ಹುಬ್ಬಳ್ಳಿಯಲ್ಲಿ ಮನೆ ದರೋಡೆ, ಭದ್ರಾವತಿ ಬಸ್‌ನಲ್ಲಿ ಕಪಟ ನಾಟಕ
ಹುಬ್ಬಳ್ಳಿ : ಮಂಗಳವಾರ ನಸುಕಿನಲ್ಲಿ ಹುಬ್ಬಳ್ಳಿಯ ಮನೆಯಾಂದರ ಮೆಲೆ ದಾಳಿ ಮಾಡಿದ ದುಷ್ಕರ್ಮಿಗಳ ತಂಡ ಮನೆವಾಸಿಗಳನ್ನು ಗಾಯಗೊಳಿಸಿ ನಗನಾಣ್ಯ ಲೂಟಿ ಹೊಡೆದಿದ್ದಾರೆ. ಮನೆಯಲ್ಲಿ ಗಂಡ ಹೆಂಡತಿ ಇದ್ದರು, ದುರುಳರು ಅವರ ಕಿವಿಯ ಮೇಲೆ ಹೊಡೆದರು. ಆಗ ಅವರಿಬ್ಬರೂ ಪ್ರಜ್ಞೆ ತಪ್ಪಿ ಬಿದ್ದರು. ಪುಂಡರು ಏಳು ತೊಲ ಬಂಗಾರ ಹಾಗೂ 25 ಸಾವಿರ ರೂಪಾಯಿಗಳನ್ನು ಕೊಳ್ಳೆ ಹೊಡೆದು ಕತ್ತಲಲ್ಲಿ ಪರಾರಿ ಆದರು.
ಪ್ರಜ್ಞೆ ಬಂದ ನಂತರ ಹಲ್ಲೆಗೆ ಗುರಿಯಾಗಿದ್ದ ನಾರಾಯಣ್ ಮುಂಜಾನೆ 4 ಗಂಟೆಗೆ ಪೊಲೀಸ್‌ಠಾಣೆಗೆ ಬಂದು ಘಟನೆ ವಿವರಿಸಿದರು ಎಂದು ಡಿಎಸ್‌ಪಿ ಸುರೇಶ್ ಯುಎನ್‌ಐ ವಾರ್ತಾ ಸಂಸ್ಥೆಯ ಪ್ರತಿನಿಧಿಗೆ ತಿಳಿಸಿದರು. ಡಾಗ್ ಸ್ಕ್ವಾಡ್ ಕರೆಸಿ ಪತ್ತೆ ಹಚ್ಚಲು ಪ್ರಯತ್ನ ನಡೆಸಲಾಯಿತು. ಆದರೆ ಪ್ರಯೋಜನವಾಗಿಲ್ಲ. ಈ ಘಟನೆ ದೋಚಿಕೊಂಡು ಹೋಗುವ ಕಳ್ಳರ ಕಾಟವೋ ಅಥವಾ ನುಗ್ಗಿ, ಹಲ್ಲೆ ಮಾಡಿ ದರೋಡೆ ಮಾಡುವ ತಂಡದವರ ಕೈವಾಡವೋ ? ಪತ್ತೆ ಆಗಬೇಕು ಎಂದು ಪೋಲೀಸರು ಹೇಳಿದ್ದಾರೆ.
ಅಮಾಯಕರು ಕೊಡುವ ಟೀ ಕುಡಿಯಬಾರದು : ಹುಬ್ಬಳ್ಳಿಯಿಂದ ಭದ್ರಾವತಿಗೆ ಹೊರಟಿದ್ದ ಬಸ್‌ನಲ್ಲಿ ಕಣ್ಣಿಗೆ ಮಣ್ಣೆರಚಿ ಹಣದೋಚಿದ ಘಟನೆ ವರದಿ ಆಗಿದೆ. ಮಾರ್ಗ ಮಧ್ಯದಲ್ಲಿ ಬಸ್ ಕಾಫಿಗೆ ನಿಂತಾಗ ಒಬ್ಬಾತ ಸಹಪ್ರಯಾಣಿಕನಿಗೆ ಟೀ ತಂದು ಕೊಟ್ಟ. ಆದರಲ್ಲಿ ಪ್ರಜ್ಞೆ ತ್ಪಪ್ಪಿಸುವ ಪದಾರ್ಥವನ್ನು ಬೆರಸಿದ್ದ. ಆ ಟೀ ಕುಡಿದ, ಇಂತಹ ವಂಚನೆಯನರಿಯದ ವ್ಯಕ್ತಿ ನಿಸ್ತೇಜನಾದಾಗ ಫಟಿಂಗ ಆತನ ಸಾಮಾನು ಸರಂಜಾಮುಗಳನ್ನು ಲಪಟಾಯಿಸಿದ.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications