ಹಾಡುಹಬ್ಬಕ್ಕೆ ಹೋಗಿದ್ದಿರಾ? ಇಲ್ಲವಾದಲ್ಲಿ ಮುಂದಿನ ದಿನಾಂಕ ಬರೆದಿಟ್ಟುಕೊಳ್ಳಿ
ಬೆಂಗಳೂರು : ವಿಹಾರಕ್ಕೆ ಕಬ್ಬನ್ ಪಾರ್ಕಿಗೆ ಹೋಗ್ತೀರಿ ಅಂತಾದ್ರೆ ನೀವು ತಿಂಗಳ ಮೂರನೇ ಭಾನುವಾರವನ್ನು ಆಯ್ಕೆ ಮಾಡಿಕೊಳ್ಳಿ. ಸೆಕೆಂಡ್ ಸಾಟರ್‌ಡೇ ಸ್ಕಿಪ್ ಮಾಡಿದರೂ ಸರಿ. ಮೂರನೇ ಭಾನುವಾರ ಕಬ್ಬನ್ ಪಾರ್ಕಿನಲ್ಲಿ ವಾದ್ಯ ಮೇಳವಿರುತ್ತದೆ.
ಭಾರತೀಯ ವಾಯುಸೇನೆ ಇನ್ನು ಮುಂದೆ ಪ್ರತಿ ತಿಂಗಳ ಮೂರನೇ ಭಾನುವಾರ ಕಬ್ಬನ್ ಪಾರ್ಕಿನಲ್ಲಿ ವಾದ್ಯಗೋಷ್ಠಿ ನಡೆಸಲಿದೆ. ಬೆಂಗಳೂರಿನ ಹಿರಿಯರಿಗೆ ಇದೇನೂ ಹೊಸತಲ್ಲ. ಹಿಂದೆ ಅಂದರೆ ನಮ್ಮ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಹೆಗಲಿಗೆ ಪಾಟಿ ಚೀಲ ತಗಲು ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾಗ ಈ ತರಹ ದೇಶಭಕ್ತಿ ಗೀತೆಯ ವಾದ್ಯಗೋಷ್ಠಿ ಇರುತ್ತಿತ್ತಂತೆ. ಅದನ್ನು ನೆನಪಿಸಿಕೊಂಡೇ ಮತ್ತೆ ವಾದ್ಯಗೋಷ್ಠಿಯನ್ನು ಆರಂಭಿಸಬೇಕು ಅಂತ ಸಚಿವರೇ ಖುದ್ದು ಆದೇಶಿಸಿದ್ದಾರೆ. ದೊಡ್ಡವರ ಆಸೆಗಳು ಈಡೇರದಿದ್ದೇತೆ? ಇದೀಗ ವಾದ್ಯಗೋಷ್ಠಿ ಶುರುವಾಗಿದೆ. ಲಾಭ ಎಲ್ಲರದೂ.
ಬ್ಯಾಂಡ್ ಸೆಟ್‌ನಲ್ಲಿರುವುದು ಒಟ್ಟು 30 ಮಂದಿ ಕಲಾವಿದರು. ಬ್ಯಾಂಡ್ ಮಾಸ್ಟರ್ ಜಿ.ಕೆ. ನಾಯರ್ ವಾದ್ಯ ಗೋಷ್ಠಿಯ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಅಂದ ಹಾಗೆ ಇರುವ 8 ಹಿತ್ತಾಳೆಯ ಹಳೇ ಬ್ಯಾಂಡ್‌ಗಳಲ್ಲಿ ಒಂದು ಬ್ಯಾಂಡ್‌ಗೆ ಇಷ್ಟುದ್ದ ಇತಿಹಾಸವೇ ಇದೆ. 1944ರಲ್ಲಿ ರೋಹತ್‌ನ ವಾಯು ಸೇನಾ ನಿಲ್ದಾಣದಲ್ಲಿ ಇದು ಶುರುವಾಯಿತು. ಅಲ್ಲಿಂದ ಅಂಬಾಲಾಕ್ಕೆ ಹೋಗಿ ನಂತರ ಬೆಂಗಳೂರು ಸೇರಿಕೊಂಡಿದೆ. ಜಿ.ಕೆ. ನಾಯರ್ ಕೂಡ ಅಷ್ಟೇ, 31 ವರ್ಷಗಳ ತುಂಬು ಅನುಭವ ಇರುವ ಹಿರಿಯರು. ವಿಶಿಷ್ಟ ಸೇವಾ ಪ್ರಶಸ್ತಿ ವಿಜೇತರು.
ಒಟ್ಟಿನಲ್ಲಿ ತಿಂಗಳಿಗೊಮ್ಮೆ ಕಬ್ಬನ್ ಪಾರ್ಕಿನಲ್ಲಿ ದೇಶಭಕ್ತಿಯ ಪ್ರಾಸ ಬದ್ಧ ಸಾಲುಗಳು. ರೋಮ ನಿಮಿರಿಸುವ ಸಾಲು ಸಾಲು ಹಾಡುಗಳು. ಝಲ್ಲೆನ್ನುತ್ತಲೇ ಎದೆ ತಾಳ ಹಾಕುವಂತೆ ಮಾಡುವ ಬ್ಯಾಂಡ್ ಸೆಟ್‌ಗಳು. ನಿಮ್ಮ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ ಮೂರನೇ ಭಾನುವಾರ, ಸ್ಥಳ ಕಬ್ಬನ್ ಪಾರ್ಕ್ !
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications