ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮ್ಮ ಸಹನೆ ಮತ್ತು ಪ್ರಸನ್ನತೆಯಿಂದ ಸಹವರ್ತಿಗಳ ಮನಸ್ಸು ಗೆಲ್ಲುತ್ತೀರಿ. ನಿಮ್ಮ ನ್ನು ಹೊಗಳುವವರ ಮೇಲೆ ಅನುಮಾನ ಬೇಡ. ಇವತ್ತು ಕೆಲಸ ಹೆಚ್ಚು ಎನಿಸಿದರೂ ಲಾಭದಾಯಕವಾಗಿರುತ್ತದೆ.ವೃಷಭ : ಗೋಲ್ ಮಾಲ್ ಮಾಡುವ ಅವಕಾಶ ಎದುರಾಗುತ್ತದೆ. ಎಲ್ಲವೂ ನಿಮ್ಮ ಚತುರತೆಯನ್ನು ಅವಲಂಬಿಸಿದೆ. ಅತಿ ಬುದ್ಧಿವಂತಿಕೆಯಿಂದ ನಿಮ್ಮ ಕೀರ್ತಿಯ ನೌಕೆ ಮುಳುಗುತ್ತದೆ.
ಮಿಥುನ : ಓದು, ಕಲಿಕೆ ಇನ್ನೂ ಆರಂಭಿಸದಿದ್ದರೆ ಉದ್ಧಾರವಾಗುವುದಿಲ್ಲ. ಇರುವ ಏಕಾಗ್ರತೆಯನ್ನು ಬಳಸಿಕೊಂಡರೆ ಯಶಸ್ಸು ನಿಮ್ಮ ಪಾಲಿಗಿದೆ.
ಕಟಕ : ಮುಂದಾಳುತ್ವ ನಿಮ್ಮ ಬಳಿ ಇದ್ದರೆ ಈ ದಿನವೆಲ್ಲ ನಿಮ್ಮದು. ನಿರ್ಧಾರ ದೃಢವಾಗಿ ಇದ್ದರೆ ಸರಿ. ನಿಮ್ಮ ಹೆಸರು, ಕೀರ್ತಿ ಉಳಿಸಿಕೊಳ್ಳಲು ಹೆಣಗಾಡುತ್ತೀರಿ.
ಸಿಂಹ : ವ್ಯವಹಾರದ ಆರಂಭವಾದ್ದರಿಂದ ಲಾಭ ನಿಮ್ಮ ಕೈ ಹಿಡಿಯುತ್ತದೆ. ಯೋಚನೆ ಮಾಡದೇ ಯಾರಿಗೂ ಮಾತು ಕೊಡಬೇಡಿ.
ಕನ್ಯಾ : ನೀವು ಅಚಾನಕ್ ನಿಮ್ಮ ಬಿಸಿನೆಸ್‌ನ ನೀಲಿ ನಕಾಶೆ ಬದಲಿಸಿರುವುದರಿಂದ ಸ್ವಲ್ಪ ಎಡವುತ್ತೀರಿ. ನಿಮ್ಮ ಚಾಲಾಕಿತನದಿಂದ ಮೇಲೆ ಬರುವ ಅವಕಾಶವಿದೆ.
ತುಲಾ : ನೀವು ನಿಮ್ಮ ಸಂಗಾತಿಯನ್ನು ನಿಜವಾಗಿ ಪ್ರೀತಿಸುತ್ತೀರಿ ಎಂದಾದರೆ ನಿರ್ಧಾರಗಳನ್ನು ಪದೇ ಪದೇ ಬದಲಿಸಬಾರದು. ನೋವಿಗೆ ಕಾಲವೇ ಮುಲಾಮು.
ವೃಶ್ಚಿಕ : ಆರೋಗ್ಯ ಹಾನಿ. ಶೀತ, ಕೆಮ್ಮು ಬಾಧೆ. ನಿಮ್ಮ ಸೃಜನ ಶೀಲತೆ ಮತ್ತೊಮ್ಮೆ ನಿಮ್ಮ ಸಹಾಯಕ್ಕೆ ಬರಲಿದೆ.
ಧನಸ್ಸು : ಸುಲಲಿತವಾಗಿ ನಡೆಯುತ್ತಿದ್ದ ಕೆಲಸ ಕಾರ್ಯಗಳಿಗೆ ಕ್ಷಣಿಕ ಬ್ರೇಕ್ ಸಿಗಬಹುದು. ಆದರೂ ದೈವ ಬಲ ನಿಮ್ಮ ಕಡೆಗಿದೆ.
ಮಕರ : ಸೋತಿರುವುದು ನೀವು. ಅದರಿಂದ ಎಲ್ಲರೂ ಸಂಕಟ ಪಡುವಾಗ ಮತ್ತೆ ಸ್ವಾರ್ಥ ಸಾಧನೆಯ ಹಂಬಲ ಸಲ್ಲದು.
ಕುಂಭ : ಕಷ್ಟ ಕರ ಪರಿಸ್ಥಿತಿಗಳು, ಗೊಂದಲ ಎದುರಾದರೆ ಬೆನ್ನು ತಿರುಗಿಸಬೇಡಿ. ನಿಮ್ಮ ಎಳ್ಳಿನಷ್ಟರ ಪ್ರಯತ್ನ ಕೂಡ ನಿಮ್ಮನ್ನು ಮೇಲೆತ್ತಲು ಸಹಕರಿಸುತ್ತವೆ.
ಮೀನ : ನಿಮ್ಮ ಪ್ಲಾನ್‌ಗಳು ಬೇರೆಯವರ ಕೈಯಲ್ಲಿ ಬೇಗನೇ ಬಲಿಯುವುದನ್ನು ಕಂಡು ಕರುಬಬೇಡಿ. ಒಂದು ಸುಂದರ ದಿನ ನಿಮಗೂ ಕಾದಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications