ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ವಾಣಿಜ್ಯ ವಿಷಯಗಳಲ್ಲಿ ಜಯ ನಿಮ್ಮದೆ. ಹೊಸ ಒಪ್ಪಂದಗಳಿಗೆ ಮುಂದಾಗಲೂ ಮುಹೂರ್ತ ಗಮ್ಮತ್ತಾಗಿದೆ. ಒಂದೇ ಸಮಸ್ಯೆಯೆಂದರೆ ಕುಟುಂಬದಲ್ಲಿ ತುಸು ಕಿರಿಕಿರಿ.ವೃಷಭ : ಅಪ್ರಿಯ ಸತ್ಯಗಳನ್ನು ಹೇಳ ಹೊರಟಿರುವುದೇ ನಿಮ್ಮ ಪ್ರಣಯ ವೈಫಲ್ಯಕ್ಕೆ ಕಾರಣ. ನಿಮ್ಮ ಪ್ರಾಮಾಣಿಕತೆಯನ್ನು ಅವರಿಗೆ ಸ್ಪಷ್ಟ ಮಾಡಿಸಲು ಪ್ರಯತ್ನಿಸಿ. ಅವರು ಕೇಳಿಸಿಕೊಳ್ಳುವ ಮೂಡಿನಲ್ಲಿದ್ದಾರೆ.
ಮಿಥುನ : ಕೆಲಸ ಮಾಡುವ ಒತ್ತಡ ಎಷ್ಟಿದೆಯೆಂದರೆ ಅದರಲ್ಲಿ ನೀವು ಮುಳುಗಿ ಹೋಗುತ್ತೀರಿ. ಅಂದಹಾಗೆ, ನಿಮ್ಮ ಮಾತುಗಳಿಗೆ ನೀವು ಬದ್ಧರು ಅನ್ನುವ ಅವರ ನಂಬಿಕೆಯನ್ನು ಹುಸಿ ಮಾಡಬೇಡಿ.
ಕಟಕ : ಭವಿಷ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಲಿದು ಸಕಾಲ. ನೀವು ಕುಟುಂಬಸ್ಥರಾಗಿದ್ದರಂತೂ ಈ ಬಗ್ಗೆ ತಪ್ಪದೆ ನಿಗಾ ವಹಿಸಿ. ಅತಿಥಿಗಳು ಮನೆ ಬಾಗಿಲಲ್ಲೇ ಇದ್ದಾರೆ.
ಸಿಂಹ : ನಿಮ್ಮ ಅಹಂ ಇತರರಿಗೆ ಮುಜುಗರ ತರದಂತೆ ಎಚ್ಚರಿಕೆ ವಹಿಸಿ. ನೀವು ನಿಮ್ಮ ಇತರ ಸಹೋದ್ಯೋಗಿಗಳಿಗಿಂತಲೂ ಉತ್ತಮರು ಅನ್ನುವುದು ನಿಜವಾದರೂ, ಸದ್ಯಕ್ಕೆ ರಾಜಿ ಮನೋಭಾವ ಅಗತ್ಯ.
ಕನ್ಯಾ : ಅಧಿಕಾರವನ್ನು ಸ್ವಾರ್ಥಕ್ಕೆ ಬಳಸಬೇಡಿ. ಈ ದಿನ ಅನಿರೀಕ್ಷಿತ ಧನಲಾಭ ಕಾದಿದೆ. ಕೋರ್ಟ್ ವ್ಯವಹಾರಗಳಲ್ಲಿ ಶುಭ ಸಮಾಚಾರ ಬಂದರೂ ಆಶ್ಚರ್ಯವಿಲ್ಲ .
ತುಲಾ : ಒಂಟಿತನ ಅನುಭವಿಸುತ್ತಿದ್ದೀರಿ. ಆದರೆ, ಈ ಒಂಟಿತನ ನಿಮಗೆ ಈ ದಿನ ಇಷ್ಟವಾಗುತ್ತಿದೆ ಅನ್ನುವುದೇ ವಿಶೇಷ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಕಾಲ.
ವೃಶ್ಚಿಕ : ಆರೋಗ್ಯ ಅಷ್ಟೇನೂ ಹದವಾಗಿಲ್ಲ . ಈ ಸಂದರ್ಭದಲ್ಲಿ ಮಾನಸಿಕವಾಗಿ ಗೊಂದಲಗೊಳ್ಳುವುದು ಬೇಡ. ಈ ದಿನ ನಿಮ್ಮ ಬಹು ದಿನಗಳ ಬೇಡಿಕೆಗೆ ಅವರು ಅಸ್ತು ಅನ್ನುತ್ತಾರೆ.
ಧನಸ್ಸು : ಐಡಿಯಾಗಳನ್ನು ಬದಲಿಸಿಕೊಳ್ಳುವ ಮುನ್ನ ಅವರ ಪ್ರಾಮಾಣಿಕತೆಯನ್ನು ಖಚಿತಪಡಿಸಿಕೊಳ್ಳಿ. ವೃತ್ತಿಯಲ್ಲಿ ನೀವು ತೋರುವ ಕುಶಲತೆ ಬಡ್ತಿಯ ಮತ್ತೊಂದು ಮೆಟ್ಟಿಲನ್ನು ಹತ್ತಿರ ತರುತ್ತದೆ.
ಮಕರ : ಹೊಸ ಗೆಳೆಯರನ್ನು ಕಂಡುಕೊಳ್ಳುವುದು ಅನಿವಾರ್ಯ. ಅದರ ಅಗತ್ಯ ನಿಮಗಿದೆ. ಅಂದಹಾಗೆ, ಭಾವುಕ ಗಳಿಗೆಯಾಂದರಲ್ಲಿ ನೀವು ವ್ಯಕ್ತಪಡಿಸಿದ ಭಾವನೆಗಳಿಗೆ ಅವರು ಅರ್ಹರೇ ಅನ್ನುವುದು ಪ್ರಶ್ನೆ.
ಕುಂಭ : ಹೊಸ ಐಡಿಯಾದೊಂದಿಗೆ ಬಂದಿರುವ ಗೆಳೆಯರ ಮಾತಿಗೆ ಕಿವಿಗೊಡಿ. ಆದರೆ, ನಿಮ್ಮ ಬಗೆಗಿನ ದೂರುಗಳನ್ನು ಪಕ್ಕಕ್ಕಿರಿಸಿ. ಖುಷಿಯ ದಿನ.
ಮೀನ : ಯಶಸ್ಸಿಗಾಗಿ ಅಡ್ಡದಾರಿ ಹಿಡಿಯುವುದು ಅಷ್ಟೇನೂ ಕ್ಷೇಮಕರವಲ್ಲ . ನಿಮ್ಮ ಕೆಲಸದಲ್ಲಿ ಮನಸ್ಸನ್ನು ಪೂರ್ಣವಾಗಿ ಕೇಂದ್ರೀಕರಿಸಿ. ಆಪ್ತರ ವಲಯದಲ್ಲಿ ಮನ್ನಣೆ ಗಳಿಸುತ್ತೀರಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications