ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದಿನಲ್ಲಿ ಅಪರಾಧ ಪತ್ತೆಗೆ ಜಾಗತಿಕ ತಾಂತ್ರಿಕತೆಗಳ ಸರಮಾಲೆ

By Staff
|
Google Oneindia Kannada News

*ಮಹ್ಮದ್‌ ಶಫೀಕ್‌

ಹೈದರಾಬಾದ್‌ : ಸಿಲಿಕಾನ್‌ ವ್ಯಾಲಿ ಬಿರುದಿಗಾಗಿ ಹೋರಾಡುತ್ತಿರುವ ಹೈದರಾಬಾದ್‌ ಕ್ರೆೃಂನಲ್ಲಿಯೂ ಬೆಂಗಳೂರಿಗಿಂತ ಕಮ್ಮಿಯಿಲ್ಲ. ಆದರೆ ಅಪರಾಧ ಪತ್ತೆಗೆ ಅಲ್ಲಿನ ಪೊಲೀಸರು ಸದ್ಯದಲ್ಲಿಯೇ ಜಾಗತಿಕ ಮಟ್ಟದ ತಾಂತ್ರಿಕತೆಗಳನ್ನು ತಮ್ಮ ತನಿಖಾ ಕಾರ್ಯದಲ್ಲಿ ಅಳವಡಿಸಿಕೊಳ್ಳಲಿದ್ದಾರೆ. ಹೆಚ್ಚುತ್ತಿರುವ ಅಪರಾಧಕ್ಕೆ ಮೂಗುದಾರ ಹಾಕಲು ಗ್ಲೋಬಲ್‌ ಪೊಸಿಶನಿಂಗ್‌ ಸಿಸ್ಟಂ ಮತ್ತು ಜಿಯೋ ಫಿಸಿಕಲ್‌ ಸಿಸ್ಟಂಗಳು ಅಲ್ಲಿನ ಪೊಲೀಸ್‌ ಇಲಾಖೆಯನ್ನು ಪ್ರವೇಶಿಸುತ್ತಿವೆ.

ಈ ತಂತ್ರಜ್ಞಾನ ಪೊಲೀಸರು ಅಪರಾಧ ಅಥವಾ ಅಪಘಾತ ನಡೆಯುವ ಜಾಗಕ್ಕೆ ತಕ್ಷಣ ಧಾವಿಸಲು, ಅಪರಾಧಿಗಳನ್ನು ಮತ್ತವರ ವಾಹನಗಳನ್ನು ಸಿಗ್ನಲ್‌ಗಳ ಹಂಗಿಲ್ಲದೆ ವೇಗವಾಗಿ ಬೆನ್ನಟ್ಟಲು ಸಹಕರಿಸುತ್ತದೆ. ಹೈದರಾ ಬಾದ್‌ ಮತ್ತು ಸಿಕಂದರಾ ಬಾದ್‌ ನಗರಗಳ ಆಯಕಟ್ಟಿನ ಪ್ರದೇಶಗಳಲ್ಲಿರುವ ಪೊಲೀಸ್‌ ವಾಹನಗಳಿಗೆ ಅಟೋಮೋಟಿವ್‌ ವೆಹಿಕಲ್‌ ಲೋಕೇಷನ್‌ ಸಿಸ್ಟಂ (ಎವಿಎಲ್‌ಎಸ್‌)ನ್ನು ವಿನ್ಯಾಸಗೊಳಿಸಲಾ-ಗುವುದು. ಇದರಿಂದ ಪೊಲೀಸರು ಪ್ರತಿ ಬಾರಿ ಪೊಲೀಸ್‌ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸುವ ಅಗತ್ಯವಿರುವುದಿಲ್ಲ ಮತ್ತು ತುಂಬಾ ಬೇಗನೇ ಘಟನಾ ಸ್ಥಳಕ್ಕೆ ಧಾವಿಸಬಹುದು ಎಂದು ಹೈದರಾಬಾದ್‌ ಪೊಲೀಸ್‌ ಅಧೀಕ್ಷಕ ಎಂ.ಎಲ್‌.ಎಸ್‌ ಕ್ವಾರ್ಡಿ ಹೇಳುತ್ತಾರೆ.

ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಿರುವ ಪ್ರಥಮ ನಗರ

ದೇಶದಲ್ಲಿಯೇ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿರುವ ಪ್ರಥಮ ನಗರ ಎಂಬ ಹೆಗ್ಗಳಿಕೆ ಹೈದರಾಬಾದಿನದು. ಉಪಕರಣವನ್ನು ವಾಹನಕ್ಕೆ ವಿನ್ಯಾಸಗೊಳಿಸಲು ಇನ್ನೊಂಬತ್ತು ತಿಂಗಳು ಬೇಕಾಗಬಹುದು. ಆದರೂ ಆರು ತಿಂಗಳೊಳಗೆ ಕಾರ್ಯ ಮುಗಿಯಬೇಕು ಎಂದು ಪೊಲೀಸ್‌ ಇಲಾಖೆಗೆ ಸರಕಾರ ತಿಳಿಸಿದೆ ಎಂದು ರಾಜ್ಯ ಗೃಹ ಮಂತ್ರಿ ದೇವೇಂದರ್‌ ಗೌಡ ಹೇಳುತ್ತಾರೆ. ಅವರ ಪ್ರಕಾರ ಜಗತ್ತಿನಲ್ಲಿ ತಂತ್ರಜ್ಞಾನ ಬೆಳೆದ ಹಾಗೆ ಅಪರಾಧಗಳ ವಿಧಾನವೂ ಬದಲಾಗುತ್ತದೆ. ಆಗ ಪೊಲೀಸ್‌ ಇಲಾಖೆ ಕೂಡ ಅಗತ್ಯ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸುಸಜ್ಜಿತವಾಗಿರಬೇಕು.

ಸರಕಾರವು ಅಪರಾಧ ಪತ್ತೆಗಾಗಿ ಪೊಲೀಸರಿಗೆ ವಿಶೇಷ ಅಧಿಕಾರ ನೀಡಿದೆ. ಪೊಲೀಸ್‌ ಇಲಾಖೆಗಾಗಿ ಈ ವರ್ಷ 240 ಹೊಸ ದ್ವಿಚಕ್ರ ವಾಹನ ಖರೀದಿಸಲಾಗಿದೆ. ಗಸ್ತು ತಿರುಗಲು ಸಹಾಯವಾಗುವಂತೆ ರಾಜ್ಯದ ಪ್ರತಿ ಪೊಲೀಸ್‌ ಸ್ಟೇಷನ್‌ಗೂ ನಾಲ್ಕು ವಾಹನಗಳನ್ನು ನೀಡಲಾಗುವುದು. ಆಯ್ದ ಕಾನ್‌ಸ್ಟೇಬಲ್‌ಗಳಿಗೆ ಪೊಲೀಸ್‌ ಕಮಾಂಡೋ ತರಬೇತಿ ನೀಡಿ ಅವರನ್ನು ಸಜ್ಜುಗೊಳಿಸಲಾಗುವುದು. ಇದೂ ಸಾಲದೆಂಬಂತೆ ನಗರದ ಹೃದಯ ಭಾಗದಲ್ಲಿ ಆಧುನಿಕ ಸೌಲಭ್ಯ ಮತ್ತು ತಂತ್ರಜ್ಞಾನಗಳೊಂದಿಗೆ 204 ಮಿಲಿಯನ್‌ ರೂಪಾಯಿ ವೆಚ್ಚದಲ್ಲಿ ಪೊಲೀಸ್‌ ಕಮಿಷನರ್‌ ನಿರ್ಮಾಣವಾಗುತ್ತಿದೆ.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X