ಮ್ಯಾಚ್‌ಫಿಕ್ಸಿಂಗ್‌ಗಾಗಿ ಆಸ್ಟ್ರೇಲಿಯಾದ ಬುಕ್ಕಿಯಿಂದ ವೇಶ್ಯಾವಾಟಿಕೆ?
ಮೆಲ್ಬೋರ್ನ್ : ಸಾಲಾಗಿ 15 ಟೆಸ್ಟ್‌ಗಳ ದಾಖಲೆ ವಿಜಯ ದಕ್ಕಿಸಿಕೊಂಡಿರುವ ವಿಶ್ವ ಚಾಂಪಿಯನ್ ಕಾಂ-ಗರೂಗಳಿಗೀಗ ಕಸಿವಿಸಿ. ಪಾಕ್‌ನ ಮಾಜಿ ಕ್ರಿಕೆಟಿಗ ಕಾಸಿಂ ಓಮರ್ ಕಳ್ಳಾಟ ಕುರಿತ ಹೊಸ ವರಸೆಯನ್ನು ಹೊರ ಹಾಕಿದ್ದು, ಈ ಕುರಿತು ತನಿಖೆ ನಡೆಸುವಂತೆ ಐಸಿಸಿಗೆ ಒತ್ತಡ ತಂದಿರುವುದೇ ಇದಕ್ಕೆ ಕಾರಣ.
ಆಸ್ಟ್ರೇಲಿಯಾದ ಒಬ್ಬ ಬುಕ್ಕಿ ಸಿಡ್ನಿ ಹಾಗೂ ಮೆಲ್ಬೋರ್ನ್ ಹೊಟೇಲುಗಳಲ್ಲಿ ವಿದೇಶೀ ಕ್ರಿಕೆಟಿಗರನ್ನು ವೇಶ್ಯೆಯರ ಜೊತೆ ಮಲಗಿಸಿ, ಕಳ್ಳಾಟ ಆಡಲು ಪ್ರೇರೇಪಿಸಿದ್ದಾನೆ ಎಂಬುದು ಕಾಸಿಂ ಆರೋಪ. ಈ ಕುರಿತಂತೆ 23 ವೇಶ್ಯೆಯರ ಪಟ್ಟಿಯನ್ನೂ ಐಸಿಸಿಗೆ ಸಲ್ಲಿಸಿರುವ ಕಾಸಿಂ, ತನಿಖೆ ನಡೆಸುವಂತೆ ಒತ್ತಡ ಹೇರಿದ್ದಾರೆ. ಬ್ರಿಟನ್ನಿನ ದಿ ಅಬ್ಸರ್ವರ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಗೆಲ್ಲುವ ಕುದುರೆ ಆಸ್ಟ್ರೇಲಿಯಾದ ನೈತಿಕತೆಗೆ ಕುಂದು ತರುವಂಥ ಈ ಸುದ್ದಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಾಲ್ಕಂ ಸ್ಪೀಡ್ ವಿಷಾದದ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ .....
1984ರಿಂದ 87ರ ಅವಧಿಯಲ್ಲಿ ಕ್ರಿಕೆಟ್ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಆರೋಪ ಕುರಿತು ಆಸ್ಟ್ರೇಲಿಯಾ ಆಟಗಾರರು ವಿಚಾರಣೆಗೆ ಒಳಗಾಗಿಲ್ಲ. ಐಸಿಸಿಯ ಭ್ರಷ್ಟಾಚಾರಿ ವಿರೋಧಿ ದಳದ ಇಬ್ಬರು ಅಧಿಕಾರಿಗಳು ಕಾಸಿಂ ಅವರ ಈ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದು, ಆಸ್ಟ್ರೇಲಿಯಾದ ಯಾವ ಆಟಗಾರರನ್ನೂ ಈ ವಿಷಯದಲ್ಲಿ ವಿಚಾರಣೆಗೆ ಒಳಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆ ಬುಕ್ಕಿ ಯಾರೆಂದು ನಮಗೆ ಗೊತ್ತಿಲ್ಲ. ಒಂದು ವೇಳೆ ಹಾಗೊಬ್ಬ ಬುಕ್ಕಿ ಇರುವುದು ಸಾಬೀತಾದಲ್ಲಿ ಕ್ರಿಕೆಟ್ಟಿನೊಂದಿಗೆ ಆತನ ಕೆಟ್ಟ ಕೊಂಡಿಯನ್ನು ಕಿತ್ತೆಸೆಯಲು ನಾವು ಬದ್ಧ. ವಿದೇಶೀ ಆಟಗಾರರು ಮತ್ತು ಅಧಿಕಾರಿಗಳು ಈ ವಿಷಯದಲ್ಲಿ ಸತ್ಯ ಹೇಳಬೇಕಷ್ಟೆ.
ವಿಚಾರಣೆಗೆ ನಾ ಒಲ್ಲೆ- ಮಾರ್ಕ್ ವಾ : ಭಾರತೀಯ ಬುಕ್ಕಿ ಜೊತೆಗಿನ ವ್ಯವಹಾರ ಕುರಿತಂತೆ ಐಸಿಸಿಯ ಭ್ರಷ್ಟಾಚಾರ ವಿರೋಧಿ ದಳದ ಅಧಿಕಾರಿಗಳೊಂದಿಗೆ ಮುಖಾಮುಖಿಯಾಗಲು ಒಪ್ಪಿದ್ದ ಆಸ್ಟ್ರೇಲಿಯಾದ ಕ್ರಿಕೆಟಿಗ ಮಾರ್ಕ್ ವಾ ಈಗ ತಮ್ಮ ನಿರ್ಧಾರ ಬದಲಿಸಿದ್ದಾರೆ.
ತಮ್ಮ ವಕೀಲ ರಾಫ್ ಪಿಸಾನೋ ಜೊತೆ ಚರ್ಚಿಸಿದ ನಂತರ ವಿಚಾರಣೆಗೆ ಹಾಜರಾಗದಿರಲು ತೀರ್ಮಾನಿಸಿರುವುದಾಗಿ ವಾ ಸೋಮವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೇಲಿಂದ ಮೇಲೆ ಪ್ರಶ್ನೆಗಳನ್ನು ಎದುರಿಸಿದಲ್ಲಿ ಆಟಕ್ಕೆ ಕುದುರಿಕೊಂಡಿರುವ ತಮ್ಮ ಮನಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂಬುದು ವಿಚಾರಣೆಗೆ ಹಾಜರಾಗದಿರಲು ವಾ ಕೊಟ್ಟಿರುವ ಸಬೂಬು.
ಭಾರತದ ಬುಕ್ಕಿ ಎಂ.ಕೆ . ಗುಪ್ತಾ , ಮಾರ್ಕ್ ವಾ ಅವರಿಂದ ಕೆಲ ಮಾಹಿತಿ ಪಡೆದು, ದುಡ್ಡು ಕೊಟ್ಟಿರುವುದಾಗಿ ಬಿಸಿಐಗೆ ತಿಳಿಸಿದ್ದರು. ಈ ಆರೋಪವನ್ನು ವಾ ತಳ್ಳಿ ಹಾಕಿದ್ದರು. ವಾ ತಮ್ಮ ನಿರ್ಧಾರ ಬದಲಿಸಿರುವುದು ಬುಕ್ಕಿಯ ತಳ- ಬುಡ ತಿಳಿಯುವ ಐಸಿಸಿಯ ಕಾರ್ಯಕ್ಕೆ ಪೆಟ್ಟು ಕೊಟ್ಟಿದೆ.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications