ಮುದ್ದಿನ ಮಗುವನ್ನು ಹಮಾಲಿಯನ್ನಾಗಿ ತಯಾರು ಮಾಡುತ್ತಿರುವಿರಾ?
ಭೋಪಾಲ್ : ನಮ್ಮ ಶಿಕ್ಷಣ ವ್ಯವಸ್ಥೆ ಹಾಗೂ ಪೋಷಕರು ಮಕ್ಕಳಿಗೆ ತೂಕ ಹೊರುವ ಹಮಾಲಿ ಕೆಲಸಕ್ಕೆ ತರಬೇತಿ ನೀಡುತ್ತಿದೆಯಾ? ಇತ್ತೀಚಿನ ಸಮೀಕ್ಷೆಯಾಂದು ಹೌದೆನ್ನುತ್ತದೆ. ಸುಮಾರು 6 ಸಾವಿರ ಕಿಲೋ ತೂಕವನ್ನು ಶೈಕ್ಷಣಿಕ ವರ್ಷವೊಂದರಲ್ಲಿ ಶಾಲೆಗೆ ಹೋಗುವ ಮಗು ಹೊರುತ್ತದೆಂದು ಇತ್ತೀಚಿನ ಸಮೀಕ್ಷೆಯಾಂದು ತಿಳಿಸಿದೆ.
ಇಂದೋರಿನ ಭಾರತೀಯ ಆಕ್ಯುಪ್ರೆಶರ್ ವಿಜ್ಞಾನಗಳ ಅಕಾಡೆಮಿ ಭೋಪಾಲದಲ್ಲಿ ನಡೆಸಿದ ಸಮೀಕ್ಷೆಯಿಂದ ಈ ವಿಷಯ ಹೊರಬಿದ್ದಿದೆ. ಅಕಾಡೆಮಿ ತನ್ನ ಅಧ್ಯಯನದಿಂದ ಶೈಕ್ಷಣಿಕ ಹೊರೆಯ ಚಾರ್ಟ್ ತಯಾರಿಸಿದೆ. ಅದರ ಪ್ರಕಾರ, ದಿನಕ್ಕೆ 20 ಕೆಜಿಯಂತೆ ವಾರಕ್ಕೆ 140 ಕೆಜಿ, ತಿಂಗಳಿಗೆ 500 ಕೆಜಿ ತೂಕವನ್ನು ಶಾಲೆಗೆ ಹೋಗುವ ಮಗು ಹೊರುತ್ತದಂತೆ. ಈ ಸಂಗತಿ ಕೇವಲ ಭೋಪಾಲದ ಮಕ್ಕಳಿಗೆ ಮಾತ್ರವಲ್ಲದೆ ದೇಶದ ಎಲ್ಲ ಪಟ್ಟಣಗಳ ಮಕ್ಕಳ ಸಮಸ್ಯೆಯಾಗಿದೆ.
ವಯಸ್ಸಿಗೆ ಮೀರಿದ ತೂಕ ಹೊರುವುದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದನ್ನು ಸಮೀಕ್ಷೆ ಸ್ಪಷ್ಟಪಡಿಸಿದೆ. ಸಮೀಕ್ಷೆಯಲ್ಲಿ ಪ್ರತಿಶತ 29.48 ವಿದ್ಯಾರ್ಥಿಗಳು ತಲೆನೋವಿನ ತೊಂದರೆಯಿಂದ, ಶೇ.6.49 ವಿದ್ಯಾರ್ಥಿಗಳು ಕುತ್ತಿಗೆ ನೋವಿನಿಂದ, ಶೇ.8.60 ಮಕ್ಕಳು ಭುಜದ ತೊಂದರೆಯಿಂದ ಹಾಗೂ ಶೇ.9.7 ಮಕ್ಕಳು ಹಿಮ್ಮಡಿ ಸಮಸ್ಯೆಗಳಿಂದ ಬಳಲುತ್ತಿರುವುದು ತಿಳಿದು ಬಂದಿದೆ.
ಸರ್ಕಾರಿ ಶಾಲೆಯ ಮಕ್ಕಳಿಗೆ ಹೋಲಿಸಿದರೆ ಖಾಸಗಿ ಶಾಲೆಯ ಮಕ್ಕಳು ಹೆಚ್ಚು ಭಾರ ಹೊರುತ್ತಿದ್ದಾರೆ. ಶೈಕ್ಷಣಿಕ ವ್ಯವಸ್ಥೆ ಹೇರುತ್ತಿರುವ ಅನಗತ್ಯ ಹೊರೆ ಮಕ್ಕಳ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ತೊಂದರೆ ತರುತ್ತಿದೆ ಎಂದು ಅಕಾಡೆಮಿಯ ನಿರ್ದೇಶಕ ಸುಧೀರ್ ಕೇಟ್‌ವ್ಯಾಟ್ ಹೇಳಿದ್ದಾರೆ. ಅವರು, ಮಕ್ಕಳ ಮೇಲಿನ ಹೊರೆ ಇಳಿಸುವಂತೆ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications