ಇನ್ನಿಂಗ್ಸೊಂದರಲ್ಲಿ 10 ವಿಕೆಟ್ : ಮೊಹಾಂತಿ ಬರೆ-ದ ದಾಖಲೆ
(ಇನ್ಫೋ ವಿಶೇಷ ವಾರ್ತೆ)
ಬೆಂಗಳೂರು : ಭಾರತ ಕ್ರಿಕೆಟ್ ತಂಡದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಒರಿಸ್ಸಾದ ವೇಗಿ ದೇಬಶಿಶ್ ಮೊಹಾಂತಿ ಗುರುವಾರ ನಡೆದ ದುಲೀಪ್ ಟ್ರೋಫಿ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪೂರ್ವ ವಲಯದ ಪರ ಎಲ್ಲಾ 10 ವಿಕೆಟ್ ಕಿತ್ತು ಚರಿತ್ರೆ ನಿರ್ಮಿಸಿದ್ದಾರೆ. 19 ಓವರ್, 5 ಮೇಡನ್, 46 ರನ್ನಿಗೆ 10 ವಿಕೆಟ್.
ಅಗರ್ತಲದ ಮಹಾರಾಜ ವೀರ್ ವಿಕ್ರಮ್ ಕಾಲೇಜ್ ಆವರಣದಲ್ಲಿ ದಕ್ಷಿಣ ವಲಯದ ವಿರುದ್ಧ ನಡೆದ ಪಂದ್ಯದಲ್ಲಿ ಈ ಸಾಧನೆ ಮೂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ವಲಯ ಅಗ್ಗದ 113ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಪೂರೈಸಿತು. ಕರ್ನಾಟಕದ ರಾಹುಲ್ ದ್ರಾವಿಡ್ ಹಾಗೂ ವಿಜಯ್ ಭಾರದ್ವಾಜ್ ಮೊಹಾಂತಿ ಬೌಲಿಂಗ್ ಮೋಡಿಗೆ ವಿಕೆಟ್ ಒಪ್ಪಿಸಿ, ಶೂನ್ಯ ಸಂಪಾದನೆ ಮಾಡಿದರು. ದುಲಿಪ್ ಟ್ರೋಫಿಯಲ್ಲಿ ಈವರೆಗೆ ಯಾರೂ ಒಂದೇ ಇನ್ನಿಂಗ್ಸ್‌ನಲ್ಲಿ ಹತ್ತೂ ವಿಕೆಟ್ ಕಿತ್ತಿರಲಿಲ್ಲ.
ಪ್ರಾದೇಶಿಕ ಹಾಗೂ ವಲಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮೂರನೆಯದು. 1957ರಲ್ಲಿ ಬಂಗಾಳದ ಪಿ.ಚಟರ್ಜಿ ಇನ್ನಿಂಗ್ಸೊಂದರಲ್ಲಿ ಅಸ್ಸಾಂನ ಹತ್ತೂ ವಿಕೆಟ್ ಕಿತ್ತಿದ್ದರು (10 ಓವರ್, 11 ಮೇಡನ್, 20 ರನ್ನಿಗೆ) . 1985ರಲ್ಲಿ ರಾಜಸ್ತಾನದ ಪಿ.ಸುಂದರಂ ವಿದರ್ಭಾ ತಂಡದ ವಿರುದ್ಧ ಇದೇ ಸಾಧನೆ ಮಾಡಿದ್ದರು (22 ಓವರ್, 5 ಮೇಡನ್, 78 ರನ್ನಿಗೆ). ಈ ಎರಡೂ ದಾಖಲೆಗಳು ರಣಜಿ ಟೂರ್ನಿಯಲ್ಲಿ ಮೂಡಿದಂಥವು. 1954ರಲ್ಲಿ ಪಾಕಿಸ್ತಾನ್ ಸರ್ವಿಸಸ್ ಬಹ್‌ವಾಲ್‌ಪುರ್ ಕ್ರಿಕೆಟ್ ಅಸೋಸಿಯೇಶನ್ ವಿರುದ್ಧ ನಡೆದ ಮತ್ತೊಂದು ಪಂದ್ಯದಲ್ಲಿ ಆಗಿನ ಬಾಂಬೆ ತಂಡದ ಪರ ಇನ್ನಿಂಗ್ಸೊಂದರಲ್ಲಿ ಹತ್ತೂ ವಿಕೆಟ್ ಉರುಳಿಸಿದ್ದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications