ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ಕೊಳ್ಳ : 2 ಸ್ಫೋಟ - ಕನಿಷ್ಠ 7 ಸಾವು, 54 ಮಂದಿಗೆ ಗಾಯ

By Staff
|
Google Oneindia Kannada News

ಶ್ರೀನಗರ : ಪ್ರಕ್ಷುಬ್ಧ ಕಾಶ್ಮೀರ ಕೊಳ್ಳದಲ್ಲಿ ಭಾನುವಾರ ಸಂಭವಿಸಿದ ಎರಡು ಸ್ಫೋಟಗಳಲ್ಲಿ ಕನಿಷ್ಠ 7 ಜನರು ಪ್ರಾಣ ಕಳೆದುಕೊಂಡಿದ್ದು , ಇತರ 54 ಮಂದಿ ಗಾಯಗೊಂಡಿದ್ದಾರೆ. ಸಾವಿಗೀಡಾದವರಲ್ಲಿ ಓರ್ವ ಸೈನಿಕನೂ ಸೇರಿದ್ದಾನೆ.

ಅಧಿಕೃತ ಮೂಲಗಳ ಪ್ರಕಾರ, ಬೆಳಿಗ್ಗೆ 9.30 ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರ ಟ್ರಾನ್ಸ್‌ಪೋರ್ಟ್‌ನ ಬಸ್ಸೊಂದು(ಜೆಕೆ 01- 941) ಶ್ರೀನಗರಕ್ಕೆ 30 ಕಿಮೀ ಇರುವ ಟ್ಯಾಪ್ಪರ್‌ ಸಮೀಪ ಭೂ ಸ್ಫೋಟಕವೊಂದರ ಸಿಡಿತಕ್ಕೆ ಸಿಕ್ಕಿ ಓರ್ವ ಮಿಲಿಟರಿ ವ್ಯಕ್ತಿಯೂ ಸೇರಿದಂತೆ ಬಸ್ಸಿನಲ್ಲಿದ್ದ ನಾಲ್ವರು ಸತ್ತಿದ್ದಾರೆ. ಸತ್ತ ಮೂವರು ಪ್ರಯಾಣಿಕರನ್ನು ಮಂಜೂರ್‌ ಖಾನ್‌, ತ್ರಿಲೋಕ್‌ ಸಿಂಗ್‌ ಮತ್ತು ಪರಮ್‌ಜಿತ್‌ ಕೌರ್‌ ಎಂದು ಗುರ್ತಿಸಲಾಗಿದೆ. ಬಸ್ಸಿನಲ್ಲಿದ್ದ ಇತರ 35 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಶ್ರೀನಗರ ಮತ್ತು ಬಾರಾಮುಲ್ಲಾ ಆಸ್ಪತ್ರೆಗಳಿಗೆ ಸೇರಿಸಿದ್ದು , ಕೆಲವರ ಸ್ಥಿತಿ ಗಂಭೀರವಾಗಿದೆ.

ಮತ್ತೊಂದು ಅವಘಡದಲ್ಲಿ ಪುಲ್ವಾಮಾ ಚೌಕ ಬಳಿ ಹ್ಯಾಂಡ್‌ ಗ್ರೇನೇಡ್‌ನ ಆಕಸ್ಮಿಕ ಸಿಡಿತದಿಂದ ಇಬ್ಬರು ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಈ ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದಾರೆ. ಅಂತೆಯೇ ಇನ್ನೊಂದು ಯುದ್ಧ ಸಂಬಂಧಿ ಘಟನೆಯಲ್ಲಿ ಮಾಜಿ ಸೈನಿಕನೊಬ್ಬ ಮೃತನಾಗಿದ್ದಾನೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X