ಸಿ.ಇ.ಟಿ. ಅರ್ಜಿ ಗಾಗಿ ಬೇಡಿಕೆ ಸಲ್ಲಿಸುವ ಕೊನೆ ದಿನ 3-2-2001
ಬೆಂಗಳೂರು : ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕ (ಸಿ.ಇ.ಟಿ) ಸಂಖ್ಯೆ: ಸಿಇಟಿ/ಎಡಿವಿ-2/2001 ರೀತ್ಯ ಸಾಮಾನ್ಯ ಪ್ರವೇಶ ಪರೀಕ್ಷೆ -2001ನೇ ಸಾಲಿಗೆ ವೃತ್ತಿಪರ ಕೋರ್ಸ್‌ಗಳಾದ ಎಂ.ಬಿ.ಬಿ.ಎಸ್., ಬಿ.ಡಿ.ಎಸ್., ಬಿ.ಇ., ಬಿಟೆಕ್., ಬಿ. ಆರ್ಕಿಟೆಕ್ಚರ್‌ಗಳಿಗೆ ಪ್ರವೇಶದ ಪ್ರಕ್ರಿಯೆಯನ್ನು ಆರಂಭಿಸಿದೆ. 2001ರ ಮೇ 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯಲಿವೆ.
ಇದರಂತೆ ಕರ್ನಾಟಕ ರಾಜ್ಯದಲ್ಲಿರುವ ಒಟ್ಟು 135 ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ ಮೊದಲನೇ ವರ್ಷದ ಎಂ.ಬಿ.ಬಿ.ಎಸ್., ಬಿ.ಡಿ.ಎಸ್., ಬಿ.ಇ., ಬಿಟೆಕ್., ಬಿ. ಆರ್ಕಿಟೆಕ್ಚರ್ ಕೋರ್ಸ್‌ಗಳ 2001-2002ನೇ ಶೈಕ್ಷಣಿಕ ವರ್ಷದ ದಾಖಲಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ 2001ರ ನೋಂದಣಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
12ನೇ ತರಗತಿ ಅಥವಾ ದ್ವಿತೀಯ ಪಿ.ಯು.ಸಿ. ಪಾಸಾದ ಅಥವಾ ಪ್ರಸಕ್ತ ಸಾಲಿನಲ್ಲಿ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳು ತಾವು ಪರೀಕ್ಷೆಗೆ ಕುಳಿತ ಕಾಲೇಜು ಅಥವಾ ಶಾಲೆಯ ಮೂಲಕ 350 ರು. ಮೊತ್ತದ ಡಿ.ಡಿ.ಯನ್ನು ಮುಂಚಿತವಾಗಿ ಪ್ರಾಂಶುಪಾಲರಿಗೆ ಸಲ್ಲಿಸಿ ವಿವರವಾದ ಮಾಹಿತಿಯ ಬ್ರೋಷರ್ ಮತ್ತು ಅರ್ಜಿ ಪಡೆಯಬಹುದಾಗಿದೆ.
ಭಾರತದ ಒಳಗೆ, ಕರ್ನಾಟಕದ ಹೊರ ರಾಜ್ಯಗಳಲ್ಲಿ 12ನೇ ತರಗತಿ ಅಥವಾ ಅದಕ್ಕೆ ತತ್ಸಮಾನವಾದ ತರಗತಿಯಲ್ಲಿ ವ್ಯಾಸಂಗ ಮಾಡಿದವರು ಅಥವಾ ಪರೀಕ್ಷೆಗೆ ಕುಳಿತವರು ಅರ್ಜಿ ಮತ್ತು ಬ್ರೋಷರ್ ಪಡೆಯ ಬಯಸಿದಲ್ಲಿ ವಿಶೇಷಾಧಿಕಾರಿಗಳು, ಸಾಮಾನ್ಯ ಪ್ರವೇಶ ಪರೀಕ್ಷೆ ಘಟಕ, ಬೆಂಗಳೂರು ಇವರ ಹೆಸರಿಗೆ ಪಡೆದ 500 ರುಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್ ಜತೆಗೆ 25 ಸೆಂಟಿ ಮೀಟರ್ ಮತ್ತು 30 ಸೆಂಟಿ ಮೀಟರ್ ಅಳತೆಯ ಕ್ಲಾತ್‌ಲೈನ್ಡ್ ಸ್ವವಿಳಾಸದ ಲಕೋಟೆಯನ್ನು ಸ್ಟೀಡ್ ಪೋಸ್ಟ್ ಮೂಲಕ ಕಳುಹಿಸಿಕೊಟ್ಟು ಪಡೆಯಬಹುದಾಗಿದೆ.
ವಿದೇಶದಲ್ಲಿರುವವರಿಗೆ : ಭಾರತದ ಹೊರಗೆ ವಾಸಿಸುತ್ತಿರುವ ಅಭ್ಯರ್ಥಿಗಳು ಸಾವಿರ ರುಪಾಯಿ ಡಿ.ಡಿಯನ್ನು ಕಳುಹಿಸಿ ಬ್ರೋಷರ್ ಪಡೆಯಬಹುದು. ಹೊರ ರಾಜ್ಯದ ಹಾಗೂ ವಿದೇಶದಲ್ಲಿರುವ ವಿದ್ಯಾರ್ಥಿಗಳು ತಾವು ಕಳುಹಿಸುವ ಡಿ.ಡಿ. ಜತೆಗಿನ ಸ್ವವಿಳಾಸದ ಲಕೋಟೆಯ ಮೇಲೆ ಬ್ರೋಷರ್‌ಗಾಗಿ ಬೇಡಿಕೆ ಎಂದು ಬರೆದಿರಬೇಕು.
ಪ್ರಿನ್ಸಿಪಾಲರಿಗೆ ಡಿ.ಡಿ. ಸಲ್ಲಿಸುವ ಕೊನೆ ದಿನಾಂಕ 3-2-2001, ಹೊರ ರಾಜ್ಯದ - ದೇಶದ ವಿದ್ಯಾರ್ಥಿಗಳ ಬೇಡಿಕೆ ಲಕೋಟೆ ತಲುಪಲು ಕೊನೆ ದಿನಾಂಕ 5-2-2001. ಭರ್ತಿ ಮಾಡಿದ ಅರ್ಜಿಗಳು ಸಿ.ಇ.ಟಿ. ಘಟಕವನ್ನು 28-02-2001ರೊಳಗೆ ತಲುಪಲೇ ಬೇಕು.
ಪರೀಕ್ಷಾ ವೇಳಾಪಟ್ಟಿ : 16-05-2001 ಬುಧವಾರ ಬೆಳಗ್ಗೆ 10ರಿಂದ 11-20ರವರೆಗೆ ಗಣಿತ, ಮಧ್ಯಾಹ್ನ 2-30ರಿಂದ 3-50ರವರೆಗೆ ಜೀವಶಾಸ್ತ್ರ. 17-05-2001 ಗುರುವಾರ ಬೆಳಗ್ಗೆ 10ರಿಂದ 11-20ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2-30ರಿಂದ 3-50ರವರೆಗೆ ರಸಾಯನಶಾಸ್ತ್ರ.
ವೆಬ್‌ಸೈಟ್ : ಹೆಚ್ಚಿನ ವಿವರಗಳನ್ನು ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications