ಚಳಿ ಯಾರ ಕನಸಿನ ಮನೆಯ ದರೋಡೆಗೆ ಕಾದಿದೆ ?
ನಿನ್ನೆ ರಾತ್ರಿಯ ಚಳಿ ಬೆಂಗಳೂರಿನ ಬೀದಿಯಲ್ಲಿಯೇ ಬದುಕಿಕೊಂಡಿದ್ದ ನಾಲ್ಕು ಮಂದಿಯ ಜೀವ ಕಿತ್ತು ಕೊಂಡಿದೆ. ಇದ್ದ ಬದ್ದ ಹಳೇ ಬಟ್ಟೆಗಳ ಚೂರು ಪಾರುಗಳನ್ನು ತೇಪೆ ಹಾಕಿ ಮಾಡಿದ, ಭರ್ತಿ ಆರು ಫೀಟೂ ಇಲ್ಲದ ರಗ್ಗಿನಾಚೆ ಬರುವುದು ಚಳಿಗೇನೂ ಕಷ್ಟವೇ ? ಫುಟ್‌ಪಾತಿನ ಹಾಸಿಗೆ, ಚರಂಡಿ ಬದಿಯ ಗಾಳಿ, ಎದೆ ಗೂಡಿನ್ನು ಮರಗಟ್ಟಿಸುವ ಚಳಿಗೆ ಜೀವದ ಹಂಗಿಲ್ಲ .
ಚಳಿ ಬೆಂಗಳೂರಿನಲ್ಲಿರುವ ಬಡ ಜೀವವನ್ನು ಸಮಾಧಿ ಮಾಡಿದೆ. 15 ಡಿಗ್ರಿಗಿಳಿದ ಚಳಿ ನಾಳೆ ಎತ್ತ ಸಾಗುತ್ತದೆ ಎಂದು ಸದ್ಯಕ್ಕೆ ತಿಳಿಯುತ್ತಿಲ್ಲ. ಯಾವ ಜೀವದ ಗುರಿಯಿಟ್ಟಿದೆಯೋ... ಯಾರ ಕನಸಿನ ಮನೆಯ ದರೋಡೆ ಮಾಡಲಿದೆಯೋ ಗೊತ್ತಾಗುತ್ತಿಲ್ಲ.
ಹುಬ್ಬಳ್ಳಿಯ ಸುತಗಟ್ಟಿಯ ನಿರುದ್ಯೋಗಕ್ಕೆ ಸವಾಲಾಗಿ ಆಲೂಗಡ್ಡೆ, ಮೆಕ್ಕೆ ಜೋಳ, ಹತ್ತಿ ಅಂತೆಲ್ಲಾ ಮನೆ ಹೊಲಗಳ ತುಂಬಾ ಓಡಾಡುತ್ತಾ, ಸಾಲ ಸೋಲ ಮಾಡಿ ಬೆಳೆ ತೆಗೆಯುತ್ತಿದ್ದವನ ಮುಖಕ್ಕೆ ರಾಚಿದ ಸೋಲು, ನಷ್ಟ ಬದುಕನ್ನು ಅನಾಮತ್ತು ಎತ್ತಿಕೊಂಡು ಹೋಯಿತು. ಆತ ಆತ್ಮ ಹತ್ಯೆ ಮಾಡಿಕೊಂಡ.
ಹೇಮಂತ ಮುಗಿಯುವ ಮುನ್ನ ಚಳಿಯ ದರಬಾರು ಮುಗಿಯುವ ಹಾಗೆ ಕಾಣುತ್ತಿಲ್ಲ. ಬೆಂಗಳೂರ ಆಕಾಶದಲ್ಲಿ ಚುಕ್ಕಿಗಳ ಮೇಲೇರಿ ಮೋಡಗಳು ಮೆರವಣಿಗೆ ಹೊರಟಿವೆ. ಬೆಳದಿಂಗಳಿಲ್ಲದ ರಾತ್ರಿಗಳಲ್ಲಿ ಬೀದಿ ದೀಪಗಳು ಮತ್ತೆ ಅಲಂಕಾರದ ಜಿಗಿಬಿಗಿ ಲೈಟುಗಳು ಚುಕ್ಕಿ ಬೆಳಕ ಮಸುಕು ಮಾಡಿವೆ. ನೀವೇನೂ ರಾತ್ರಿ ಆಕಾಶಕ್ಕೆ ಮುಖ ಕೊಡುವಂತಿಲ್ಲ. ರೋಮ ನಿಮಿರಿಸುವ ಪ್ರಿಜ್ಜ್‌ನಿಂದ ಹೊರಟಂತಹ ಗಾಳಿ... ಶಾಲು ಸ್ವೆಟರ್ ...ಊಹುಂ ಯಾವುದಕ್ಕೂ ಬಗ್ಗದ ಚಳಿ !
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications