Get Updates
Get notified of breaking news, exclusive insights, and must-see stories!

ಕೋಟಿ ರುಪಾಯಿ ವೆಚ್ಚದಲ್ಲಿ ಪಿನಾಕಿನಿ ನದಿಗೆ ಅಣೆಕಟ್ಟು ನಿರ್ಮಾಣ

ಮಧುಗಿರಿ : ಕೋಲಾರ ಜಿಲ್ಲೆಯ ಗೌರಿಬಿದನೂರಿನಲ್ಲಿ ಹರಿಯುವ ಉತ್ತರ ಪಿನಾಕಿನಿ ನದಿಗೆ ಅಣೆಕಟ್ಟೆ ನಿರ್ಮಿಸುವ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಒಂದು ಕೋಟಿ ರುಪಾಯಿ ಅನುದಾನ ಮಂಜೂರಾಗಿದೆ.

ಈ ವಿಷಯವನ್ನು ಲೋಕಸಭಾ ಸದಸ್ಯ ಆರ್‌.ಎಲ್‌. ಜಾಲಪ್ಪ ತಿಳಿಸಿದ್ದಾರೆ. ಕಡಗತ್ತೂರು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಯೋಜನೆ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪಿನಾಕಿನಿಗೆ ಅಣೆಕಟ್ಟೆ ನಿರ್ಮಿಸಿದಲ್ಲಿ ಗೌರಿಬಿದನೂರು ತಾಲೂಕಿನ ಮೂರು ಹಳ್ಳಿಗಳ 1500 ಎಕರೆ ಭೂಮಿಗೆ ನೀರೊದಗಿಸಬಹುದಾಗಿದೆ ಎಂದರು.

ಈ ನದಿಗೆ ಅಣೆ ನಿರ್ಮಿಸಿದರೆ, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಡಗತ್ತೂರು, ತಿಂಗಳೂರು ಹಾಗೂ ಯಕಾರ್ಲಹಳ್ಳಿ ಗ್ರಾಮಗಳ ಸುಮಾರು 1500 ಎಕರೆ ಪ್ರದೇಶವೂ ನೀರಾವರಿಗೆ ಒಳಪಡುತ್ತದೆ. ಇದರಿಂದಾಗಿ ತಾಲೂಕಿನ ರೈತರು ವರ್ಷಕ್ಕೆ ಎರಡು ಬೆಳೆ ಬೆಳೆಯುವ ಮೂಲಕ ಅರ್ಥಿಕವಾಗಿ ಸದೃಢರಾಗುತ್ತಾರೆ ಎಂದೂ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+