Get Updates
Get notified of breaking news, exclusive insights, and must-see stories!

ದೇಶದ ಅಖಂಡತೆಗೆ ಸನಾತನ ಸಂಸ್ಕೃತಿಯೇ ಕಾರಣ - ಪ್ರಧಾನಿ ವಾಜಪೇಯಿ

ಉಡುಪಿ : ಸನಾತನ ಸಂಸ್ಕೃತಿಯನ್ನು ಉಳಿಸಿಕೊಂಡು ದೇಶ ಮುನ್ನಡೆಯುತ್ತಿರುವುದರಿಂದ ದೇಶದ ಅಖಂಡತೆ ಉಳಿದುಕೊಂಡು ಬಂದಿದೆ ಎಂದು ಪ್ರಧಾನ ಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಹೇಳಿದ್ದಾರೆ.

ಗುರುವಾರ ರಾತ್ರಿ ಕೃಷ್ಣ ದೇವಸ್ಥಾನದ ಬಳಿಯ ರಾಜಾಂಗಣ ಸಭಾಗೃಹವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಾತಿ ಬದಲಾದರೂ ಸಂಸ್ಕೃತಿ ಬದಲಾಗುವುದಿಲ್ಲ ಎಂಬುದಕ್ಕೆ ಇಂಡೋನೇಷ್ಯದಲ್ಲಿರುವ ರಾಮ ಮತ್ತು ಹನುಮಂತರ ದೇವಾಲಯಗಳೇ ಸಾಕ್ಷಿ. ಅಲ್ಲಿನವರು ಈಗಲೂ ರಾಮ ಮತ್ತು ಹನುಮಂತರನ್ನು ತಮ್ಮ ಪೂರ್ವಜರೆಂದು ಪೂಜಿಸುತ್ತಾರೆ ಎಂದರು. ಸಾಮಾಜಿಕ ನ್ಯಾಯ ಸ್ಥಾಪನೆಗಾಗಿ ಉಡುಪಿಯಲ್ಲಿ ಹಿಂದೆಯೇ ಆಂದೋಲನ ನಡೆದಿತ್ತು. ಕನಕನ ಭಕ್ತಿ ಅದಕ್ಕೊಂದು ಉತ್ತಮ ನಿದರ್ಶನ ಎಂದ ವಾಜಪೇಯಿ ಸ್ವರಾಜ್ಯ, ಸ್ವಾಭಿಮಾನ, ಸ್ವಾವಲಂಬಿ ದೇಶ ಕಟ್ಟುವ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.

ಕೃಷ್ಣ ದರ್ಶನ : ಗುರುವಾರದಂದು ವಿಶೇಷ ಹೆಲಿಕಾಪ್ಟರ್‌ನಲ್ಲಿ ಮಂಗಳೂರಿಗೆ ಬಂದಿಳಿದ ನಂತರ ಉಡುಪಿ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ದರ್ಶನ ಪಡೆದರು. ಹಣತೆ ಬೆಳಕಿನಲ್ಲಿ ಹೊಳೆಯುತ್ತಿದ್ದ ವಜ್ರ ಕಿರೀಟಧಾರಿ ಕೃಷ್ಣ ದೇವರನ್ನು ನವಗ್ರಹ ಕನಕನ ಕಿಂಡಿಯಲ್ಲಿ ಇಣುಕಿ ನೋಡಿ ನಮಸ್ಕರಿಸಿದರು. ದೇವಸ್ಥಾನದ ಬಳಿ ನಿರ್ಮಿಸಲಾಗಿರುವ ರಾಜಾಂಗಣ ವನ್ನು ಉದ್ಘಾಟಿಸಿದ ಪ್ರಧಾನಿಗಳನ್ನು ಪೇಜಾವರ ಶ್ರೀಗಳು ಶಾಲು ಹೊದಿಸಿ, ಸನ್ಮಾನ ಪತ್ರ, ಫಲಕ ಮತ್ತು ಬಾಲಕೃಷ್ಣನ ಚಿನ್ನದ ವಿಗ್ರಹವನ್ನು ನೀಡಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಪರ್ಯಾಯ ಸ್ವಾಗತ ಸಮಿತಿಯ ಉಪಾಧ್ಯಕ್ಷ ವಿನಯ ಹೆಗ್ಡೆ ಸನ್ಮಾನ ಪತ್ರವನ್ನು ವಾಚಿಸಿದರು.

ಕಾರ ಕ್ರಮದಲ್ಲಿ ರಾಜ್ಯಪಾಲೆ ವಿ.ಎಸ್‌. ರಮಾದೇವಿ, ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ , ಕೇಂದ್ರ ಸಚಿವರಾದ ಅನಂತ ಕುಮಾರ್‌, ಧನಂಜಯ ಕುಮಾರ್‌, ಡಾ. ಮುರಳಿ ಮನೋಹರ್‌ ಜೋಶಿ, ಉಮಾ ಭಾರತಿ ಹಾಗೂ ಸಂಸದ ವಿನಯ ಕುಮಾರ್‌ ಸೊರಕೆ ಉಪಸ್ಥಿತರಿದ್ದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಕರ್ನಾಟಕದಲ್ಲಿ ವಾಜಪೇಯಿ / ವಾಜಪೇಯಿ ಚಿತ್ರಪಟ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+