ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಧ ಡಜನ್‌ ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಅಸ್ತು ಎಂದ ರಾಜ್ಯ ಸರ್ಕಾರ

By Staff
|
Google Oneindia Kannada News

ಬೆಂಗಳೂರು : 20326 ಮಂದಿಗೆ ಉದ್ಯೋಗಾವಕಾಶ ಸೃಷ್ಟಿಸುವ 6 ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಗಳಲ್ಲಿ 1 ಜೈವಿಕ ತಂತ್ರಜ್ಞಾನ ಹಾಗೂ 2 ಸಾಫ್ಟ್‌ವೇರ್‌ ಅಭಿವೃದ್ಧಿ ಯೋಜನೆಗಳು ಸೇರಿವೆ ಎಂದರು. 4501.76 ಕೋಟಿ ರುಪಾಯಿ ಬಂಡವಾಳ ಹೂಡಿಕೆಯ 6 ಯೋಜನೆಗಳಲ್ಲಿ ಒಂದು ಯೋಜನೆ ಬಹುರಾಷ್ಟ್ರೀಯ ಕಂಪನಿಗೆ ಸೇರಿದೆ.

ಸರ್ಕಾರ ಅಂಗೀಕಾರ ಸೂಚಿಸಿರುವ ಯೋಜನೆಗಳು

  • ಖೋಡೆ ಇಂಡಿಯಾ ಲಿಮಿಟೆಡ್‌ನ ಎಲ್‌ಎನ್‌ಜಿ ಟರ್ಮಿನಲ್‌ ಗ್ಯಾಸ್‌ ಪೈಪ್‌ಲೈನ್‌ ಯೋಜನೆ (3140.20 ಕೋಟಿ ರು. ಬಂಡವಾಳ)
  • ಸನ್‌ಲೈಫ್‌ ಟೆಕ್ನಾಲಜೀಸ್‌ನ ಜೈವಿಕ ತಂತ್ರಜ್ಞಾನ ಯೋಜನೆ (300.92ಕೋಟಿ ರು.)
  • ಇನ್ಫೋಸಿಸ್‌ ಕಂಪನಿಯ ಸಾಫ್ಟ್‌ವೇರ್‌ ಅಭಿವೃದ್ಧಿ ಯೋಜನೆ (618.56 ಕೋಟಿ ರು.)
  • ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ ಎಲೆಕ್ಟ್ರಾನಿಕ್ಸ್‌ ಮತ್ತು ಟೆಲಿ ಕಮ್ಯುನಿಕೇಷನ್ಸ್‌ ಯೋಜನೆ (130.47 ಕೋಟಿ ರು.)
  • ಸನ್‌ಲೈಫ್‌ ಟೆಕ್ನಾಲಜೀಸ್‌ನ ಮಲ್ಟಿ ಫ್ಲೆಕ್ಸ್‌ ಯೋಜನೆ (235 ಕೋಟಿ ರು.)
  • ಮೊಟೊರೋಲಾ ಇಂಡಿಯಾದ ಸಾಫ್ಟ್‌ವೇರ್‌ ಅಭಿವೃದ್ಧಿ ಯೋಜನೆ (76.61 ಕೋಟಿ ರು.)
(ಇನ್ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X