇ ಕ್ಷಣದಲ್ಲಾದರೂ ವೀರಪ್ಪನ್‌ ಪೊಲೀಸರ ಗುಂಡಿಗೆ ಬಲಿಯಾಗುತ್ತಾನೆ. ನಮ್ಮ ಹುಡುಗರು ತೀವ್ರವಾಗಿ ಶ್ರಮಿಸುತ್ತಿದ್ದಾರೆ. ಈ ಬಾರಿ ವೀರಪ್ಪನ್‌ ಹೆಣ ಉರುಳುವುದು ಖಚಿತ.

ವೆಲ್ಲಿಂಗಿರಿ (ಕೇರಳ ಗಡಿಗೆ 10 ಕಿಮೀ ದೂರದಲ್ಲಿರುವ) ಬೆಟ್ಟಗಳ ಪ್ರದೇಶದಲ್ಲಿ ವೀರಪ್ಪನ್‌ ತಪ್ಪಿಸಿಕೊಳ್ಳಬಹುದಾದ ಎಲ್ಲಾ ದಾರಿಗಳನ್ನು ಮುಚ್ಚಿದ್ದೇವೆ. ಅವನು ತನ್ನ ತಾಣ ಬದಲಿಸಿದ ಕಡೆಗೆಲ್ಲಾ ನಾವೂ ನಮ್ಮ ಪಡೆಗಳನ್ನು ಸ್ಥಳಾಂತರಿಸುತ್ತೇವೆ ಎಂದು ರವೀಂದ್ರನ್‌ ಹೇಳಿದ್ದಾರೆ.

(ಯುಎನ್‌ಐ / ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+