ನೆತ್ತಿಯ ಮೇಲೆ ಸೂರ್ಯ ಉಂಗುಷ್ಟದ ಕೆಳಗೆ ವಜ್ರ!
*ಸುಪ್ರಭಾತ
ಮೈಸೂರು : ಭೂಕಂಪದ ಬಹುಮುಖಿ ಸಾಧ್ಯತೆಗಳ ಜತೆಜತೆಗೇ ಕಬ್ಬಿಣ, ಹಿತ್ತಾಳೆ, ತಾಮ್ರ, ಬೆಳ್ಳಿ, ಚಿನ್ನ , ವಜ್ರ..... ವಸುಂಧರೆಯ ಒಡಲಲ್ಲಿ ಏನೇನು ಅಡಗಿದೆಯೋ ? ಲೋಹ ನಿಕ್ಷೇಪಗಳನ್ನು ಪತ್ತೆ ಹಚ್ಚುವಲ್ಲಿ ನಿರಂತರ ಶ್ರಮವಹಿಸುವ ಭೂಗರ್ಭ ಪಂಡಿತರಿಗೆ ಇಳೆ ಆಗೊಮ್ಮೆ ಈಗೊಮ್ಮೆ ರೋಮಾಂಚನ ಮೂಡಿಸುವ ಸೂಚನೆಗಳನ್ನು ಕೊಡುತ್ತಾಳೆ. ಅಂತಹುದೊಂದು ಸೂಚನೆ ಇವತ್ತು ಕರ್ನಾಟಕದಲ್ಲಿ ರೋಮಾಂಚನ ಉಂಟುಮಾಡುತ್ತಿದೆ.
ನಿಮಗೆ ಗೊತ್ತಿರುವ ಹಾಗೆ ಕರ್ನಾಟಕದಲ್ಲಿ ಕಬ್ಬಿಣಕ್ಕೆ ಕೊರೆತ ಇಲ್ಲ, (ಕುದುರೆಮುಖ, ಸೊಂಡೂರು )ತಾಮ್ರ ಅಷ್ಟಾಗಿಲ್ಲ , ಇಂಗಳದಾಳು ಗಣಿ ನಷ್ಟದಲ್ಲಿದೆ. ಕೋಲಾರ ನಿರಾಭರಣ ಸುಂದರಿ ಎನಿಸಿದ್ದಾಳೆ. ಆದರೆ ಲೋಹಗಳ ರಾಣಿ ಎನಿಸಿದ ವಜ್ರವಂತೂ ಕರ್ನಾಟಕದಲ್ಲಿ ಇಲ್ಲವೇ ಇಲ್ಲ ಎಂಬ ನಂಬುಗೆಯನ್ನು ಬುಡಮೇಲು ಮಾಡುವ ಸುದ್ದಿಯನ್ನು ಇವತ್ತು ತೊಗರಿಗೆ ಹೆಸರಾದ ಗುಲ್ಬರ್ಗ ನೆಲ ನಮಗೆ ನೀಡುತ್ತಿದೆ.
ವಜ್ರದ ಪಕಳೆಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಗುಲ್ಬರ್ಗದ ನೆಲ ನಾಳೆಯ ಕನಸುಗಳಿಗೆ ಕಚಗುಳಿ ಇಡುವ ಸಮಾಚಾರ ತಲುಪಿಸುತ್ತಿದೆ. ಭಾರತದ ಡೈಮಂಡ್ ಭೂಪಟದಲ್ಲಿ ಇದೇ ಪ್ರಥಮಬಾರಿಗೆ ಕರ್ನಾಟಕದ ಚಿತ್ರ ಬರೆಯುತ್ತಿದೆ. ಈ ಸಂಗತಿಯನ್ನು ಸ್ವತಃ ಭಾರತ ಭೂಗರ್ಭ ಇಲಾಖೆ ಹೆಮ್ಮೆಯಿಂದ ಹೇಳಿಕೊಂಡಿದೆ.
ಗುಲ್ಬರ್ಗದಲ್ಲಿ ಪತ್ತೆಯಾಗಿರುವ ವಜ್ರದ ಅದಿರನ್ನು ಆಮೂಲಾಗ್ರ ಪರೀಕ್ಷೆಗೆ ಒಳಪಡಿಸುವ ಕಾರ್ಯವನ್ನೂ ಇಲಾಖೆ ಕೈಗೆತ್ತಿಕೊಂಡಿದೆ, ಅದಿರಿನಲ್ಲಿ ಹುದುಗಿರುವ ವಜ್ರದ ಪ್ರಮಾಣ ಮತ್ತು ಗುಣವನ್ನು ತಜ್ಞರು ಆಮೂಲಾಗ್ರವಾಗಿ ಪರಿಷ್ಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ ಭಾರತ ಭೂಗರ್ಭ ಇಲಾಖೆಯ ಹಿರಿಯ ಅಧಿಕಾರಿ ಡಾ. ಎಸ್. ಕೆ. ಮುಜಂದಾರ್.
ಮಾನಸಗಂಗೋತ್ರಿಯ ಭೂಗರ್ಭ ವಿಭಾಗ ಆಯೋಜಿಸಿದ್ದ Challenges in Precambrian Geology in the New Millennium ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಮೈಸೂರಿಗೆ ಬಂದಿದ್ದ ಮುಜಂದಾರ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ಆ ವಿಷಯ ಪ್ರಕಟಿಸಿದ್ದಾರೆ.
ಭಾರತ ಭೂಗರ್ಭ ಇಲಾಖೆ ನಡೆಸುತ್ತಿರುವ ಪ್ರಾದೇಶಿಕ ಲೋಹ ಪತ್ತೆ ಸರ್ವೇಕ್ಷಣ ಸಂದರ್ಭದಲ್ಲಿ ಗುಲ್ಬರ್ಗ
ವಜ್ರ ನಿಕ್ಷೇಪದ ಸುಳಿವು ದೊರೆಯಿತು. ಕರ್ನಾಟಕವಲ್ಲದೆ ಈಗಾಗಲೇ ವಜ್ರ ನಿಕ್ಷೇಪ ಹೊಂದಿರುವ ಆಂಧ್ರಪ್ರದೇಶದ ನಾರಾಯಣಪೆಟ್‌ನಲ್ಲೂ ಹೆಚ್ಚುವರಿ ವಜ್ರ (kimberlites) ಇರುವುದು ಪತ್ತೆ ಆಗಿದೆ. ಅಲ್ಲದೆ, ನಮ್ಮದೇ ಜಿಲ್ಲೆಗಳಾದ ರಾಯಚೂರು, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಸರಾಸರಿ 2.75 ರಿಂದ 4 ಗ್ರಾಂ (per g/t) ವಜ್ರವಿರುವ ಕಿಂಬರ್‌ಲೆಟ್‌ಗಳು ಪತ್ತೆ ಆಗಿವೆ ಎಂದು ಮುಜಂದಾರ್ ಹೇಳಿದ್ದಾರೆ.
ಸುಡು ಬಿಸಿಲು, ಕುಡಿಯುವ ನೀರಿಗೂ ಸಂಚಕಾರ, ಫಸಲು ಬೆಳೆದೂ ಬೆಲೆ ಸಿಗದೆ ಕಂಗಾಲಾದವರನ್ನು ಹೊತ್ತು ನಿಂತಿರುವ ಬಯಲು ಸೀಮೆಯ ಭಾಮಿನಿ ತನ್ನ ಒಡಲಲ್ಲಿ ಅಮೂಲ್ಯ ಲೋಹಗಳನ್ನು ಬಚ್ಚಿಟ್ಟುಕೊಂಡಿರುವುದು ಮೇಲುನೋಟಕ್ಕೆ ವಿಚಿತ್ರ ಎನಿಸುತ್ತದೆ. ಆದರೆ ವಸ್ತುಶಃ ಇದೊಂದು ದಕ್ಷಿಣ ಪ್ರಸ್ತ ಭೂಮಿಯ ಪ್ರಕೃತಿ ವೈಚಿತ್ರ !
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications