ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಹೊಸ ಸಂಬಂಧಗಳಿಗೆ ಹಾತೊರೆಯುತ್ತಿದ್ದೀರಿ. ವಾತಾವರಣವೂ ನಿಮಗೆ ಅನುಕೂಲಕರವಾಗಿಯೇ ಇದೆ. ಆದರೆ, ಈ ಮೊದಲು ಅವರೊಂದಿಗಿನ ನಿಮ್ಮ ನಡವಳಿಕೆಗಳ ಬಗ್ಗೆ ವಿಮರ್ಶಿಸಿಕೊಳ್ಳುವುದು ಅತ್ಯವಶ್ಯ.ವೃಷಭ : ಅಧ್ಯಾತ್ಮಿಕ ಬದುಕಿನ ಬಗ್ಗೆ ಹೆಚ್ಚು ಯೋಚಿಸುತ್ತೀರಿ. ಇಷ್ಟಕ್ಕೂ ನಿಮ್ಮ ಸುತ್ತಲಿನ ಹವಾ ಇರುವುದೇ ಹಾಗೆ. ಆದರೆ, ನಿಮ್ಮದು ಅಭಾವ ವೈರಾಗ್ಯ. ಬಂಧು ಮಿತ್ರರ ಆಗಮನ ಮತ್ತೆ ಚೈತನ್ಯ ತುಂಬುತ್ತದೆ.
ಮಿಥುನ : ಯಶಸ್ಸು ನಿಮ್ಮ ಕೈಯ್ಯಲ್ಲೇ ಇದೆ. ಕಳೆದದ್ದರ ಬಗ್ಗೆ ಕೊರಗುವುದು ವ್ಯರ್ಥ ಅನ್ನುವುದು ನಿಮಗೂ ಗೊತ್ತು . ಹೊಸ ಸವಾಲುಗಳು ಎದುರಿಗಿರುವಾಗ ನೀವು ಗಟ್ಟಿಯಾಗುವುದು ಅವಶ್ಯ. ಬೆಳಕಿನ ಬಗ್ಗೆ ಭರವಸೆಯಿರಲಿ.
ಕಟಕ : ಅವರು ಮಾಡುವ ತಪ್ಪನ್ನು ಎತ್ತಿ ತೋರಿಸುತ್ತಿದ್ದೀರಿ. ಪ್ರೇಮ ಕಲಹಕ್ಕೆ ಕಾರಣ ಇದುವೇನೆ. ಅವರ ಸ್ಥಾನದಲ್ಲಿ ನಿಮ್ಮನ್ನೇ ಒಮ್ಮೆ ಕಲ್ಪಿಸಿಕೊಂಡು ನೋಡಿ. ಈ ಜಗಳಗಳೆಲ್ಲಾ ಎಷ್ಟು ಪೊಳ್ಳೆನ್ನುವುದು ಅರ್ಥವಾಗುತ್ತೆ.
ಸಿಂಹ : ಹೊಸ ಬೌದ್ಧಿಕ ಚಟುವಟಿಕೆಗಳನ್ನು ಆರಂಭಿಸಲಿದು ಸಕಾಲ. ಆದರೆ, ಒಮ್ಮೆಗೇ ಪಥ ಬದಲಾವಣೆ ಬೇಡ. ಹಳೆಯ ವ್ಯಾಜ್ಯವೊಂದರಲ್ಲಿ ಜಯ ಕಾಣಲಿದ್ದೀರಿ.
ಕನ್ಯಾ : ಹೊಸತನ್ನು ಕಲಿಯುವ ನಿಮ್ಮ ಮನೋಭಾವಕ್ಕೆ ಕಚೇರಿಯಲ್ಲಿ ಅವಕಾಶವೊಂದು ಕಾಯುತ್ತಿದೆ. ಇದರಿಂದಾಗಿ ಭವಿಷ್ಯಕ್ಕೂ ಅನುಕೂಲವಾದೀತು. ವಿದೇಶ ಯೋಗವೂ ಸಾಧ್ಯವಾದೀತು.
ತುಲಾ : ಖಾಸಗಿ ಸಂಬಂಧಗಳನ್ನು ಕಾಯ್ದುಕೊಳ್ಳಲು ಹೆಚ್ಚಿನ ಎಚ್ಚರಿಕೆ ವಹಿಸಿ. ಮನೆ ಮುರುಕರು ಪಕ್ಕದಲ್ಲಿಯೇ ಇದ್ದಾರು. ಧನಾತ್ಮಕವಾಗಿ ಯೋಚಿಸುವ ಮೂಲಕ ನಿಮ್ಮನ್ನು ಕ್ರಿಯಾಶೀಲವಾಗಿರಿಸಿಕೊಳ್ಳಿ.
ವೃಶ್ಚಿಕ : ಅತಿಯಾದ ಸ್ವಾರ್ಥ ಹಾಗೂ ಹೊಯ್ದಾಟಗಳು ನಿಮ್ಮನ್ನು ಸದಾ ಅಸಂತುಷ್ಟಿಯಲ್ಲಿಡುತ್ತೆ . ಈ ದಿನ ನಿಮ್ಮ ನಾಲಗೆ ಚಪಲಕ್ಕೆ ಸೊಗಸಾದ ಅವಕಾಶವೊಂದು ಕಾದಿದೆ.
ಧನಸ್ಸು : ಆರೋಗ್ಯ ಏರುಪೇರಾಗಲು ಗ್ರಹಗತಿಗಳು ಕಾರಣವಲ್ಲ . ಹವೆಯಲ್ಲಾದ ಏರುಪೇರಿಗೆ ಆಸ್ಪತ್ರೆಗೆ ಹೋಗುವುದೇ ಒಳ್ಳೆಯದು. ಕುಟುಂಬದಲ್ಲಿ ನೆಮ್ಮದಿ ಕಾಣುತ್ತೀರಿ.
ಮಕರ : ಧನಲಾಭ, ಸೃಜನಾತ್ಮಕ ಚಟುವಟಿಕೆಗಳಲ್ಲಿ ಪ್ರಗತಿ. ಇಷ್ಟಿದ್ದೂ ಈ ದಿನ ನೀವು ಅಶಾಂತಿಯಿಂದ ಕುದ್ದರೆ ಅದಕ್ಕೆ ನಿಮ್ಮ ತಿಕ್ಕಲುತನವಲ್ಲದೆ ಮತ್ತೇನೂ ಕಾರಣವಾಗದು.
ಕುಂಭ : ಎಲ್ಲವೂ ಹಿತಕರವಾಗಿಯೇ ಸಾಗುತ್ತದೆ. ಗೆಳೆಯರ ಸುತ್ತಿನಲ್ಲಿ ನೀವೇ ಕೇಂದ್ರ ಬಿಂದು. ತೀರಾ ವ್ಯವಹಾರಿಕತೆಯಿಂದ ವರ್ತಿಸಿದರೆ ಗೆಳೆಯರಿಂದ ಲೇವಡಿಗೊಳಗಾಗುತ್ತೀರಿ.
ಮೀನ : ಈ ದಿನ ಖುಷಿಯ ಲಹರಿಯಲ್ಲಿದ್ದೀರಿ. ಆದರೆ, ಇದು ಅಕಾರಣವಾದದ್ದೇನೊ ಅನ್ನುವ ಗೊಂದಲ ನಿಮ್ಮಲ್ಲಿ ಮೂಡಿ ಬಂದರೆ, ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲು ಹಿಂಜರಿಯಬೇಡಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications