ಕಾರ್ಯಪಡೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ವೀರಪ್ಪನ್ ಮತ್ತೆ ಪರಾರಿ
ಪಾಲಕ್ಕಾಡ್ : ‘ವೀರಪ್ಪನ್ ಶ್ರೀಲಂಕಾಗೆ ಪಲಾಯನ ಮಾಡಿದ್ದಾನೆ. ರಾಜ್ಕುಮಾರ್ ಬಿಡುಗಡೆಯ ನಂತರ ವೀರಪ್ಪನ್ಗೆ ತಪ್ಪಿಸಿಕೊಳ್ಳಲು ಒಂದು ವಾರಗಳ ಕಾಲಾವಕಾಶವನ್ನು ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳು ನೀಡಿದವು ’ ಎಂದು ಜಯಲಲಿತಾ ಮೊನ್ನೆ ಆರೋಪಿಸಿದ್ದರು. ಆದರೆ ಇವತ್ತಿನ ಸಮಾಚಾರ ಹೇಳುತ್ತಿದೆ, ವೀರಪ್ಪನ್ ಕೇರಳ ಕಾಡಿನಲ್ಲಿದ್ದಾನೆ !
ಕರ್ನಾಟಕ ಹಾಗೂ ತಮಿಳುನಾಡು ಪೊಲೀಸರು ವೀರಪ್ಪನ್ ಚಲನವಲನದ ಬೆನ್ನುಹತ್ತಿ , ಮಾಹಿತಿಗಳನ್ನು ಕೆದಕಿ ಪತ್ತೆಹಚ್ಚಿ ನೀಡಿರುವ ಖಚಿತ ವರ್ತಮಾನದ ಮೇರೆಗೆ ಕೇರಳ ಪೊಲೀಸರು ರಾಜ್ಯಾದ್ಯಂತ ಕಟ್ಟೆಚ್ಚರವಂತೂ ವಹಿಸಿದ್ದಾರೆ. ಕಾಡುಗಳ್ಳ, ಅಪಹರಣಕಾರ, ನರಹಂತಕ ಇತ್ಯಾದಿ ಇತ್ಯಾದಿ ಕುಖ್ಯಾತನಾದ ವೀರಪ್ಪನ್ ಕರ್ನಾಟಕ ಹಾಗೂ ತಮಿಳುನಾಡು ಗಡಿಯಿಂದ ಕೇರಳದತ್ತ ಹೊರಟು ಅಲ್ಲೇ ಕಾಡಿನಲ್ಲಿ ಅಡಗಿದ್ದಾನೆ ಎಂದು ವಿಶೇಷ ಕಾರ್ಯಪಡೆ (ಎಸ್.ಟಿ.ಎಫ್) ನೀಡಿರುವ ಸುಳಿವಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಎಸ್.ಟಿ.ಎಫ್. ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಈ ಮಾಹಿತಿ ದೊರಕಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಗಡಿಯಲ್ಲಿ ಭದ್ರತಾ ಪಡೆ ಸರ್ಪಕಾವಲು ಕಾಯುತ್ತಿದೆ. ಪೊಲೀಸರು ಈಗ ಕೈಗೊಂಡಿರುವ ಬಿಗಿಬಂದೋಬಸ್ತ್ನಿಂದಾಗಿ ವೀರಪ್ಪನ್ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಹಿರಿಯ ಪೊಲೀಸ್ ಅಧಿಕಾರಿಗಳ ಅಂಬೋಣ.
ವೀರಪ್ಪನ್ ಶಿಕಾರಿಗೆ ಹಣ ನೀರಿನಂತೆ ಖರ್ಚಾಗುತ್ತಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಉಪಕರಣಗಳೂ ಕಾರ್ಯಪ್ರವೃತ್ತವಾಗಿವೆ. ಆದರೂ ವೀರಪ್ಪನ್ ಎಲ್ಲಿದ್ದಾನೆ ಎಂಬುದು ಇನ್ನೂ ನಿಗೂಢ. ಈ ಕಾರ್ಯಾಚರಣೆಯಲ್ಲಾದರೂ ವೀರಪ್ಪನ್ ಪೊಲೀಸರ ಕೈಗೆ ಜೀವಸಹಿತ ಸಿಗುತ್ತಾನೆಯೇ ?ಯಕ್ಷಪ್ರಶ್ನೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications