ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಹೊಸದೊಂದು ಆಯೋಗ

By Staff
|
Google Oneindia Kannada News

ನವದೆಹಲಿ : ಮಕ್ಕಳ ಹಕ್ಕನ್ನು ಪರಾಮರ್ಶಿಸುವ ಮತ್ತು ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಸರಕಾರವು ರಾಷ್ಟ್ರೀಯ ಮಕ್ಕಳ ಆಯೋಗವೊಂದನ್ನು ರಚಿಸುವ ಉದ್ದೇಶ ಹೊಂದಿದೆ.

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನಗೊಳಿಸುವ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸಮಾವೇಶದ ಉದ್ಘಾಟನಾ ಭಾಷಣದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಮುರಳಿ ಮನೋಹರ ಜೋಶಿ ಈ ವಿಷಯ ತಿಳಿಸಿದರು. ಆರೋಗ್ಯ, ಪೋಷಕಾಂಶ ಹಾಗೂ ಸಾಮಾಜಿಕ ಕ್ಷೇತ್ರಗಳ ಪ್ರತಿನಿಧಿಗಳು ಈ ಆಯೋಗದಲ್ಲಿರುತ್ತಾರೆ.

ಸಾಕ್ಷರತೆಗೂ ಬಾಲ ಕಾರ್ಮಿಕ ಪದ್ಧತಿಗೂ ಹತ್ತಿರದ ಸಂಬಂಧವಿರುವುದರಿಂದ ಮಾನವ ಸಂಪನ್ಮೂಲ ಇಲಾಖೆಯು ಈ ವಿಷಯವನ್ನು ಕೈಗೆತ್ತಿಕೊಂಡಿದೆ. ದೇಶದ ಯಾವ ಮಗುವೂ ಸಾಕ್ಷರತೆ ಮತ್ತು ಆರೋಗ್ಯಗದಿಂದ ವಂಚಿತನಾಗಬಾರದು ಎಂಬುದೇ ಉದ್ದೇಶಿತ ಆಯೋಗದ ಮುಂದಿನ ಗುರಿ ಎಂದು ಜೋಶಿ ಹೇಳಿದರು.

ಉದ್ಘಾಟನಾ ಭಾಷಣದಲ್ಲಿ ಕಾರ್ಮಿಕ ಸಚಿವ ಸತ್ಯನಾರಾಯಣ ಜೇಟಿಯಾ ಬಾಲ ಕಾರ್ಮಿಕತೆಯ ನಿರ್ಮೂಲನೆಗಾಗಿ ನಡೆಯುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ವಿವರ ನೀಡುತ್ತಾ, ಸರಕಾರವೊಂದರಿಂದಲೇ ಎಲ್ಲಾ ಬಾಲ ಕಾರ್ಮಿಕರಿಗೂ ಕೆಲಸ ಕೊಡುವುದು ಸಾಧ್ಯವಾಗುವುದಿಲ್ಲ. ಇತರ ಸಂಘ ಸಂಸ್ಥೆಗಳೂ ಸಹಕರಿಸಬೇಕು ಎಂದು ಹೇಳಿದರು. ವಿದೇಶೀ ಸಂಘ ಸಂಸ್ಥೆಗಳ ದೇಣಿಗೆಯಿಂದ ನಮ್ಮ ದೇಶದಲ್ಲಿರುವ ಬಾಲ ಕಾರ್ಮಿಕತೆಯನ್ನು ನಿರ್ಮೂಲನೆ ಮಾಡಲಾಗುವುದಿಲ್ಲ. ಬದಲಾಗಿ ದೇಶೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದ ಜೋಶಿ, ನಮ್ಮಲ್ಲಿ ಸರಿಯಾದ ಅಂಕಿ ಅಂಶಗಳನ್ನು ಸಂಗ್ರಹಿಸುವ ಪರಿಪಾಠವಿಲ್ಲ. ಈಗ ತಯಾರಿಸುವ ಯೋಜನೆಗಳೆಲ್ಲವೂ 1991ರ ಜನಗಣತಿಯ ಆಧಾರದ ಮೇಲೇ ಮುಂದುವರೆಯುತ್ತಿದೆ, ಇದೂ ನಾವು ಹಿಂದುಳಿಯುವುದಕ್ಕೆ ಕಾರಣವಾಗುತ್ತದೆ ಎಂದರು.

ಡಾ. ಜೇಟಿಯಾ ಅವರು ಮಾತನಾಡಿ, 1.32 ಕೋಟಿ ಮಕ್ಕಳು 13 ರಾಜ್ಯಗಳಲ್ಲಿ ದುಡಿಯುತ್ತಿರುವುದಾಗಿ ವರದಿಯಾಗಿದೆ. ಆದರೆ ಕೇವಲ ಎರಡು ಲಕ್ಷ ಮಕ್ಕಳಿಗೆ ಮಾತ್ರ ಹೊಸ ಬದುಕು ಕಲ್ಪಿಸುವುದು ಸಾಧ್ಯವಾಗಿದೆ ಎಂದು ಹೇಳಿದರು.

ಸಮಾವೇಶದಲ್ಲಿ ವಿವಿಧ ರಾಜ್ಯಗಳ ಕಾರ್ಮಿಕ ಸಚಿವರು ಮತ್ತು ಕಾರ್ಮಿಕ ಕಾರ್ಯದರ್ಶಿಗಳು ಮತ್ತು ಕಾರ್ಮಿಕ ಯೋಜನೆಗಳ ಅಧ್ಯಕ್ಷರು ಭಾಗವಹಿಸುತ್ತಾರೆ. ಸಮಾವೇಶವು ಬಾಲ ಕಾರ್ಮಿಕ ಪದ್ಧತಿಯ ನಿರ್ಮೂನೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ರೂಪು ರೇಶೆಯನ್ನು ಸಿದ್ಧ ಪಡಿಸಲಿದ್ದು, ಸಮಾರೋಪದಲ್ಲಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಭಾಗವಹಿಸಲಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X