ಗಣರಾಜ್ಯ ದಿನದಿಂದ ಬಿಎಸ್‌ಎನ್‌ಎಲ್ ಮೊಬೈಲ್ ಸೇವೆ
ಪಾಟ್ನಾ : ಭಾರತ್ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್) ಗಣರಾಜ್ಯೋತ್ಸವ ದಿನದಿಂದ ಮೊಬೈಲ್ ದೂರವಾಣಿ ಸೇವೆಯನ್ನು ಆರಂಭಿಸಲಿದೆ. ಭಾರತ್ ಮೊಬೈಲ್ ಎಂಬ ಹೆಸರಿನಲ್ಲಿ ಈ ಸೇವೆ ಸದ್ಯಕ್ಕೆ ಪಾಟ್ನಾ ಮತ್ತು ಹಾಜೀಪುರಕ್ಕೆ ಮಾತ್ರ ಸೀಮಿತ. ಹಂತಹಂತವಾಗಿ ಸೇವೆಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಬಿಹಾರ ಟೆಲಿಕಾಂ ವೃತ್ತದ ಚೀಫ್ ಜನರಲ್ ಮೇನೇಜರ್ ಆರ್.ಕೆ. ಭಾಟಿಯಾ ತಿಳಿಸಿದ್ದಾರೆ.
ಬಿಎಸ್‌ಎನ್‌ಎಲ್‌ನ ಮೊಬೈಲ್ ದೂರವಾಣಿ ಸೇವೆಯನ್ನು ಮೊದಲಿಗೆ ಪಡೆಯುತ್ತಿರುವ ಹಾಜೀಪುರ, ಕೇಂದ್ರ ಸಂಪರ್ಕಖಾತೆ ಸಚಿವ ರಾಮವಿಲಾಸ್ ಪಾಸ್ವಾನ್‌ರ ಲೋಕಸಭಾ ಕ್ಷೇತ್ರ ಎಂಬುದು ಮಹತ್ವದ ವಿಷಯ. ಈ ಮೊಬೈಲ್‌ದೂರವಾಣಿ ಸೇವೆಗಾಗಿ ಬುಧವಾರದಿಂದಲೇ ನೋಂದಣಿ ಕಾರ್ಯ ಆರಂಭವಾಗಲಿದೆ. ಮೊದಲು ನೋಂದಣಿ ಮಾಡಿದವರಿಗೆ ಮೊದಲ ಆದ್ಯತೆ. ಆರಂಭಿಕ ಹಂತದಲ್ಲಿ ಪಾಟ್ನಾದ ಸಾವಿರ ಮಂದಿ ಗ್ರಾಹಕರು ಹಾಗೂ ಹಾಜೀಪುರದ 500 ಜನರಿಗೆ ಮಾತ್ರ ಮೊಬೈಲ್ ಸೇವೆ ನೀಡಲಾಗುತ್ತಿದೆ.
ಗ್ರಾಹಕರು ಮೊಬೈಲ್ ಸಂಪರ್ಕಕ್ಕಾಗಿ 3000 ರುಪಾಯಿ ಭದ್ರತಾ ಠೇವಣಿ ಕಟ್ಟಬೇಕು. ಮೊಬೈಲ್ ಬೇಡ ಎನಿಸಿದಾಗ ಈ ಠೇವಣಿ ಮೊತ್ತವನ್ನು ವಾಪಸ್ ಪಡೆಯಬಹುದಾಗಿದೆ. ನೋಂದಣಿ ಶುಲ್ಕ ಹಾಗೂ ಆಕ್ಟಿವೇಷನ್ ಶುಲ್ಕ ರು. 50. ತಿಂಗಳಿಗೆ 400 ರುಪಾಯಿ ಬಾಡಿಗೆ ಹಾಗೂ 25 ರುಪಾಯಿ ಮಾಸಿಕ ಕ್ಲಿಪ್ ಚಾರ್ಜ್. ಆದರೆ, ಹಾಲಿ ಪಾಟ್ನಾ ವೃತ್ತಕ್ಕೆ ಸಂಬಂಧಿಸಿದಂತೆ ಈ ಶುಲ್ಕ ತುಸು ಹೆಚ್ಚಾಗಿದೆ ಎಂದೂ ಭಾಟಿಯಾ ಹೇಳಿದರು.
ಬಿಎಸ್‌ಎನ್‌ಎಲ್ ಪ್ರಸ್ತುತ ಒಳಬರುವ ಹಾಗೂ ಹೊರ ಹೋಗುವ ಎಲ್ಲ ಕರೆಗಳಿಗೂ ಪೀಕ್ ಅವರ್ಸ್‌ನಲ್ಲಿ 3.50 ರು ವಿಧಿಸಲಿದೆ. ಹಾಫ್ ಪೀಕ್ ಅವಧಿಯಲ್ಲಿ ಕರೆಗಳ ದರ 3 ರು. ಮೊಬೈಲ್ ಬಳಕೆಯ ನಂತರ ಹಣ ಪಾವತಿಸುವ ಸೌಲಭ್ಯ ಮಾತ್ರ ಗ್ರಾಹಕರಿಗೆ ಬೋನಸ್ ಆದೀತು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications