Get Updates
Get notified of breaking news, exclusive insights, and must-see stories!

ಉನ್ನತ ಶಿಕ್ಷಣದವರೆಗೂ ಕನ್ನಡ ಬೋಧನಾ ಮಾಧ್ಯಮವಾಗಿಲಿ - ಬರಗೂರು

ಬೆಂಗಳೂರು : ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದ ವರೆಗೆ ಕನ್ನಡ ಭಾಷೆಯನ್ನೇ ಬೋಧನಾ ಮಾಧ್ಯಮವನ್ನಾಗಿ ಜಾರಿಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಈ ಕುರಿತ ವರದಿಯಾಂದನ್ನು ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರಿಗೆ ಮಂಗಳವಾರ ಸಲ್ಲಿಸಿ- ಅಂಗನವಾಡಿ, ಕಿಂಡರ್‌ಗಾರ್ಡನ್‌ ಮತ್ತು ನರ್ಸರಿ ಶಾಲೆಗಳೂ ಸೇರಿದಂತೆ ಎಲ್ಲೆಡೆಯೂ ಕನ್ನಡ ಭಾಷೆಯನ್ನೇ ಬೋಧನಾ ಮಾಧ್ಯಮವನ್ನಾಗಿ ಜಾರಿಗೆ ತರಲು ರೂಪು ರೇಷೆಗಳನ್ನು ಸಿದ್ಧಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಮುಖ್ಯಮಂತ್ರಿಗಳ ಭೇಟಿಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕನ್ನಡೇತರ ಶಾಲೆಗಳಲ್ಲಿಯೂ ಕನ್ನಡ ಕಲಿಕೆ ಕಡ್ಡಾಯವಾಗಿರಬೇಕು ಎಂದ ಬರಗೂರು, 1985ರ ಹೈಕೋರ್ಟ್‌ ತೀರ್ಪನ್ನು ಉಲ್ಲೇಖಿಸಿ, ಅಂತಹ ಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನು ನೇಮಕ ಮಾಡುವಂತೆ ಸರಕಾರವನ್ನು ಆಗ್ರಹಿಸಿದರು. ಉನ್ನತ ಶಿಕ್ಷಣ ವಲಯದಲ್ಲಿ ಹಾಗೂ ಎಲ್ಲ ಪದವಿ ತರಗತಿಗಳಲ್ಲಿ (ಕೈಗಾರಿಕಾ ತರಬೇತಿ ಕೇಂದ್ರಗಳು, ಬಿಎಡ್‌, ಟಿಸಿಎಚ್‌, ಕಾನೂನು) ಕನ್ನಡ ಕಲಿಕೆ ಕಡ್ಡಾಯವಾಗಬೇಕು ಮತ್ತು ಕೃಷಿ ವಿಶ್ವ ವಿದ್ಯಾಲಯ, ಇಂಜಿನಿಯರಿಂಗ್‌, ಮೆಡಿಕಲ್‌ ಶಿಕ್ಷಣ ತರಗತಿಗಳ ಮೊದಲೆರಡು ಸೆಮಿಸ್ಟರ್‌ಗಳಲ್ಲಿಯೂ ಕನ್ನಡ ಭಾಷಾ ಪಾಠ ಇರಬೇಕು.

ಕಂಪ್ಯೂಟರ್‌ ಕೋರ್ಸುಗಳಲ್ಲಿಯೂ ಕನ್ನಡ ಪಾಠವಿದ್ದು, ಕನ್ನಡ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣ ಪ್ರವೇಶದಲ್ಲಿ ಪ್ರಾಶಸ್ತ್ಯ ನೀಡಬೇಕು. ಗಡಿ ಪ್ರದೇಶದ ಕನ್ನಡಿಗರ ಸಮಸ್ಯೆ ಪರಿಹರಿಸಲು ಸರಕಾರ ಮುಂದಾಗಬೇಕು ಎಂದು ಹೇಳಿದ ಬರಗೂರು, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಸಭೆ ಕರೆಯುವಂತೆ ಕೃಷ್ಣ ಅವರನ್ನು ಕೋರಲಾಗಿದೆ ಎಂದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+