ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ವಿವಿಯಲ್ಲಿ ರೇಡಿಯೋ ಐಸೋಟೋಪ್‌ ಆನ್ವಯಿಕ ಕೇಂದ್ರ

By Staff
|
Google Oneindia Kannada News

ಮಂಗಳೂರು : ಮುಂಬಯಿಯ ಭಾಭಾ ಅಟೋಮಿಕ್‌ ಅಧ್ಯಯನ ಕೇಂದ್ರದ ಆನ್ವಯಿಕ ಐಸೋಟೋಪ್‌ ವಿಭಾಗದ ಸಹಯೋಗದೊಂದಿಗೆ ರೇಡಿಯೋ ಐಸೋಟೋಪ್‌ ಆಪ್ಲಿಕೇಷನ್‌ ಸೆಂಟರ್‌ ತೆರೆಯಲು ಮಂಗಳೂರು ವಿಶ್ವ ವಿದ್ಯಾಲಯ ಉದ್ದೇಶಿಸಿದೆ.

ಈ ಹಿನ್ನೆಲೆಯಲ್ಲಿ ಒಂದು ದಿನದ ವಿಚಾರ ಸಂಕಿರಣವೊಂದನ್ನು ಜನವರಿ 25ರಂದು ಮಂಗಳಗಂಗೋತ್ರಿಯಲ್ಲಿ ಆಯೋಜಿಸಲಾಗಿದ್ದು, ಭಾಭಾ ಅಣುಶಕ್ತಿ ಅಧ್ಯಯನ ಕೇಂದ್ರದ ಡಾ. ಎನ್‌. ರಾಮಮೂರ್ತಿ ರಾವ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ರೇಡಿಯೋ ಐಸೋಟೋಪ್‌ ಅಧ್ಯಯನ ಕೇಂದ್ರವನ್ನು ತೆರೆಯುವ ಮುಖ್ಯ ಉದ್ದೇಶ ಕೈಗಾರಿಕೆಗಳಲ್ಲಿ ರೇಡಿಯೋ ಐಸೋಟೋಪ್‌ ತಂತ್ರಜ್ಞಾನ ಬಳಕೆಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಎಂದು ವಿಶ್ವ ವಿದ್ಯಾಲಯದ ಸೈನ್ಸ್‌ ಆ್ಯಂಡ್‌ ಇನ್‌ಸ್ಟ್ರುಮೆಂಟೇಷನ್‌ ಕೇಂದ್ರದ ಡಾ. ಎಚ್‌. ಎಂ. ಸೋಮಶೇಖರಪ್ಪ ಮಂಗಳವಾರ ನೀಡಿರುವ ಸುದ್ದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಆರಂಭಕ್ಕೆ ಮುಂಚೆ ಸೆಮಿನಾರನ್ನು ಆಯೋಜಿಸುವ ಮೂಲಕ ರಾಷ್ಟ್ರೀಯ ಪ್ರಯೋಗಶಾಲೆಗಳು ಮತ್ತು ವಿಶ್ವ ವಿದ್ಯಾಲಯಗಳಿಗೆ ರೇಡಿಯೋ ಐಸೋಟೋಪ್‌ ಬಗೆಗೆ ಮಾಹಿತಿ ನೀಡಲಾಗುವುದು.

ಈ ತಂತ್ರಜ್ಞಾನ ಅಳವಡಿಕೆಯಿಂದ ಹೆಚ್ಚು ಉಪಯೋಗವಾಗುವುದು- ಎಣ್ಣೆ, ಪೆಟ್ರೋಲಿಯಂ, ರಾಸಾಯನಿಕಗಳು, ಪೆಟ್ರೋ ಕೆಮಿಕಲ್‌, ರಸಗೊಬ್ಬರಗಳು, ಸಿಮೆಂಟ್‌ ಮತ್ತು ಸ್ಟೀಲ್‌ ಕೈಗಾರಿಕೆಗಳಿಗೆ. ಮಣ್ಣಿನಡಿ ಹುಗಿದಿರುವ ಪೈಪ್‌ ಲೈನ್‌ಗಳಲ್ಲಿನ ಬಿರುಕು, ವೆಲ್ಡಿಂಗ್‌ನಲ್ಲಿ ಉಂಟಾಗಿರುವ ಹಾನಿಗಳು, ಸ್ಟೀಲ್‌ ಪಾತ್ರೆಗಳ ರಚನೆಗಳಲ್ಲಿ ರೇಡಿಯೋ ಐಸೋಟೋಪ್‌ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಬಲ್ಲುದು. ಈ ಎಲ್ಲ ವಿಷಯಗಳನ್ನು ಗಮನಿಸಿಕೊಂಡು ಭಾಭಾ ಅಣುಶಕ್ತಿ ಕೇಂದ್ರ ಐಸೋಟೋಪ್‌ಗಳ ಬಗ್ಗೆ ಅಧ್ಯಯನ ನಡೆಸುತ್ತಾ ಬಂದಿದೆ ಎಂದು ಸೋಮಶೇಖರಪ್ಪ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X