ಅಜರ್- ಜಡೇಜ ದೂರವಾಣಿ ಕರೆಗಳ ಜಾಡು ಹಿಡಿದು...
*ಸುರೇಶ್ ಪರೇಖ್
ರಾಜ್‌ಕೋಟ್ : 1996ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ಒಂದು ದಿನದ ಪಂದ್ಯದ ಸಂದರ್ಭದಲ್ಲಿ ತಾವು ತಂಗಿದ್ದ ಸಿಲ್ವರ್ ಪ್ಯಾಲೇಸ್ ಹೊಟೇಲಿನಿಂದ ಅಜರ್ ಹಾಗೂ ಜಡೇಜ ಮಾಡಿದ್ದ ದೂರವಾಣಿ ಕರೆಗಳ ಪಟ್ಟಿಯಲ್ಲಿನ ಕೆಲ ಹೆಸರುಗಳ ಜಾಡು ಹಿಡಿದು ರಾಜ್‌ಕೋಟ್ ಪೊಲೀಸರು ಮುಂಬೈಗೆ ತೆರಳಲಿದ್ದಾರೆ.
ರಾಜ್‌ಕೋಟ್ ಪೊಲೀಸ್ ಕಮಿಷನರ್ ಸುಧೀರ್ ಸಿನ್ಹ ಗುರುವಾರ ಇಂಡಿಯಾ ಇನ್ಫೋಗೆ ಈ ವಿಷಯ ತಿಳಿಸಿದ್ದಾರೆ. ಅಜರ್ ಮಾಡಿರುವ ಕರೆಗಳಿಂದ 6 ಹೆಸರುಗಳು ಸಿಕ್ಕಿವೆ. ಜಡೇಜ ಕೂಡ ಕೆಲವು ಕರೆಗಳನ್ನು ಮಾಡಿದ್ದು, ಪ್ರಾಯಶಃ ಅವುಗಳು ತಮ್ಮ ನಿವಾಸಕ್ಕೆ ಮಾಡಿರುವಂತಹವು. ಸಿಬಿಐ ವರದಿಯ ಪ್ರಕಾರ 1996ರ ಆ ಪಂದ್ಯದಲ್ಲಿ ಕಳ್ಳಾಟ ನಡೆದಿದ್ದು, ರಾಜ್‌ಕೋಟ್‌ನ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳಿಗೆ ಮೋಸವಾಗಿದೆ. ಹಾಗಾಗಿ ಈ ಪ್ರಕರಣದ ತನಿಖೆಯಾಗಬೇಕೆಂದು ವಕೀಲ ಸಂಜಯ್ ವ್ಯಾಸ್ ಅರ್ಜಿ ಸಲ್ಲಿಸಿರುವುದರಿಂದ ನಾವು ಈ ಪ್ರಕರಣವನ್ನು ಕೈಗ್ತೆತಿಕೊಂಡಿದ್ದೇವೆ ಎಂದು ರಾಜ್‌ಕೋಟ್ ಪೊಲೀಸರು ತಿಳಿಸಿದ್ದಾರೆ.
ಸಿಬಿಐ ಸಲ್ಲಿಸಿರುವ ಕಳ್ಳಾಟದ ವರದಿಯ ಪ್ರತಿಯನ್ನೂ ನಾವು ಕೇಳಿದ್ದು, ಈವರೆಗೆ ಸಿಬಿಐನಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಕೇಂದ್ರ ಸರ್ಕಾರಕ್ಕೆ ನಮ್ಮ ತನಿಖೆ ಬಗ್ಗೆ ಸಿಬಿಐ ತಿಳಿಸಿದ್ದು, ನಮಗೆ ವರದಿಯ ಪ್ರತಿ ಒದಗಿಸಲು ಅನುಮತಿಗಾಗಿ ಕಾಯುತ್ತಿದೆ. ನಮ್ಮ ತನಿಖೆ ಸುಗಮವಾಗಬೇಕಿದ್ದಲ್ಲಿ ಆ ವರದಿ ಅತಿ ಮುಖ್ಯ ಎಂದು ಸಿನ್ಹ ಹೇಳಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications