ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಮನೆಯಲ್ಲಿನ ಖುಷಿ ಆಫೀಸಿನ ತುಂಬಾ ಹರಡುತ್ತದೆ. ಯಾರೂ ಗುರುತಿಸದಿದ್ದರೂ ನೀವು ಸೂಕ್ಷ್ಮವಾಗಿ ಗಮನಿಸುವ ವಿಷಯಗಳಿಂದ ಮನಸ್ಸಿಗೆ ನೋವು ಮಾಡಿಕೊಳ್ಳಬೇಡಿ. ಹಿರಿಯರ ಸಹಾಯ ನಿಮ್ಮ ಪಾಲಿಗೆ ಸದಾ ಇರುತ್ತದೆ.ವೃಷಭ :ಮೂಡ್ ಕೆಡಿಸಿಕೊಂಡಿದ್ದೀರಿ ಎಂದೇ ನಿಮ್ಮ ಸ್ನೇಹಿತರೆಲ್ಲಾ ಭಾವಿಸುತ್ತಾರೆ. ಉದ್ಯೋಗದಲ್ಲಿ ಅಸಮಾಧಾನ ವಿದ್ದರೆ ಬೇಜಾರು ಬೇಡ. ಎಲ್ಲರೂ ಎಲ್ಲ ಸಮಯದಲ್ಲಿಯೂ ಒಂದೇ ರೀತಿ ಇರಲಿಕ್ಕಾಗುತ್ತಾ?
ಮಿಥುನ : ಕೆಟ್ಟ ಸುದ್ದಿಗಳು ಅವುಗಳ ಪಾಡಿಗೇ ಬರುತ್ತಿರುತ್ತವೆ. ಎದುರಿಸುವ ಶಕ್ತಿ ಇದ್ದರೆ ಆಯ್ತು. ಕಾರ್ಯಕ್ರಮಗಳ ಆಹ್ವಾನಗಳಿಂದ ಪ್ರಯಾಣ ಎದುರಾಗಬಹುದು. ನಿಮ್ಮ ಕೆಲಸ ಕಾರ್ಯಗಳನ್ನು ಗಮನಿಸುವವರಿಲ್ಲದಿದ್ದರೂ ಯಶಸ್ಸನ್ನು ಖಂಡಿತಾ ಗಮನಿಸುತ್ತಾರೆ.
ಕಟಕ : ಇವತ್ತು ನೀವು ತೆಗೆದುಕಳ್ಳುವ ನಿರ್ಧಾರ ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯದನ್ನು ಮಾಡಲಿದೆ. ಈಗ ಬರುವ ತೊಂದರೆಗಳಿಂದ ಪಾರಾಗುವ ಕೌಶಲ್ಯ ನಿಮ್ಮ ಬಳಿಯೇ ಇದೆ. ಹಣದ ಚೀಲಕ್ಕೆ ಕುತ್ತು ಬರುವುದಿಲ್ಲ.
ಸಿಂಹ : ಹೊಸ ಯೋಜನೆಗಳಿಗೆ ಜಯ ಸಿಗಲಿದೆ. ಆರೋಗ್ಯ ಸ್ವಲ್ಪ ಜೋಪಾನವಿರಲಿ. ವಿಪರೀತ ಕೆಲಸ ಟೇಬಲ್ ಮೇಲೆ ರಾಶಿ ಬಿದ್ದಿರುವುದನ್ನು ನೋಡಿಯೇ ಸುಸ್ತಾಗುತ್ತೀರಿ .
ಕನ್ಯಾ : ಅನಿರೀಕ್ಷಿತ ಧನಲಾಭ ಬರಲಿದೆ. ವಿದ್ಯಾ ಕ್ಷೇತ್ರದಲ್ಲಿರುವವರಿಗೆ ಯಶಸ್ಸು. ಬ್ಯಾಂಕ್ ವ್ಯವಹಾರವೇನಾದರೂ ಬಾಕಿ ಇದ್ದರೆ ಇಂದೇ ಮುಗಿಸಿ. ಇದು ಲಕ್ಕೀ ಡೇ.
ತುಲಾ : ಷೇರು ವ್ಯವಹಾರಗಳಲ್ಲಿ ಪ್ರಗತಿಯಿದೆ. ಪುಸ್ತಕ ಲಾಭ. ಹಳೇ ಲೆಕ್ಕಗಳೆಲ್ಲಾ ಚುಕ್ತವಾಗುತ್ತವೆ. ದಿನವೆಲ್ಲಾ ಉಲ್ಲಾಸದಿಂದಿರುತ್ತೀರಿ.
ವೃಶ್ಚಿಕ : ಇವತ್ತು ನಿರಾಳವಾಗಿರುತ್ತೀರಿ. ವಿದ್ಯಾ ಪ್ರಗತಿ . ಹೊಸ ಚಿಂತನೆ, ಕೆಲಸಗಳು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ. ಮತ್ತೊಮ್ಮೆ ಆರೋಗ್ಯ ಜೋಪಾನವಾಗಿರಲಿ.
ಧನಸ್ಸು :ಟೀಮ್ ವರ್ಕ್ ನಿಭಾಯಿಸುವುದರಲ್ಲಿ ಇವತ್ತು ಜಯ ಸಿಗುತ್ತದೆ. ಅದು ಆರ್ಥಿಕ ಕ್ಷೇತ್ರವಾಗಿದ್ದರೆ ನಿಮ್ಮ ಜೇಬು ತುಂಬುತ್ತದೆ. ಹೊಸ ಬಟ್ಟೆ ಖರೀದಿಸುತ್ತೀರಿ.
ಮಕರ : ಆದದ್ದು ಆಗಿ ಹೋಯಿತು ಅಂತ ಎಲ್ಲ ಮರೆತವರಂತೆ ಕಾಣುತ್ತೀರಿ. ನಿಮ್ಮ ಜವಾಬ್ದಾರಿಗಳು ನಿಮ್ಮನ್ನು ಬಿಟ್ಟು ಹೋಗಿಲ್ಲ. ಈಗ ಮೈಮರೆತರೆ ನಂತರ ಪಶ್ಚಾತ್ತಾಪ ಪಡುತ್ತೀರಿ.
ಕುಂಭ : ವ್ಯವಹಾರದಲ್ಲಿ ಇವತ್ತು ನಿಧಾನಗತಿ. ಹಾಗಂತ ರೋಸಿ ಹೋಗಬೇಕಾಗಿಲ್ಲ. ನೀವು ಹಾಕಿಕೊಂಡಿರುವ ಯೋಜನೆಗಳ್ಯಾವುದೂ ಕುಂಟುವುದಿಲ್ಲ.
ಮೀನ : ನೀವು ಹೇಳುವುದೆಲ್ಲವೂ ಚೆಂದವಾಗಿರುವುದಿಲ್ಲ ಎಂಬದನ್ನು ಮರೆಯಬಾರದು. ನೀವು ಮಾಡಿದ ನಿಯಮಗಳನ್ನು ನೀವೇ ಯಾಕೆ ಮುರಿಯುವುದು ?
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications