ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಹೊಸ ಹೊಳಹಿನ ಹೊರಳಿನಲ್ಲಿದ್ದೀರಿ. ಅದು ನಿಮ್ಮನ್ನು ಎತ್ತ ಒಯ್ದೀತು ಅನ್ನುವುದು ನಿಮ್ಮ ನಿರ್ಧಾರಗಳನ್ನೆ ಅವಲಂಬಿಸಿದೆ. ಅಡಿಯಿಡುವ ಮುನ್ನ ಮುನ್ನೆಚ್ಚರಿಕೆ ಸಾಕಷ್ಟಿರಲಿ.ವೃಷಭ :ಬೇಸರದ ಮೂಡಿನಲ್ಲಿದ್ದೀರಿ. ಎಲ್ಲರೂ ನಿಮ್ಮನ್ನೇ ದಿಟ್ಟಿಸುತ್ತಿದ್ದಾರೆ. ಈ ಹಂತದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸುತ್ತವೆ.
ಮಿಥುನ : ಖುಷಿಯ ಲಹರಿ ಮುಂದುವರಿಯಲಿದೆ. ಸೃಜನಶೀಲ ಚಟುವಟಿಕೆಗಳಲ್ಲಿ ಯಶಸ್ಸನ್ನು ಕಾಣುತ್ತೀರಿ. ಬಿಟ್ಟೂ ಬಿಡದೆ ಕಾಡುತ್ತಿದ್ದ ದೈಹಿಕ ನೋವುಗಳೆಲ್ಲ ರಜೆಯ ಮೇಲಿವೆ.
ಕಟಕ : ಗೆಲ್ಲಬೇಕೆಂದೆ ಮುನ್ನುಗ್ಗುವ ಸ್ವಭಾವವೆ ನಿಮ್ಮನ್ನು ಈ ದಿನ ಕಾಯಲಿದೆ. ಸಿಗುವ ಯಶಸ್ಸು ಭಾರೀ ಅನ್ನುವಂಥದ್ದಲ್ಲವಾದರೂ ಅದು ಗೆಲುವು ಅನ್ನುವುದೇ ಮುಖ್ಯ. ಧನಲಾಭ ಯೋಗವೂ ಇದೆ.
ಸಿಂಹ : ಕೋರ್ಟ್ ವ್ಯವಹಾರಗಳಲ್ಲಿ ತೊಂದರೆ. ಶತ್ರುಭಯ. ಅನಿರೀಕ್ಷಿತ ಪ್ರಯಾಣ. ಏನಪ್ಪಾ ಇದು ಗ್ರಹಚಾರ ಎಂದು ಕಂಗಾಲಾದರೆ ಆರೋಗ್ಯವೂ ಕೈ ಕೊಟ್ಟೀತು. ಇದೆಲ್ಲಾ ತಾತ್ಕಾಲಿಕ.
ಕನ್ಯಾ : ಲಾಟರಿ ಸಟ್ಟಾ ವ್ಯವಹಾರಗಳಲ್ಲಿ ಲಾಭ ಕಾಣುತ್ತೀರಿ. ದೈವಾನುಗ್ರಹ ನಿಮ್ಮ ಮೇಲೆ ಸಂಪೂರ್ಣವಾಗಿದೆ. ಯಾವುದಾದರೂ ಹೊಸ ಉದ್ದಿಮೆಗೆ ಕೈ ಹಾಕುವಂತಿದ್ದರೆ, ಇಂದು ಶುಭ ಮುಹೂರ್ತ.
ತುಲಾ : ಒಳಗಣ್ಣು ಸುಳ್ಳೆಂದು ಬಲವಾಗಿ ನಂಬಿರುವಾಗ ಹೊರಗಣ್ಣಿನ ವಾದವನ್ನೇ ನೆಚ್ಚುವುದರಲ್ಲಿ ಅರ್ಥವೇನೂ ಇಲ್ಲ . ಪ್ರಪಂಚದಲ್ಲಿ ಪರಿಹರಿಸಲಾಗದ್ದು ಯಾವುದೂ ಇಲ್ಲ . ನೀವು ಚಿಂತೆ ಬಿಡಿ.
ವೃಶ್ಚಿಕ : ಯಾರ ಮೇಲಾದರೂ ಮುನಿಸಿಕೊಂಡಿದ್ದೀರಾ? ನಿಮ್ಮ ಶಕ್ತಿ ಅಪವ್ಯಯ ಅಷ್ಟೇ. ಗಳಿಗೆಗೊಂದು ಮಾತನಾಡುವ ಮಿತ್ರರ ಬಗ್ಗೆ ಎಚ್ಚರಿಕೆಯಿಂದಿರಿ.
ಧನಸ್ಸು :ವೃತ್ತಿಯಲ್ಲಿ ಯಶಸ್ಸು ಕಾಣುತ್ತೀರಿ. ಆಫೀಸಿನಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯುತ್ತಿದೆ. ಬಡ್ತಿಯೂ ಹೊಸಿತಿಲಲ್ಲೇ ಕಾಯುತ್ತಿದೆ. ಕುಟುಂಬದಲ್ಲೂ ಬಡ್ತಿ ಪಡೆಯುತ್ತಿದ್ದೀರಿ.
ಮಕರ : ಕನಸಿನಲ್ಲಿ ಹೆಜ್ಜೆ ಹಾಕಿದ್ದು ಸಾಕು. ನೀವೀಗ ಸರಸ್ವತಿಯಾಗುವ ಹೊತ್ತಾದ್ದರಿಂದ ಎಲ್ಲಾ ಭ್ರಮೆಗಳನ್ನು ಹರಿದುಕೊಳ್ಳಲೇಬೇಕು. ಖುಷಿಯ ದಿನ, ಖುಷಿಯಾಗಿರಿ.
ಕುಂಭ : ಕೌಟುಂಬಿಕ ವ್ಯವಹಾರಗಳ ಬಗ್ಗೆ ನಿಗಾ ವಹಿಸಿ. ನಮ್ಮನ್ನು ನಿರ್ಲಕ್ಷಿಸಿದ್ದಾರೆ ಅನ್ನುವ ಗುಮಾನಿ ಅವರಲ್ಲಿ ಬಾರದಂತೆ ನಿಮ್ಮ ದಿನಚರಿಯನ್ನು ಬದಲಿಸಿಕೊಳ್ಳುವುದು ಉತ್ತಮ.
ಮೀನ : ಆರೋಗ್ಯ ಕೈ ಕೊಡುತ್ತಿದೆ. ಮಾನಸಿಕವಾಗಿಯೂ ಅಸ್ವಸ್ಥರಾಗಿದ್ದೀರಿ. ಇದಕ್ಕೆಲ್ಲ ನಿಮ್ಮ ಚಿತ್ತ ಚಾಂಚಲ್ಯವೇ ಕಾರಣ. ದೇಹವೇ ದೇಗುಲ ಅನ್ನುವುದು ನಿಮಗೆ ಅನ್ವಯಿಸುವಂಥದ್ದಲ್ಲ .
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications