ಕಾಲುಚೆಂಡಿನ ಕೈಗೆ ನೊಬೆಲ್ ಶಾಂತಿ ಪ್ರಶಸ್ತಿ ! ಶಾಂತಂ ಪಾಪಂ
ಮಾನ್ಯರೆ
ಫುಟ್‌ಬಾಲ್‌ಗೆ ನೊಬೆಲ್ ಪ್ರಶಸ್ತಿ ಲಭ್ಯವಾದ ಸುದ್ದಿ ಓದಿ ನಗೆ ಬಂತು. ಅದು ಗಂಡಾಟವೇ ಇರಬಹುದು, ವೀರೋಚಿತ ಕ್ರೀಡೆಯೇ ಇರಬಹುದು, ಪೀಲೆ ಅಂತಹ ಮಹಾನ್ ಕಲಾವಿದನನ್ನು ನೀಡಿರಬಹುದು, ಆಟದ ನೆಪದಲ್ಲಿ ಬೆಳೆಯುವ ಮಕ್ಕಳ ಕಾಲಿನ ಸ್ನಾಯುಗಳಿಗೆ ಬಲತುಂಬುವ ಸಮರ್ಥ ವ್ಯಾಯಾಮವೇ ಆಗಿರಬಹುದು, ಆದರೆ , ಆಟದ ನೆಪದಲ್ಲಿ ರೋಷ ವರ್ಧಿಸುವ ಒರಟು ಕ್ರೀಡೆಗೆ ಜಾಗತಿಕ ಮಟ್ಟದ ಅತ್ಯುನ್ನತ , ಅದರಲ್ಲೂ ಶಾಂತಿಗೆ ನೀಡಲಾಗುವ ಪ್ರಶಸ್ತಿ ಸಿಕ್ಕಿದ್ದು ಕೇಳಿ ಉಕ್ಕಿಬಂದ ನಗೆಚಾಟಿ ಬೀಸಿ ಹೊಡೆಯಿತು.
ನಿಮ್ಮ ವರದಿಯಲ್ಲಿ ಉಲ್ಲೇಖಿಸಿರುವ ಹಾಗೆ ಈ ಆಟ ಸಾವುನೋವುಗಳನ್ನು ತಂದಿಕ್ಕುತ್ತದೆ. ಅರ್ಜೆಂಟೈನ ಬ್ರೆಜಿಲ್ ಪಂದ್ಯ ನಡೆಯುತ್ತಿದ್ದರೆ ಅಭಿಮಾನಿಗಳು ಆವೇಶದ ಭರದಲ್ಲಿ ಎಂಥ ಅನಾಹುತ ಮಾಡಲೂ ಹೇಸುವುದಿಲ್ಲ. ಇಂಗ್ಲೆಂಡ್‌ನಲ್ಲಿ ಈ ಚಿತ್ರ ಇನ್ನೂ ಭೀಕರ. ಅಲ್ಲಿ ಆಟ ನಡೆಯುವುದು ಸಾಮಾನ್ಯವಾಗಿ ಸ್ಟ್ಯಾಂಡ್‌ಗಳಿಗೆ ಅಭಿಮಾನಿಗಳು ಹಚ್ಚುವ ಬೆಂಕಿಯ ಬೆಳಕಲ್ಲೇ. ಅನೇಕ ಯುವಕರು ತಮ್ಮ ಜೀವ ಕಳೆದುಕೊಳ್ಳುವುದು ಈ ಹುಚ್ಚಾಟದ ಭರದಲ್ಲೇ. ಇಂಗ್ಲೆಂಡ್‌ನಲ್ಲಿ ಇವತ್ತು ಫುಟ್‌ಬಾಲ್ ಪಂದ್ಯ ನೋಡಲು ಸಭ್ಯರು ಅಂಜುತ್ತಾರೆ. ಹೂಲಿಗಾನ್‌ಗಳ ಆರ್ಭಟ ಅಲ್ಲಿ ಭಯದ ವಾತವರಣ ಮೂಡಿಸಿದೆ.
ಫುಟ್‌ಬಾಲ್ ಬದಲಿಗೆ ಟೆನಿಸ್‌ಗೆ ಕೊಟ್ಟಿದ್ದರೆ ನನಗೆ ಋಷಿ ಆಗುತ್ತಿತ್ತು. ಇಬ್ಬರೇ ಕುಳಿತು, ಶಾಂತಿಯಿಂದ ಏಕಾಗ್ರಚಿತ್ತದಿಂದ ಆಡುವ ಚೆಸ್‌ಗೆ ಕೊಟ್ಟಿದ್ದರೆ ಇನ್ನೂ ಸಂತೋಷವಾಗುತ್ತಿತ್ತು. ಕಾಲುಚೆಂಡಿನ ಕ್ರೀಡೆಗೆ ಮನ್ನಣೆ ನೀಡುವ ಭರದಲ್ಲಿ ಶಾಂತಿ ಪ್ರಶಸ್ತಿ ಯು ಫುಟ್‌ಬಾಲ್ ಪಾಲಾದುದನ್ನು ಕೇಳಿ ಮದರ್ ತೆರೆಸಾ ಅಂತಹವರ ಗೋರಿಯಲ್ಲಿ ಹೊರಳಾಡಿರಬೇಕು.
ಶ್ರೀನಿವಾಸ ಕಟ್ಟಿ
ಇಂಡೋನೇಷಿಯಾ
ವಾರ್ತಾಸಂಚಿಕೆ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications