ಅಪರಾಧ ತಡೆ ಪಾಠ ಕಲಿಯಲು ರಾಜ್ಯ ಪೊಲೀಸರು ಮುಂಬಯಿಗೆ
ಬೆಂಗಳೂರು : ಜಯನಗರದಲ್ಲಿ ಸರಣಿ ದರೋಡೆ, ವೃದ್ಧರ ಸರಣಿ ಕೊಲೆ, ಇರಿತ, ಮಲ್ಲೇಶ್ವರಂನಲ್ಲಿ ಹಾಡು ಹಗಲೇ ದರೋಡೆ, ಬ್ಯಾಂಕ್ ಲೂಟಿ.... ಹೀಗೆ ಬೆಂಗಳೂರಿನಲ್ಲಿ ಬರೀ ಕ್ರೆೃಂ ಸಿರೀಸ್ ನಡೆಯುತ್ತಿರುವುದನ್ನು ನಿಯಂತ್ರಿಸುವ ಪರಿ ತೋಚದೆ ಪೊಲೀಸರು ದಂಡು ಸಮೇತ ಮುಂಬಯಿಗೆ ಹೊರಟಿದ್ದಾರೆ. ಅಲ್ಲಿನ ಪೊಲೀಸರು ಗೂಂಡಾಗಳನ್ನು ಹೇಗೆ ನಿಯಂತ್ರಿಸುತ್ತಾರೆ ಅನ್ನುವುದನ್ನು ಅಧ್ಯಯನ ಮಾಡಲು.
ರಾಜ್ಯ ಗೃಹ ಮಂತ್ರಿ ಮಲಿಕಾರ್ಜನ ಖರ್ಗೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಮಹಾರಾಷ್ಟ್ರದ ಪೊಲೀಸರು ಗೂಂಡಾಗಿರಿಯನ್ನು ಹೇಗೆ ನಿಯಂತ್ರಿಸುತ್ತಿದೆ ಎನ್ನುವುದನ್ನು ರಾಜ್ಯ ಪೊಲೀಸರು ಕೂಲಂಕುಷವಾಗಿ ಗಮನಿಸಲಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಸಿ. ದಿನಕರ್ ಮತ್ತು ರಾಜ್ಯ ಗೃಹ ಕಾರ್ಯದರ್ಶಿಯವರನ್ನು ಭೇಟಿ ಮಾಡಿದ ಬಳಿಕ ಈ ಗುಂಪು ಮಹಾರಾಷ್ಟ್ರದ ದಾರಿ ಹಿಡಿಯಲಿದೆ.
ಭೂಗತ ಜಗತ್ತು ಮತ್ತು ಮಾಫಿಯಾದ ಹಾವಳಿಯನ್ನು ತೊಡೆದು ಹಾಕಲು ಮುಂಬಯಿ ಪೊಲೀಸ್ ಪಡೆ ಹೇಗೆ ಪ್ಲಾನ್‌ಗಳನ್ನು ಆಯೋಜಿಸುತ್ತಿದೆ ಎಂಬ ಬಗ್ಗೆ ಅಲ್ಲಿನ ಗೃಹ ಮಂತ್ರಿ ತಮ್ಮ ಇತ್ತೀಚೆಗಿನ ಮುಂಬಯಿ ಭೇಟಿಯಲ್ಲಿ ತಮಗೆ ವಿವರಿಸಿರುವುದಾಗಿ ಖರ್ಗೆ ಹೇಳಿದರು. ಆ ನಿಟ್ಟಿನಲ್ಲಿ ರಾಜ್ಯದ ನಿಯೋಗ ಮುಂಬಯಿ ಪೊಲೀಸರ ಸ್ಪೆಷಲ್ ಕ್ಲಾಸಿಗೆ ಹೋಗಲು ತಯಾರಾಗುತ್ತಿದೆ.
ಮುಂಬಯಿಯಲ್ಲಿ ವಾಸಿಸುತ್ತಿದ್ದ ಮಾಫಿಯಾ ಬೆಂಗಳೂರು ಮತ್ತು ಮಂಗಳೂರು ಕಡೆಗೆ ಗುಳೆ ಹೊರಡುತ್ತಿವೆ ಎಂಬ ಸುದ್ದಿಗಳು ಕೇಳಿಬರುತ್ತಿರುವಾಗಲೇ, ನಮ್ಮ ಪೊಲೀಸರು ಹೊಸ ತಂತ್ರಕ್ಕಾಗಿ ಅತ್ತ ಹೊರಟಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಪರಾಧಗಳಲ್ಲಿ ಹಳೇ ರೌಡಿಗಳ ಕೈವಾಡ ಅಥವಾ ಒಬ್ಬನೇ ಕುಳ ಎಲ್ಲ ಅಪರಾಧಗಳನ್ನು ನಿಯಂತ್ರಿಸುವ ಬಗ್ಗೆ ಸುಳಿವು ಸಿಗುತ್ತಿಲ್ಲ. ಬದಲಾಗಿ ಪ್ರತಿಯಾಂದು ಕ್ರೆೃಂ ಕೇಸಿನಲ್ಲಿಯೂ ಹೊಸ ಹೊಸ ಯುವ ಮುಖಗಳು ಪತ್ರಿಕೆಯಲ್ಲಿ ಕಾಣಿಸಿಕೊಳ್ಳುತ್ತಿವೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications