Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ ಮೆಟ್ರೋ ಬಸ್‌ ಆರಂಭಕ್ಕೆ ಕೇಂದ್ರದ ತಾತ್ವಿಕ ಸಮ್ಮತಿ

ಬೆಂಗಳೂರು : ಹಾಲಿ ಬೆಂಗಳೂರಿನಲ್ಲಿರುವ ವಾಹನಗಳ ಒಟ್ಟು ಸಂಖ್ಯೆ ಎಷ್ಟು ಗೊತ್ತೆ? ಮುಂದಿನ 14 ವರ್ಷಗಳಲ್ಲಿ ಈ ವಾಹನಗಳ ಸಂಖ್ಯೆ ಎಷ್ಟಾಗುತ್ತದೆ ಎಂದು ಊಹಿಸಿದ್ದೀರಾ? ರಾಜ್ಯದ ಗೃಹ ಕಾರ್ಯದರ್ಶಿ ಎಂ.ಬಿ. ಪ್ರಕಾಶ್‌ ಅವರ ರೀತ್ಯ ಹಾಲಿ ಬೆಂಗಳೂರಲ್ಲಿ ಅಂದಾಜು 13.30 ವಾಹನಗಳಿವೆ (ಹೊರ ರಾಜ್ಯದ ನೋಂದಣಿ ಸಂಖ್ಯೆಯ ವಾಹನಗಳನ್ನು ಬಿಟ್ಟು), ದ್ವಿಚಕ್ರ ವಾಹನಗಳ ಸಂಖ್ಯೆಯಂತೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ 2015ನೇ ಇಸವಿ ಹೊತ್ತಿಗೆ ಬೆಂಗಳೂರಿನ ವಾಹನಗಳ ಸಂಖ್ಯೆ 22 ಲಕ್ಷಕ್ಕೆ ಏರಲಿದೆ.

ಬೆಂಗಳೂರು ನಗರ ಸಂಚಾರಿ ಪೊಲೀಸ್‌, ಬೆಂಗಳೂರು ಕಾರ್ಯಪಡೆ, ಸಂಚಾರ ಸಲಹಾ ಸಮಿತಿ ಸಂಯುಕ್ತಾಶ್ರಯದಲ್ಲಿ ಬುಧವಾರ ಜರುಗಿದ ಸುಗಮ ಸಂಚಾರ ವ್ಯವಸ್ಥೆಗೆ ತುರ್ತು ಯೋಜನೆಗಳು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ಪ್ರಕಾಶ್‌ ಈ ವಿಷಯ ತಿಳಿಸಿದ್ದಾರೆ.

ಮೆಟ್ರೋ ಬಸ್‌ : ಬೆಂಗಳೂರಲ್ಲಿ ಮೆಟ್ರೋ ಬಸ್‌ಗಳ ಆರಂಭಕ್ಕೆ ಕೇಂದ್ರ ಸರಕಾರದ ತಾತ್ವಿಕ ಒಪ್ಪಿಗೆ ದೊರಕಿದೆ. ನಗರದಲ್ಲಿ ಹಾಲಿ 1500 ಬಸ್‌ಗಳು ಸಂಚರಿಸುತ್ತಿವೆ ಆದರೂ, ಸಂಚಾರ ಸಮಸ್ಯೆ - ಒತ್ತಡ ಹೆಚ್ಚುತ್ತಲೇ ಇದೆ. ಮೆಟ್ರೋ ಬಸ್‌ಗಳ ಸಂಚಾರದಿಂದ ಕನಿಷ್ಠ 200 ಬಸ್‌ಗಳ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ ಎಂದೂ ಅವರು ಹೇಳಿದರು.

ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರಿಂದ ವಸೂಲಿ ಮಾಡುವ ದಂಡದ ಹಣವನ್ನು ರಸ್ತೆ ಹಾಗೂ ಸಂಚಾರ ವ್ಯವಸ್ಥೆ ಅಭಿವೃದ್ಧಿಗೆ ಬಳಸಲು ಸರಕಾರ ಆದೇಶ ಹೊರಡಿಸಿದೆ. ಮಹಾನಗರ ಪಾಲಿಕೆ ಜಂಟಿ ಆಯುಕ್ತ ಆಶೋಕ್‌ ದಳವಾಯಿ ಅವರ ನೇತೃತ್ವದಲ್ಲಿ ರಚಿಸಲಾಗಿರುವ ಸಮತಿ ಸಂಚಾರ ವ್ಯವಸ್ಥೆಯ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳೇನು ಎಂಬ ಬಗ್ಗೆ ಮುಂದಿನ ತಿಂಗಳು ತನ್ನ ವರದಿ ಸಲ್ಲಿಸಲಿದೆ. ಇದನ್ನು ಪರಿಶೀಲಿಸಿ ಸರಕಾರ ಅನುಷ್ಠಾನ ಮಾಡಲಿದೆ ಎಂದರು.

ಏಕಮುಖ ಸಂಚಾರ : ಸಮಾರೋಪ ಸಮಾರಂಭಕ್ಕೂ ಮುನ್ನ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಾಪೌರರಾದ ಪ್ರೇಮಾ ಕಾರ್ಯಪ್ಪ ಅವರು, ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಹಾಗೂ ಕೇಂದ್ರ ಭಾಗದಲ್ಲಿ ಏಕ ಮುಖ ಸಂಚಾರ ವ್ಯವಸ್ಥೆ ಜಾರಿಗೆ ತರುವುದರಿಂದ ಸಂಚಾರದ ಒತ್ತಡ ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಪ್ರತಿವರ್ಷ 600 ಸಾವು : ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಪ್ರತಿವರ್ಷ ಕನಿಷ್ಠ 600 ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಸಾವಿನ ಸಂಖ್ಯೆ ಜಂಕ್ಷನ್‌ಗಳಲ್ಲಿಯೇ ಹೆಚ್ಚು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರಾದ ಶಂತನು ಕೌನ್ಸಲ್‌, ಪೊಲೀಸ್‌ ಆಯುಕ್ತ ಮಡಿಯಾಳ್‌, ತುರ್ತು ಯೋಜನೆ ನಿರ್ದೇಶಕ ಶ್ರೀನಿವಾಸ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಎಂ.ಎನ್‌. ರೆಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+