ವಿಪ್ರೋ : 9 ತಿಂಗಳಲ್ಲಿ 4.5 ಬಿಲಿಯನ್ ರುಪಾಯಿ ಲಾಭ
ಬೆಂಗಳೂರು : ಹೆಸರುವಾಸಿ ಐಟಿ ಕಂಪನಿ ವಿಪ್ರೋದ 9 ತಿಂಗಳ ನಿವ್ವಳ ಲಾಭ (ವರಮಾನ ತೆರಿಗೆ ಕಟ್ಟಿದ ನಂತರ ಡಿಸೆಂಬರ್ 2000ಕ್ಕೆ ಸರಿಯಾಗಿ) 4.5 ಬಿಲಿಯನ್ ರುಪಾಯಿ. ಲಾಭದ ಒಟ್ಟಾರೆ ಹೆಚ್ಚಳ ಪ್ರತಿಶತ 121.
ಕಳೆದ ವಿತ್ತ ವರ್ಷದ 9 ತಿಂಗಳ ವಹಿವಾಟಿಗಿಂತ ಪ್ರಸ್ತುತ ಹಣಕಾಸು ವರ್ಷದ ವಹಿವಾಟಿನಲ್ಲಿ ಶೇ.39ರಷ್ಟು ಹೆಚ್ಚಳವಾಗಿದ್ದು, ಕಂಪನಿಯ 21.5 ಬಿಲಿಯನ್ ರುಪಾಯಿ ಮಾಲು ಬಿಕರಿಯಾಗಿದೆ. ಶುಕ್ರವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾದ ಕಂಪನಿಯ ಅಧಿಕಾರಿಗಳ ಮಂಡಳಿ ಅನುಮೋದಿಸಿದ ಲೆಕ್ಕ ಪರಿಶೋಧನೆ ವರದಿಯಲ್ಲಿ ಈ ವಿಷಯ ಸ್ಪಷ್ಟವಾಗಿದೆ.
ವಿಪ್ರೋ ಟೆಕ್ನಾಲಜೀಸ್ ಆದಾಯದಲ್ಲಿ ಶೇ. 82ರಷ್ಟು ಹೆಚ್ಚಳವಾಗಿದ್ದು, 12.5 ಬಿಲಿಯನ್ ರುಪಾಯಿ ವಹಿವಾಟು ನಡೆಸಿದೆ. ಲಾಭದಲ್ಲಿ ತಾಂತ್ರಿಕ ಸೇವೆಗಳು, ಸಂಶೋಧನೆ ಹಾಗೂ ಅಭಿವೃದ್ಧಿ (ಆರ್ ಅಂಡ್ ಡಿ) ಸೇವೆಗಳನ್ನು ಒದಗಿಸುವ ಕಂಪನಿಯ ಕೇಂದ್ರಗಳ ಪಾಲೇ ಅರ್ಧದಷ್ಟಿದೆ. ಉದ್ಯಮ ಪರಿಹಾರಿ ಸೇವಾ ಘಟಕಗಳು ಶೇ.45ರಷ್ಟು ಲಾಭ ತಂದಿತ್ತಿವೆ. ಕಂಪನಿಯ ಜಾಗತಿಕ ಆಲಂಬನ ಸೇವೆಗಳು ವಿತ್ತ ವರ್ಷದ ಮೂರನೇ ತ್ರೆೃಮಾಸಿಕದಲ್ಲಿ ಶೇ.5ರಷ್ಟು ಲಾಭ ತಂದಿತ್ತಿವೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿತವಾಗಿದೆ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications