Get Updates
Get notified of breaking news, exclusive insights, and must-see stories!

ನಮ್ಮ ನಾಡಿಗೆ ಬನ್ನಿ ! ಐಟಿ ಪರಿಣತರಿಗೆ ಮಾರಿಷಸ್‌ ಪ್ರಧಾನಿ ಕರೆ

ಬೆಂಗಳೂರು : ಭಾರತದ ಐಟಿ ಪರಿಣತರ ಸೇವೆಯನ್ನು ಬಳಸಿಕೊಳ್ಳಲು ಮಾರಿಷಸ್‌ ಉದ್ದೇಶಿಸಿದೆ, ಇಲ್ಲಿನ ಐಟಿ ತಂತ್ರಜ್ಞರಿಗೆ ನಮ್ಮ ದೇಶಕ್ಕೆ ಸ್ವಾಗತ ಎಂದು ಮಾರಿಷಸ್‌ ಪ್ರಧಾನಿ ಅನಿರೂದ್‌ ಜುಗ್‌ನೌತ್‌ ಹೇಳಿದ್ದಾರೆ.

ಎರಡು ದಿನಗಳ ಭೇಟಿಗಾಗಿ ಬುಧವಾರ ನಗರಕ್ಕೆ ಆಗಮಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಐಟಿ ಕ್ಷೇತ್ರದಲ್ಲಿ ವೃದ್ಧಿ ಹೊಂದಲು ಭಾರತದ ತಂತ್ರಜ್ಞರನ್ನು ಬಳಸಿಕೊಳ್ಳಲು ಉದ್ದೇಶಿಸಿದ್ದೇವೆ. ನಮ್ಮ ಜನ ಭಾರತೀಯ ತಂತ್ರಜ್ಞರಿಂದ ಹೆಚ್ಚಿನ ಕೌಶಲ್ಯ ಕಲಿಯಬೇಕಾಗಿದೆ ಎಂದು ಅನಿರೂದ್‌ ಹೇಳಿದರು. ಆದರೆ, ಮಾರಿಷಸ್‌ನಲ್ಲಿ ಬೇಡಿಕೆಯಿರುವ ತಂತ್ರಜ್ಞರ ಸಂಖ್ಯೆಯನ್ನು ಅವರು ಬಹಿರಂಗಪಡಿಸಲಿಲ್ಲ .

ಭಾರತದೊಂದಿಗೆ ನಿರಂತರವಾಗಿ ಉತ್ತಮ ದ್ವಿಪಕ್ಷೀಯ ಸಂಬಂಧವನ್ನು ಹೊಂದಲು ಮಾರಿಷಸ್‌ ಬಯಸುತ್ತದೆ. ಮಾರಿಷಸ್‌ನಲ್ಲಿ ಸೈಬರ್‌ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದ್ದು , ಈ ಬಗ್ಗೆ ಪ್ರಧಾನಿ ವಾಜಪೇಯಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಅನಿರೂದ್‌ ಹೇಳಿದರು.

ಹೃತ್ಪೂರ್ವಕ ಸ್ವಾಗತ : ಮಾರಿಷಸ್‌ ಪ್ರಧಾನಿಗಳನ್ನು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲೆ ರಮಾದೇವಿ, ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹಾಗೂ ಇತರೆ ಉನ್ನತ ಅಧಿಕಾರಿಗಳು ಆತ್ಮೀಯ ಸ್ವಾಗತ ಕೋರುವ ಮೂಲಕ ಬರಮಾಡಿಕೊಂಡರು. ಗುರುವಾರ, ಬಿಇಎಲ್‌, ಎಚ್‌ಎಎಲ್‌ ಹಾಗೂ ಇನ್ಫೋಸಿಸ್‌ ಸಂಸ್ಥೆಗಳಿಗೆ ಮಾರಿಷಸ್‌ ಪ್ರಧಾನಿ ಭೇಟಿ ಕೊಡುವ ಕಾರ್ಯಕ್ರಮವಿದೆ.

(ಯುಎನ್‌ಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+