ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಡಿ ಉದ್ಯಮ ಉಳಿವಿಗೆ ಒತ್ತಾಯಿಸಿ ಫೆ. 15ಕ್ಕೆ ಧರಣಿ- ಮೆರವಣಿಗೆ

By Staff
|
Google Oneindia Kannada News

ಮಂಗಳೂರು : ನಲುಗುತ್ತಿರುವ ಬೀಡಿ ಉದ್ಯಮ ಉಳಿಸಿ, 75 ಲಕ್ಷ ಬೀಡಿ ಕಾರ್ಮಿಕರ ಭವಿತವ್ಯ ಕಾಪಾಡುವ ಠರಾವಿನೊಂದಿಗೆ ಐಟಕ್‌ ಸಂಯೋಜಿಸಿದ್ದ 3 ದಿನಗಳ ಕಾಲದ ಅಖಿಲ ಭಾರತ ಬೀಡಿ, ಸಿಗರೇಟು, ತಂಬಾಕು ಕಾರ್ಮಿಕರ ಒಕ್ಕೂಟದ 8ನೇ ಸಮ್ಮೇಳನ ಭಾನುವಾರ ಮುಕ್ತಾಯವಾಯಿತು.

ಸಮ್ಮೇಳನದಲ್ಲಿ ಕಾರ್ಮಿಕರ ಒಕ್ಕೂಟ ಹಾಗೂ ಬೀಡಿ ಉದ್ದಿಮೆದಾರರ ಜಂಟಿ ಸಂಘಟನೆ ಕೈಗೊಂಡಿರುವ ನಿರ್ಧಾರಗಳು ಇಂತಿವೆ :

  • ಬೀಡಿ ಉದ್ಯಮದ ಉಳಿವಿಗಾಗಿ ಕೇಂದ್ರ ಸರ್ಕಾರದ ನೀತಿಗಳನ್ನು ಬದಲಾಯಿಸಲು ಒತ್ತಡ ಹೇರುವುದು
  • ಬೀಡಿ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಸಮಾನ ಕನಿಷ್ಠ ವೇತನ ಜಾರಿಗೆ ತರಬೇಕು
  • ತಿಂಗಳಲ್ಲಿ 26 ದಿನಗಳೂ ಕಾರ್ಮಿಕರು ಕೆಲಸ ಮಾಡಲು ಅನುವಾಗುವಂತೆ ಕಚ್ಚಾ ಸಾಮಗ್ರಿ ಒದಗಿಸಬೇಕು
  • ಜಾಗತೀಕರಣದ ಫಲವಾಗಿ ಮಾಲೀಕರ ಪರವಾದ ಸರ್ಕಾರದ ನೀತಿಗಳ ವಿರುದ್ಧ ದನಿಯೆತ್ತಲು ಮುಖ್ಯ ವಾಹಿನಿ ಒಕ್ಕೂಟಗಳ ಜೊತೆ ಬೀಡಿ ಕಾರ್ಮಿಕರ ಒಕ್ಕೂಟ ಕೈಜೋಡಿಸಬೇಕು
  • ಸಮ್ಮೇಳನದಲ್ಲಿ ಕೈಗೊಳ್ಳಲಾಗಿರುವ ನಿರ್ಧಾರಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಫೆಬ್ರವರಿ 15ರಂದು ಧರಣಿ, ಪ್ರತಿಭಟನೆ ನಡೆಸಲಾಗುವುದು
  • ಬೀಡಿ ಕಾರ್ಮಿಕರ ಸಂಘಟನೆಯನ್ನು ಬಲಪಡಿಸಲು ಹಾಗೂ ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸಲು 101 ಸದಸ್ಯರ ಸಾಮಾನ್ಯ ಸಮಿತಿ, 33 ಜನರ ಕಾರ್ಯಕಾರಿ ಸಮಿತಿ ಹಾಗೂ 15 ಜನ ಪದಾಧಿಕಾರಿಗಳನ್ನು ಸಮ್ಮೇಳನದಲ್ಲಿ ಚುನಾಯಿಸಲಾಗಿದೆ
ಸಮ್ಮೇಳನದಲ್ಲಿ ಮಹಿಳೆಯರೂ ಸೇರಿದಂತೆ 10 ರಾಜ್ಯಗಳ ಸುಮಾರು 220 ಮಂದಿ ಕಾರ್ಮಿಕರು ಪಾಲ್ಗೊಂಡಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X