ಬಹುಮಹಡಿ ಕಟ್ಟಡದ ನೆಲಮಾಳಿಗೆ ಪಾರ್ಕಿಂಗ್‌ಗೆ ಮೀಸಲು -ಕೋರ್ಟ್
ಬೆಂಗಳೂರು : ನಗರದ ಜನನಿಬಿಡ ಪ್ರದೇಶದಲ್ಲಿರುವ ಬಹುಮಹಡಿ ಕಟ್ಟಗಳ ಬೇಸ್‌ಮೆಂಟ್ ಫ್ಲೋರ್‌ನಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ನೆಲಸಮ ಮಾಡುವಂತೆ ರಾಜ್ಯ ಹೈಕೋರ್ಟ್ ಬೆಂಗಳೂರು ಮಹಾನಗರ ಪಾಲಿಕೆಗೆ ಗುರುವಾರ ಆದೇಶಿಸಿದೆ.
ಅಲ್ಲದೆ ಕಟ್ಟಡ ನಿರ್ಮಾಣ ಕಾಯ್ದೆ ಉಲ್ಲಂಘಿಸಿದ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾದ ಪಾಲಿಕೆಯ ಅಧಿಕಾರಿಗಳ ಮೇಲೆ ಕೋರ್ಟ್ ಕಿಡಿ ಕಾರಿದ್ದು, 500 ರೂಪಾಯಿ ನ್ಯಾಯಾಲಯ ವೆಚ್ಚ ಭರಿಸುವಂತೆ ಸೂಚಿಸಿದೆ. ಫೆಬ್ರವರಿ 26ರೊಳಗೆ ನೆಲಮಾಳಿಗೆಯಲ್ಲಿರುವ ಅಂಗಡಿಗಳ ಧ್ವಂಸ ಕಾರ್ಯ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ಅಶೋಕ್ ಭಾನ್ ಮತ್ತು ನ್ಯಾಯಮೂರ್ತಿ ಎನ್. ಕುಮಾರ್ ಅವರ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.
ನಗರದ ಹರಿಪ್ರಸಾದ್ ಮತ್ತು ಎಂ.ಕೆ. ಮಧುಸೂದನ್ ಅವರ ರಿಟ್ ಅರ್ಜಿಯ ವಿಚಾರಣೆ ನಡೆಸಿ, ಈ ಆದೇಶ ಹೊರಡಿಸಲಾಗಿದ್ದು, ಆ ಪ್ರಕಾರ ಮೆಜೆಸ್ಟಿಕ್, ಗಾಂಧಿನಗರ, ಮಲ್ಲೇಶ್ವರಂ, ರೆಸಿಡೆನ್ಸಿ ಮತ್ತು ಎಂ.ಜಿ.ರೋಡ್, ತಾಜ್ , ಕಾಪರ್ ಅವೆನ್ಯೂ ಪ್ಲಾಜಾ , ಕಾಮತ್, ಮಣಿಪಾಲ್, ಮಲ್ಯ ಮತ್ತು ಬೆಂಗಳೂರು ಆಸ್ಪತ್ರೆ ಕಟ್ಟಡಗಳ ಬೆಸ್‌ಮೆಂಟ್‌ನಲ್ಲಿರುವ ಅಂಗಡಿಗಳು ನೆಲಸಮವಾಗಲಿವೆ.
ಮೋಟಾರ್ ವಾಹನಗಳ ಸಂಖ್ಯೆವಿಪರೀತ ಹೆಚ್ಚಿದೆ. ಕಾಯ್ದೆಯ ಅನ್ವಯ ಅವುಗಳ ನಿಲುಗಡೆಗೆ ಕಟ್ಟಡಗಳ ಬೇಸ್‌ಮೆಂಟ್‌ನಲ್ಲಿ ಜಾಗ ಒದಗಿಸಬೇಕು. ಈ ಕುರಿತು ಕಳೆದ ಅಕ್ಟೋಬರ್‌ನಲ್ಲಿಯೇ ಕೋರ್ಟ್, ಪಾಲಿಕೆಗೆ ಸೂಚಿಸಿದ್ದರೂ ಪ್ರತಿವಾದಿಗಳು ಸಮರ್ಪಕ ಉತ್ತರ ಸಲ್ಲಿಸಿರಲಿಲ್ಲ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications