Get Updates
Get notified of breaking news, exclusive insights, and must-see stories!

ಲತಾ ಮಂಗೇಶ್ಕರ್‌ ಹಾಗೂ ಬಿಸ್ಮಿಲ್ಲಾ ಖಾನ್‌ರಿಗೆ ಭಾರತರತ್ನ

ನವದೆಹಲಿ : ಗಾನಕೋಗಿಲೆ ಲತಾ ಮಂಗೇಶ್ಕರ್‌ ಹಾಗೂ ಶಹನಾಯಿ ವಾದಕ ಸಾಮ್ರಾಟ್‌ ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಅವರಿಗೆ ರಾಷ್ಟ್ರದ ಪ್ರತಿಷ್ಠಿತ ನಾಗರಿಕ ಸನ್ಮಾನವಾದ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 52ನೇ ಗಣರಾಜ್ಯೋತ್ಸವದ ಮುನ್ನಾದಿನವಾದ ಗುರುವಾರ ರಾಷ್ಟ್ರಪತಿ ಭವನದಿಂದ ಪ್ರಶಸ್ತಿಗಳ ಪ್ರಕಟಣೆ ಹೊರಬಿದ್ದಿದೆ.

ಹೆಸರಾಂತ ಸರೋದ್‌ ವಾದಕ ಉಸ್ತಾದ್‌ ಅಮ್‌ಜದ್‌ ಅಲಿ ಖಾನ್‌, ಸಂತೂರ್‌ ವಾದಕ ಪಂಡಿತ್‌ ಶಿವಕುಮಾರ್‌ ಶರ್ಮಾ, ಚಲನಚಿತ್ರ ನಿರ್ದೇಶಕ ಹೃಷಿಕೇಶ್‌ ಮುಖರ್ಜಿ, ಖ್ಯಾತ ಅರ್ಥಶಾಸ್ತ್ರಜ್ಞ ಜಾನ್‌ ಕೆ. ಗಾಲ್‌ಬೆತ್‌, ಭಾರತ ಮೂಲದ ಹಾಲಿ ಜರ್ಮನಿಯಲ್ಲಿರುವ ರಾಗ ಸಂಯೋಜಕ ಜುಬಿನ್‌ ಮೆಹ್ತಾ ಅವರಿಗೆ ರಾಷ್ಟ್ರದ ಎರಡನೇ ಅತ್ಯುನ್ನತ ಗೌರವ ಪದ್ಮವಿಭೂಷಣ ಪ್ರಶಸ್ತಿ ಲಭ್ಯವಾಗಿದೆ.

ಸ್ಟಾರ್‌ಪ್ಲಸ್‌ನಲ್ಲಿ ಜನಪ್ರಿಯ ಕಾರ್ಯಕ್ರಮ ಕೌನ್‌ ಬನೇಗಾ ಕರೋಡ್‌ಪತಿ ನಡೆಸಿಕೊಡುತ್ತಿರುವ ಹಿಂದಿ ಚಿತ್ರರಂಗದ ಬಿಗ್‌ ಬಿ ಅಮಿತಾಬ್‌ ಬಚ್ಚನ್‌, ಚಿರ ಯೌವ್ವನಿ ದೇವ್‌ ಆನಂದ್‌ ಹಾಗೂ ಇತ್ತೀಚೆಗಷ್ಟೇ ವಿಶ್ವಚಾಂಪಿಯನ್‌ ಪಟ್ಟ ಪಡೆದ ವಿಶ್ವ ವಿಖ್ಯಾತ ಚದುರಂಗ ಚತುರ ವಿಶ್ವನಾಥನ್‌ ಆನಂದ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.

ಪದ್ಮವಿಭೂಷಣ ಪುರಸ್ಕೃತರು : ಶಾಸ್ತ್ರೀಯ ಸಂಗೀತ : ಉಸ್ತಾದ್‌ ಅಮ್ಜದ್‌ ಅಲಿ ಖಾನ್‌ ಹಾಗೂ ಪಂಡಿತ್‌ ಶಿವಕುಮಾರ್‌ ಶರ್ಮಾ, ಸಾರ್ವಜನಿಕ ವ್ಯವಹಾರ : ಬೆಂಜಮಿನ್‌ ಅರ್ಥರ್‌ ಗಿಲ್‌ಮನ್‌ ಮತ್ತು ಹೊಸೈ ನರೋಟಾ, ವಿಜ್ಞಾನ ಮತ್ತು ಎಂಜನಿಯರಿಂಗ್‌ : ಡಾ. ಕಲ್ಯಂಪುಡಿ ರಾಧಾಕೃಷ್ಣ ರಾವ್‌ ಮತ್ತು ಪ್ರೊ. ಮನಮೋಹನ್‌ ಶರ್ಮಾ, ನಾಗರಿಕ ಸೇವೆ : ಡಾ. ನರಸಿಂಹನ್‌, ಚಲನಚಿತ್ರ : ಹೃಷಿಕೇಶ್‌ ಮುಖರ್ಜಿ, ಅರ್ಥಶಾಸ್ತ್ರ : ಜಾನ್‌ಗಾಲ್‌ಬೆತ್‌, ಶಿಕ್ಷಣ - ಸಾಹಿತ್ಯ : ಕೆ. ಸಚ್ಚಿದಾನಂದ ಮೂರ್ತಿ, ಸಂಗೀತ ಸಂಯೋಜನೆ : ಜೆ. ಮೆಹ್ತಾ.

ಪದ್ಮ ಭೂಷಣ : ಚಲನಚಿತ್ರ : ಅಮಿತಾಬ್‌ ಬಚ್ಚನ್‌, ದೇವ್‌ ಆನಂದ್‌, ಪ್ರಾಣ್‌, ಡಾ. ಭಾನುಮತಿ ರಾಮಕೃಷ್ಣ ಹಾಗೂ ಬಿ.ಆರ್‌. ಚೋಪ್ರಾ, ಕ್ರೀಡೆ: ವಿಶ್ವನಾಥನ್‌ ಆನಂದ್‌, ಸಮಾಜಸೇವೆ : ಮೌಲಾನಾ ಅಬ್ದುಲ್‌ ಕರೀಂ ಪಾರೇಖ್‌, ಕೃಷಿ - ಹೈನುಗಾರಿಕೆ : ಡಾ. ಅಮೃತಾ ಪಟೇಲ್‌, ಪತ್ರಿಕೋದ್ಯಮ : ಅರುಣ್‌ ಪುರಿ, ವಿಜ್ಞಾನ ಮತ್ತು ಎಂಜಿನಿಯರಿಂಗ್‌ : ಅರುಣ್‌ ಎನ್‌ ನೇತ್ರಾವಳಿ, ಡಾ. ರಾಜ್‌ರೆಡ್ಡಿ ಹಾಗೂ ಡಾ. ಪಿ.ಆರ್‌. ರಾವ್‌, ಕಾನೂನು : ಅಶೋಕ್‌ ದೇಸಾಯಿ, ಸಂಗೀತ: ಭೂಪೇನ್‌ ಹಜಾರಿಕಾ ಮತ್ತು ಲಾಲ್‌ಗುಡಿ ಜಯರಾಮನ್‌, ವೈದ್ಯಕೀಯ: ಡಾ. ಚಿತ್ತರಂಜನ್‌ ರಣಾವತ್‌ (ಪ್ರಧಾನಿಯವರ ಮಂಡಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು), ನೃತ್ಯ : ಯಾಮಿನಿ ಕೃಷ್ಣಮೂರ್ತಿ, ಉದ್ಯಮ : ರಾಹುಲ್‌ ಬಜಾಜ್‌, ವ್ಯಾಪಾರ ಹಾಗೂ ಆರ್ಥಿಕ ಚಟುವಟಿಕೆ: ಎಂ.ಎಸ್‌. ಒಬೆರಾಯ್‌, ಬದರಿ ನಾರಾಯಣ್‌ ಆರ್‌. ಬರ್ವಾಲೆ ಹಾಗೂ ಡಾ. ಭೂಪತಿ ರಾಜು, ಸಾಹಿತ್ಯ - ಶಿಕ್ಷಣ: ಡಾ. ಬೋಯಿ ಭೀಮಣ್ಣ ಹಾಗೂ ಡಾ. ಕೆ.ಎಂ. ಜಾರ್ಜ್‌, ಸಂಗೀತ : ಡಾ. ಎಲ್‌. ಸುಬ್ರಮಣಿಯಂ, ವೈದ್ಯಕೀಯ : ಡಾ. ನರೇಶ್‌ ಕೆ. ಟೆಹ್ರಾನ್‌, ಶಿಲ್ಪಕಲೆ : ರಘುನಾಥ್‌ ಮಹಾಪಾತ್ರ, ಪರಿಸರ: ಡಾ. ರಾಜೇಂದ್ರ ಕುಮಾರ್‌, ಸಮಾಜ ಸೇವೆ: ಎಸ್‌. ರಾಮಕೃಷ್ಣನ್‌, ಸಾಹಿತ್ಯ ಮತ್ತು ಶಿಕ್ಷಣ: ಪ್ರೊ. ಶಿವ ಕುಮಾರ್‌, ಸಾರ್ವಜನಿಕ ವ್ಯವಹಾರ: ಸ್ವದೇಶ್‌ ಚಟರ್ಜಿ, ಸಮಾಜ ಸೇವೆ: ತ್ರಿಯಂಬಕ ಭಾಳಾಸಾಹೇಬ್‌ ಶಿವರಾಮ್‌ ಹಾಗೂ ನೃತ್ಯ: ಉಮಾಶರ್ಮಾ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+