ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಗಮನವೇನಿದ್ದರೂ ಸ್ವದೇಶದ ಕಡೆಗೆ- ಜಾರ್ಜ್‌ ಡಬ್ಲ್ಯೂ. ಬುಷ್‌

By Staff
|
Google Oneindia Kannada News

ವಾಷಿಂಗ್ಟನ್‌ : ನನ್ನ ಗಮನವೇನಿದ್ದರೂ ಸ್ವದೇಶದ ಕಡೆಗೆ. ಕ್ಲಿಂಟನ್‌ರ ಹಾಗೆ ಜಗತ್ತಿನ ಸಮಸ್ಯೆಯ ಬಗ್ಗೆಲ್ಲಾ ತಲೆ ಕೆಡಿಸಿಕೊಳ್ಳಲು ತಮಗೆ ಸಮಯವಿಲ್ಲ ಎಂದು ಶನಿವಾರ ಜಗತ್ತಿನ ಅತ್ಯಂತ ಪ್ರಬಲ ರಾಷ್ಟ್ರದ ಅಧ್ಯಕ್ಷ ಪದವಲಂಕರಿಸಿದ ಜಾರ್ಜ್‌ ಡಬ್ಲ್ಯೂ. ಬುಷ್‌.

ಕಾನೂನು ಸಮರ, ಮತಗಳ ಮರು ಎಣಿಕೆ ಕೋರ್ಟ್‌ ತೀರ್ಪುಗಳ ಭರಾಟೆಯ ನಂತರ ಕೊನೆಗೂ ಜಾರ್ಜ್‌ ಬುಷ್‌ ಅಮೆರಿಕಾದ ಅಧ್ಯಕ್ಷರಾದರು. ಶನಿವಾರದಂದು ಅವರು 43ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ 21 ಗುಂಡು ಹಾರಿಸುವ ಮೂಲಕ ಸಲ್ಲಿಸಲಾದ ವಂದನೆಯನ್ನು ಅವರು ಸ್ವೀಕರಿಸಿದರು. ಇದೇ ಸಮಾರಂಭದಲ್ಲಿ ರಿಚರ್ಡ್‌ ಬಿ. ಚೆನೀ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.

54 ವರ್ಷ ಪ್ರಾಯದ ಬುಷ್‌ ರಿಪಬ್ಲಿಕನ್‌ ಪಕ್ಷದವರು. 8 ವರ್ಷಗಳ ಹಿಂದೆ, ಬುಷ್‌ ಅವರ ತಂದೆ ಎಚ್‌. ಡಬ್ಲ್ಯೂ. ಬುಷ್‌ ಕೂಡ ಅಮೆರಿಕಾದ ಅಧ್ಯಕ್ಷರಾಗಿದ್ದರು. ಅಮೆರಿಕಾದ ಇತಿಹಾಸದಲ್ಲಿ ಎರಡನೆಯ ಬಾರಿಗೆ ತಂದೆ ಮಗ, ಇಬ್ಬರಿಗೂ ಅಧ್ಯಕ್ಷ ಪದವಿ ಲಭಿಸಿದೆ.

ತನ್ನ ಪ್ರತಿಸ್ಪರ್ಧಿ ಆಲ್‌ಗೊರೆ ಅವರನ್ನು ಸೋಲಿಸಿದ ಬುಷ್‌ ಅವರು ಕ್ಲಿಂಟನ್‌ ಅವರ ನಂತರದ ಅಧ್ಯಕ್ಷರಾಗಿರುವುದರಿಂದ ಈಗಿರುವ 10 ಟ್ರಿಲಿಯನ್‌ ಡಾಲರ್‌ಗಳ ಖಜಾನೆಯನ್ನು ಆಳಲಿದ್ದಾರೆ. ಕ್ಲಿಂಟನ್‌ರ ಹಾಗೆ ಜಗತ್ತಿನ ಸಮಸ್ಯೆಯ ಬಗ್ಗೆಲ್ಲಾ ತಲೆ ಕೆಡಿಸಿಕೊಳ್ಳದೇ ಸ್ವದೇಶದ ಬಗ್ಗೆ ಹೆಚ್ಚು ಗಮನ ಹರಿಸುವುದಾಗಿ ಬುಷ್‌ ಹೇಳಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X