Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ನಿಮ್ಮದು ಬಿಸಿನೆಸ್‌ ಲೈನ್‌ ಆದರೆ ಇವತ್ತು ಓ.ಕೆ. ಪಾಠ ಪ್ರವಚನದ ದಾರಿಯಾದರೆ ತುಸು ಕಸಿವಿಸಿ.

ವೃಷಭ :ಸ್ನೇಹ ಸಹಾಯ ಇಂದು ನಿಮ್ಮ ಮುಂದೆ ಹಾಜರ್‌. ಸಂಜೆ ವಾಕಿಂಗ್‌, ವಿಹಾರ ಮಜಾ. ಬೇಜಾರೇಕೆ ?

ಮಿಥುನ : ಅತಿ ಅನುಕಂಪದಿಂದ ನಿಮಗೇ ಸೋಲು. ವೃಥಾ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುವುದು ಬೇಡ. ನೀವೇ ಸಮಸ್ಯೆಯಾಗಿ ಬದಲಾಗುವುದು ಈ ದಿನದ ಸೋಜಿಗ.

ಕಟಕ : ಬ್ಯಾಂಕ್‌ , ಕೋರ್ಟ್‌ ಸಂಚು ಮಾಡುವುದಕ್ಕೆಲ್ಲಾ ಇವತ್ತು ನೀಲಿ ನಕಾಶೆ ಬರೆಯಬಹುದು. ದೈವಬಲವಿದೆ ಆದ್ದರಿಂದ ಸದ್ಯಕ್ಕೆ ಸೋಲಿಲ್ಲ.

ಸಿಂಹ : ಆದರ್ಶಗಳಿಗೆಲ್ಲಾ ಸಮಾಜದಲ್ಲಿ ಮನ್ನಣೆ ಸಿಗುವುದಿಲ್ಲ ಎಂಬ ಬೇಸರ ಸಲ್ಲದು. ನಿಮ್ಮ ಅಧಿಕಾರ ಚಲಾವಣೆ ಎಲ್ಲ ಕಡೆಯೂ ನಡೆಯುವುದಿಲ್ಲ.

ಕನ್ಯಾ : ಅತಿಥಿ ಆಗಮನ. ಮಧ್ಯಾಹ್ನ ಊಟಕ್ಕೆ ಬಂಧುಗಳ ಜೊತೆಯಿದೆ. ಆದರೆ, ಜೇಬು ಸ್ವಲ್ಪ ಹಗುರಾಗಲಿದೆ.

ತುಲಾ : ಆರೋಗ್ಯ ಜೋಪಾನ. ಪ್ರವಾಸ ಎದುರಾಗಬಹುದು. ಪ್ರವಾಸದಲ್ಲಿ ನೀವು ನಿರೀಕ್ಷಿಸಿರದ ಅನಿರೀಕ್ಷಿತ ಹಿತಕರ ಅಚ್ಚರಿಯಾಂದು ಕಾದಿದೆ.

ವೃಶ್ಚಿಕ : ಸಣ್ಣ ಮಕ್ಕಳ ಬಳಿ ತಂಟೆ ಮಾಡುವುದರಿಂದ ಪೇಚಿಗೆ ಸಿಕ್ಕಿ ಕೊಳ್ಳುತ್ತೀರಿ. ನಿಮಗೀಗ ರೆಸ್ಟ್‌ ಬೇಕು. ಆದರೆ, ಸಿಗುವುದು ಕಷ್ಟ .

ಧನಸ್ಸು :ನಿಮ್ಮ ಮನೆಯಲ್ಲಿ ಮಂಗಳ ಕಾರ್ಯ ನಡೆಯಲಿದೆ. ತಯಾರಿ ಸಂಭ್ರಮದಲ್ಲಿ ವ್ಯಸ್ತರಾಗುತ್ತೀರಿ. ಅಂದ ಮೇಲೆ ಸುಸ್ತಾಗುವುದು ಸಹಜ.

ಮಕರ : ನಿರ್ಲಿಪ್ತತೆಯಿಂದ ಬೇರೆಯವರ ಮನಸ್ಸು ಕೆಡುತ್ತದೆ ಎಂಬ ಹೆದರಿಕೆ ಬೇಡ. ನಿಮ್ಮದೇ ತಲೆ, ನಿಮ್ಮದೇ ಕೈ. ಆದರೆ, ಮನಸ್ಸನ್ನು ಎಲ್ಲಿ ಬಿಟ್ಟಿದ್ದೀರಿ?

ಕುಂಭ : ಮಗನೊಂದಿಗೆ ಜಗಳ ಕಾಯುತ್ತೀರಿ. ಸಂಜೆ ಹೊತ್ತಿಗೆಲ್ಲಾ ರಾಜಿಯಾಗಿಬಿಡಿ. ಇಂತಹ ಸಣ್ಣ ಪುಟ್ಟದಕ್ಕೆ ತಲೆ ಕೆಡಿಸಿಕೊಳ್ಳುವುದೇ ?

ಮೀನ : ತಂತ್ರಜ್ಞಾನ, ಸೃಜನ ಶೀಲತೆ ಇಂದು ನಿಮಗೆ ಒಲಿಯುತ್ತದೆ. ಸಂಜೆ ಎಷ್ಟು ಮೋಹಕ ಎಂದು ನೀವು ರೋಮಾಂಚನಗೊಳ್ಳುವುದು ಖಂಡಿತ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+