Get Updates
Get notified of breaking news, exclusive insights, and must-see stories!

ಕಾಂಕ್ರೀಟ್‌ ಸಾಗರದ ಪುಷ್ಪ ದ್ವೀಪ

ಬೆಂಗಳೂರಿನ ಹೆಮ್ಮೆಯ ಲಾಲ್‌ಬಾಗ್‌ ಅನ್ನು ಉದ್ಯಾನಗಳ ಹಾರದ ಪದಕ ಎಂದು ಬಣ್ಣಿಸಲಾಗಿದೆ. ಇದು ಭವ್ಯ ನಗರದ ಶ್ವಾಸಕೋಶ, ನೀಳವಾಗಿ, ಆಳವಾಗಿ ಉಸಿರಾಡಿ. ಇಲ್ಲಿ ಆಮ್ಲಜನಕ ಉಚಿತ ಎಂಬ ಫಲಕವೂ ಇಲ್ಲಿದೆ. ಒಳಗೆ ಬಂದ ಮೇಲೆ ನಿಮಗೆ ಆಮ್ಲಜನಕ ಉಚಿತವಾಗಿ ಸಿಗಬಹುದು. ಆದರೆ ಒಳಗೆ ಬರಲು ನೀವು ಹಣ ತೆರಬೇಕು.

ಲಾಲ್‌ಬಾಗ್‌ ಸಸ್ಯಗಳ ಆಗರ. 97 ಹೆಕ್ಟೇರ್‌ ಅಥವಾ 240 ಎಕರೆ ಪ್ರದೇಶದಲ್ಲಿ ಸಸ್ಯರಾಶಿ ಮೈಚಾಚಿದೆ. ಲಾಲ್‌ಬಾಗ್‌ನಲ್ಲಿ ಮುಖ್ಯವಾಗಿ ನೋಡಬೇಕಾದ್ದು, ಗಾಜಿನ ಮನೆ, ಜಯಚಾಮರಾಜೇಂದ್ರ ಒಡೆಯರ ಪ್ರತಿಮೆ, ಸರಕಾರಿ ಮತ್ಸ್ಯಾಗಾರ, ಸುಂದರವಾದ ಹೂ ಗಡಿಯಾರ, ಶಿಲ್ಪೋದ್ಯಾನ, ಗುಲಾಬಿ ವನ, ಕೆಂಪೇಗೌಡರ ಗೋಪುರ, ಬೃಹತ್‌ಬಂಡೆ, ಮಿಲಿಯ ವರ್ಷಗಳ ಹಿಂದಿನ ವೃಕ್ಷದ ಪಳೆಯುಳಿಕೆ, ಬೇಸಿಗೆಯಲ್ಲೂ ತಂಪಾಗಿರುವ ತಂಡಿ ಸಡಕ್‌, ಲಾಲ್‌ಬಾಗ್‌ ಕೆರೆ ಹಾಗೂ ದ್ವೀಪ. ನೋಡುವುದು ಬೇಕಾದಷ್ಟಿದ್ದರೆ ಮೆಲ್ಲುವುದಕ್ಕೆ ಇರುವುದೆರೆಡೇ ಎರಡು. ಕಡ್ಳೆಕಾಯಿ, ಸುಟ್ಟ ಮೆಕ್ಕಜೋಳ. ಇನ್ನೂ ಬೇಕಿದ್ದರೆ ತೋಟದ ಆಚೆ ಎಂಟಿಆರ್‌ ಇದ್ದೇ ಇದೆ.

ಹೂವು ಚೆಲುವೆಲ್ಲ ತಂದೆಂದಿತು... ಹೂವಿನ ಚೆಲುವೆ ಚೆಲುವು. ಅದಕ್ಕೇ ಕವಿ ಹೂವೂ ಚೆಲುವೆಲ್ಲ ತಂದೆಂದಿತು ಎಂದು ಹಾಡಿದ್ದು.... ವಿವಿಧ ಬಗೆಯ ಹೂವುಗಳನ್ನು ಸುಂದರವಾಗಿ ಜೋಡಿಸಿಟ್ಟರೆ ನೋಡಲು ಇನ್ನೂ ಚೆನ್ನ . ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಪುಷ್ಪ ಪ್ರಿಯರು ಲಾಲ್‌ಬಾಗ್‌ನಲ್ಲಿ ಸುಂದರವಾಗಿ ಜೋಡಿಸಿಟ್ಟ ಹೂ - ಹಣ್ಣುಗಳನ್ನು ನೋಡಬಹುದು.

ಈ ಬಾರಿ ಜನವರಿ 19ರಿಂದ ಲಾಲ್‌ಬಾಗ್‌ನಲ್ಲಿ ಪುಷ್ಪಪ್ರದರ್ಶನ ಆರಂಭ. ಪ್ರದರ್ಶನದಲ್ಲಿ ಹೂಗಳಷ್ಟೇ ಅಲ್ಲದೆ ಅನೇಕ ವಿಧದ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯೂ ಇರುತ್ತದೆ. ಉದ್ಯಾನ ಕಲಾ ವಿನ್ಯಾಸದಲ್ಲಿ ಬಳಸುವ ಅಮೃತ ಶಿಲೆ ವಿಗ್ರಹ, ಹೂಕುಂಡಗಳ ಪ್ರದರ್ಶನ, ಕೃತಕ ಬೆಳಕಿನಿಂದ ಗಿಡ ಬೆಳೆಸುವ ವಿಧಾನದ ಬೆಳಕಿನಂಗಳದ ತೋಟ, ಬಿಡಿ ಹೂಗಳು ಮತ್ತು ವಿಶೇಷ ಜಾತಿಯ ಎಲೆ ಗಿಡಗಳ ಆಕರ್ಷಕ ಜೋಡಣೆಯೂ ಇದೆ.

ಲಾಲ್‌ಬಾಗ್‌ ಸಸ್ಯ ತೋಟದ ನಡುವೆ ಇರುವ ಗಾಜಿನ ಮನೆಯಲ್ಲಿ ವಿವಿಧ ಆಕಾರ, ವಿನ್ಯಾಸಗಳಲ್ಲಿ ಜೋಡಿಸಲಾಗುತ್ತದೆ. ಮೈಸೂರು ಉದ್ಯಾನ ಕಲಾ ಸಂಘದ ಆಶ್ರಯದಲ್ಲಿ ಹಾಗೂ ತೋಟಗಾರಿಕೆ ಇಲಾಖೆ ಉಸ್ತುವಾರಿಯಲ್ಲಿ ನಡೆಯಲಿರುವ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ವ್ಯಕ್ತಿಗಳು ಹಾಗೂ ಸಂಘ - ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ.

ಪ್ರದರ್ಶನ ವ್ಯಾಪಕವಾಗಿ ಜನಮನ ಗೆದ್ದಿರುವುದರಿಂದ ಪ್ರದರ್ಶನಕ್ಕೆ ಪ್ರವೇಶ ಶುಲ್ಕವಿರುತ್ತದೆ. ಈ ಸಂದರ್ಭದಲ್ಲಿ ಉದ್ಯಾನಕ್ಕೆ ಲಕ್ಷಾಂತರ ವೀಕ್ಷಕರು ಭೇಟಿ ನೀಡುತ್ತಾರೆ. ಪ್ರದರ್ಶನ ಸಂದರ್ಭದಲ್ಲಿ ಕುಡಿಯುವ ನೀರೂ ಸೇರಿದಂತೆ ಎಲ್ಲ ರೀತಿಯ ವಿಶೇಷ ವ್ಯವಸ್ಥೆಗಳನ್ನೂ ಮಾಡಲಾಗುತ್ತದೆ. ಶಾಲಾ ಮಕ್ಕಳಿಗೆ ಮಾತ್ರ ಜ.25ರಂದು ಅರ್ಧ ದಿನ ಉಚಿತ ಪ್ರವೇಶ.

ಪ್ರದರ್ಶನದಲ್ಲಿ ಹೆಬ್ಬೆಟ್ಟಿನ ಗಾತ್ರದ ಹೂವಿನಿಂದ ಹಿಡಿದು ಬಾಳೆ ಎಲೆ ಅಗಲದ ಹೂವುಗಳೂ ಇರುತ್ತವೆ. ವಿಶೇಷ ಜಾತಿಯ ಹೂಗಳಷ್ಟೇ ಅಲ್ಲದೆ ಅಪರೂಪದ , ಆಮದು ತಳಿಗಳು ಹಾಗೂ ಹೈಬ್ರಿಡ್‌ ತಳಿಗಳ ಕಾಯಿ, ಹಣ್ಣಗಳು ನೋಡುವುದಕ್ಕಷ್ಟೇ ಅಲ್ಲ ಕೊಂಡುಕೊಳ್ಳಲೂ ಲಭ್ಯ. ಈ ಹೂಗಳ ಜಾತ್ರೆಯಲ್ಲಿ ವರ್ಷಕ್ಕೊಮ್ಮೆ ತಿರುಗಾಡಬಹುದಾದ, ಬಹುಕಾಲ ನೆನಪನಲ್ಲುಳಿಯುವ ಈ ವಾರ್ಷಿಕ ಹಬ್ಬವನ್ನು ಮಿಸ್‌ ಮಾಡಿಕೊಂಡರೆ ಮತ್ತೊಂದು ಪ್ರದರ್ಶನದವರೆಗೆ ಕಾಯಬೇಕಾಗುತ್ತದೆ.

ಒಂದು ವಾರದ ಕಾಲ ಲಾಲ್‌ಬಾಗಿನ ಹಸಿರು ತೋಟದ ನಡುವೆ ನಲಿವ ಕೆಂಪು, ನೀಲಿ ಹೂವು ಗಾಜಿನ ಮನೆಯ ಅಂದವನ್ನು ಮತ್ತಷ್ಟು ವೃದ್ಧಿಸುತ್ತದೆ. ಬಿಡುವು ಮಾಡಿಕೊಂಡು ಒಂದು ರೌಂಡು ಹೋಗಿ ಬನ್ನಿ . ಮಡದಿ ಮಕ್ಕಳೊಂದಿಗೆ ಸುತ್ತಾಡಿ ಬರಲು ಇದು ಸುಂದರ ಪ್ರದೇಶ.

ವಾರ್ತಾ ಸಂಚಯ
ಮುಖಪುಟ / ನೋಡು ಬಾ ನಮ್ಮೂರ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+