ನರಹಂತಕನ ತಲೆಗೆ 20 ಲಕ್ಷ : --ಭೇದೋಪಾಯದ -ತಿ-ರುವಿನಲ್ಲಿ -ಶಿಕಾ-ರಿ
ಚಾಮರಾಜನಗರ : ನರಹಂತಕ ವೀರಪ್ಪನ್ ತಲೆಗೆ 20 ಲಕ್ಷ ರೂಪಾಯಿ ಹಾಗೂ ಆತನ ಬಲಗೈ ಬಂಟರಾದ ಸೇತುಕುಳಿ ಗೋವಿಂದನ್ ಮತ್ತು ಚಿಕ್ಕರಸನ ಪಾಳ್ಯದ ಚಂದ್ರನ್ ಅವರ ತಲೆಗಳಿಗೆ ತಲಾ 10 ಲಕ್ಷ ರೂಪಾಯಿಗಳನ್ನು ಕರ್ನಾಟಕ ಮತ್ತು ತಮಿಳು ನಾಡು ಸರಕಾರಗಳು ಘೋಷಿಸಿವೆ.
ಬಹುಮಾನದ ವಿವರಗಳಿರುವ ಕರಪತ್ರವನ್ನು ವೀರಪ್ಪನ್ ಕಾರ್ಯಕ್ಷೇತ್ರದಡಿ ಬರುವ ಕೂಡ್ಲೂರು, ನಲ್ಲೂರು, ಹೂಗ್ಯ, ಜಲ್ಲಿ ಪಾಳ್ಯ ಗ್ರಾಮಗಳಲ್ಲಿ ವಿತರಿಸಲಾಗುತ್ತಿದೆ. ವೀರಪ್ಪನ್ ಕಾರ್ಯಪಡೆಯ ಅಧಿಕಾರಿಗಳು ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ವೀರಪ್ಪನ್ ಬಗ್ಗೆ ಮಾಹಿತಿ ಒದಗಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಪ್ರಸ್ತುತ 122ಕ್ಕೂ ಹೆಚ್ಚು ನರಹತ್ಯೆ, ಎರಡು ಸಾವಿರ ಆನೆಗಳ ದಂತ ಕಳವು, ಸಾವಿರಾರು ಟನ್ ಶ್ರೀಗಂಧ ಕಳ್ಳಸಾಗಾಣಿಕೆಯ ಆರೋಪಗಳು ವೀರಪ್ಪನ್ ವಿರುದ್ಧ ದಾಖಲಾಗಿವೆ. ವೀರಪ್ಪನ್ ತಂಡಕ್ಕೆ ಆಹಾರ ಸಾಗಿಸುವುದು, ಸಂಪರ್ಕಿಸುವುದು ಮತ್ತು ಮಾಹಿತಿ ಗೊತ್ತಿದ್ದರೂ ತಿಳಿಸದೇ ಇರುವುದು ಅಪರಾಧವಾಗುತ್ತದೆ ಎಂದು ಜನರನ್ನು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಈ ಹಿಂದೆ ಶಂಕರ್ ಬಿದರಿ ನೇತೃತ್ವದ ಕಾರ್ಯಾಚರಣೆಯ ಸಂದರ್ಭದಲ್ಲಿ ಸರಕಾರ, ವೀರಪ್ಪನ್ ತಲೆಗೆ 40 ಲಕ್ಷ ಮತ್ತು ಆತನ ಸಹಚರರಿಬ್ಬರ ತಲೆಗ 20 ಲಕ್ಷ ರೂಪಾಯಿ ಘೋಷಿಸಿತ್ತು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications